ಚುನಾವಣೋತ್ತರ ಸಮೀಕ್ಷೆ: ರಾಜ್ಯದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೂ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ
ಬೆಂಗಳೂರು: ಎಬಿಪಿ/ಸಿ-ವೋಟರ್ ಚುನಾವಣೋತ್ತರ ಸಮೀಕ್ಷೆ ಕರಾವಳಿ ಕರ್ನಾಟಕದ ಕುತೂಹಲಕಾರಿ ಚಿತ್ರಣವನ್ನು ಭವಿಷ್ಯ ನುಡಿದಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಈ ಪ್ರದೇಶದಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ.
ಸಮೀಕ್ಷೆಯ ಪ್ರಕಾರ, ಬಿಜೆಪಿಯು ಈ ಪ್ರದೇಶದ 21 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಇದು 2018 ಕ್ಕಿಂತ ಒಂದು ಸ್ಥಾನ ಕಡಿಮೆ. ಮತ್ತೊಂದೆಡೆ, ಈ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. 2018 ಕ್ಕೆ ಹೋಲಿಸಿದರೆ, ಒಂದು ಸ್ಥಾನವನ್ನು ಗಳಿಸುತ್ತದೆ ಎನ್ನಲಾಗಿದೆ.
ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗಮನಾರ್ಹ ಅಂತರವಿರುವುದನ್ನು ಸೂಚಿಸುತ್ತವೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯ ಪ್ರಬಲ ಅಸ್ತಿತ್ವಕ್ಕೆ ವಿವಿಧ ಅಂಶಗಳು ಕಾರಣವೆಂದು ಹೇಳಬಹುದು. ಇತ್ತೀಚಿನದು ಬಜರಂಗ ದಳದ ಮೇಲೆ ನಿಷೇಧ ಹೇರುವ ಕಾಂಗ್ರೆಸ್ ಚುನಾವಣಾ ಭರವಸೆ. ಇದಲ್ಲದೆ, ಈ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗಳು ಕೇಸರಿ ಪಕ್ಷಕ್ಕೆ ಉತ್ತೇಜನ ನೀಡಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ