ಕರ್ನಾಟಕ ಚುನಾವಣೆ: ಮತದಾನಕ್ಕೆ ಕ್ಷಣಗಣನೆ, ಮುದ್ರಣ ಮಾಧ್ಯಮಗಳು ಜಾಹೀರಾತು ಪ್ರಕಟಿಸಬಾರದು- ಆಯೋಗ

ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ಮತದಾನಕ್ಕೆ ಮುನ್ನ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯ ಅನುಮತಿಯಿಲ್ಲದೆ ಚುನಾವಣಾ ದಿನದಂದು ಮತ್ತು ಒಂದು ದಿನದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ಮತದಾನಕ್ಕೆ ಮುನ್ನ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯ ಅನುಮತಿಯಿಲ್ಲದೆ ಚುನಾವಣಾ ದಿನದಂದು ಮತ್ತು ಒಂದು ದಿನದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಅಂದರೆ ಇಂದು ಅಂತ್ಯಗೊಳ್ಳಲಿದ್ದು, ರಾಜಕೀಯ ಪಕ್ಷಗಳಿಗೆ ನೀಡಿದ ಸಲಹೆಯಲ್ಲಿ, ಚುನಾವಣಾ ಪ್ರಾಧಿಕಾರವು "ಸ್ವಚ್ಛ ಮತ್ತು ಗಂಭೀರ" ಅಭಿಯಾನಕ್ಕೆ ಒತ್ತು ನೀಡಿದ್ದು, ಚುನಾವಣಾ ಪ್ರಚಾರವು ಅಂತಿಮ ಹಂತ ತಲುಪಿರುವಂತೆಯೇ ಮಹತ್ವದ ಆದೇಶ ನೀಡಿದೆ.

ಪತ್ರಿಕಾ ಸಂಸ್ಥೆಗಳಿಗೂ ಆಯೋಗ ಎಚ್ಚರಿಕೆ
ಇನ್ನು ಪತ್ರಿಕೋದ್ಯಮದ ನಡವಳಿಕೆಗಾಗಿ ಭಾರತೀಯ ಪತ್ರಿಕಾ ಮಂಡಳಿಯ ನಿಯಮಗಳು ತಮ್ಮ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತುಗಳು ಸೇರಿದಂತೆ ಎಲ್ಲಾ ವಿಷಯಗಳಿಗೆ ಸಂಸ್ಛೆಗಳನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಸಂಪಾದಕರಿಗೆ ಪ್ರತ್ಯೇಕ ಪತ್ರದಲ್ಲಿ ಚುನಾವಣಾ ಆಯೋಗವು (EC) ಸ್ಪಷ್ಟಪಡಿಸಿದೆ.

"ಜವಾಬ್ದಾರಿಯನ್ನು ನಿರಾಕರಿಸಿದರೆ, ಇದನ್ನು ಮೊದಲೇ ಸ್ಪಷ್ಟವಾಗಿ ಹೇಳಬೇಕು" ಎಂದು ಆಯೋಗವು ಕರ್ನಾಟಕದ ಪತ್ರಿಕೆಗಳ ಸಂಪಾದಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ರಾಜಕೀಯ ಪಕ್ಷಗಳಿಗೆ ನೀಡಿದ ಸಲಹೆಯು, ಪ್ರಚಾರ ರಹಿತ ಸಮಯದಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಚುನಾವಣಾ ದಿನದಂದು ಮತ್ತು ಮತದಾನದ ದಿನದ ಒಂದು ದಿನದ ಮೊದಲು - ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (MCMC) ಯಿಂದ ಪೂರ್ವ-ಪ್ರಮಾಣೀಕರಿಸಬೇಕು ಎಂದು ಹೇಳಿದೆ.

"ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ಯಾವುದೇ ಇತರ ಸಂಸ್ಥೆಗಳು ಅಥವಾ ವ್ಯಕ್ತಿಗಳು ಚುನಾವಣಾ ದಿನದಂದು ಮತ್ತು ಮತದಾನದ ದಿನಕ್ಕೆ ಒಂದು ದಿನದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು. ಅಂತೆಯೇ ರಾಜಕೀಯ ಜಾಹೀರಾತಿನ ವಿಷಯಗಳನ್ನು ಅವರು ರಾಜ್ಯದ MCMC ಯಿಂದ  ಜಿಲ್ಲಾ ಮಟ್ಟದಲ್ಲಿ ಸಂದರ್ಭಾನುಸಾರ ಪೂರ್ವ-ಪ್ರಮಾಣೀಕರಿಸದಿದ್ದರೆ ಅಂತಹ ಜಾಹಿರಾತುಗಳನ್ನು ಪ್ರಕಟಿಸಬಾರದು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com