ಕಟ್ಟೋಣ ನಾವು 40 ಪರ್ಸೆಂಟ್ ಇಲ್ಲದ ನಾಡೊಂದನ್ನು, ಪ್ರಗತಿ ಪರ ಕರ್ನಾಟಕವನ್ನು!: ರಾಹುಲ್ ಗಾಂಧಿ ಟ್ವೀಟ್

ಕರ್ನಾಟಕದಲ್ಲಿ ಪ್ರಗತಿಪರ ಮತ್ತು ಶೇ 40ರಷ್ಟು ಕಮಿಷನ್ ಮುಕ್ತ ರಾಜ್ಯವನ್ನು ನಿರ್ಮಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಕರ್ನಾಟಕ ಜನತೆಗೆ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕರ್ನಾಟಕದಲ್ಲಿ ಪ್ರಗತಿಪರ ಮತ್ತು ಶೇ 40ರಷ್ಟು ಕಮಿಷನ್ ಮುಕ್ತ ರಾಜ್ಯವನ್ನು ನಿರ್ಮಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಕರ್ನಾಟಕ ಜನತೆಗೆ ಮನವಿ ಮಾಡಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ತನ್ನ ದಕ್ಷಿಣ ಕೋಟೆಯನ್ನು ಉಳಿಸಿಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿಗೆ ಗೇಟ್ ಪಾಸ್ ನೀಡಲು ಕಾದಾಡುತ್ತಿದೆ. ರಾಜ್ಯದಲ್ಲಿ ಬುಧವಾರದಂದು ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗಾಂಧಿ, "ಕರ್ನಾಟಕದ 5 ಖಾತ್ರಿಗಳಿಗಾಗಿ, ಮಹಿಳಾ ಹಕ್ಕುಗಳಿಗಾಗಿ, ಯುವಕರ ಉದ್ಯೋಗಕ್ಕಾಗಿ, ಬಡವರ ಅಭ್ಯುದಯಕ್ಕಾಗಿ ಮತದಾನ. ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ" ಎಂದು ಹೇಳಿದ್ದಾರೆ. ಶೇ. 40 ರಷ್ಟು ಕಮಿಷನ್ ರಹಿತ, ಪ್ರಗತಿಪರ ಕರ್ನಾಟಕವನ್ನು ಒಟ್ಟಾಗಿ ನಿರ್ಮಿಸೋಣ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 'ಕಾಂಗ್ರೆಸ್ ವಿನ್ನಿಂಗ್ 150' ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಅವರು ಕಾಂಗ್ರೆಸ್‌ನ ಐದು ಭರವಸೆಗಳನ್ನು ಒಳಗೊಂಡ ಗ್ರಾಫಿಕ್ ಅನ್ನು ಸಹ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ವ್ಯಾಪಕ ಪ್ರಚಾರ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಬದಲಾವಣೆಗೆ ಮತ ನೀಡುವಂತೆ ರಾಜ್ಯದ ಜನತೆಗೆ ಮನವಿ ಮಾಡಿದರು.

ವಿಧಾನಸಭಾ ಚುನಾವಣೆಯ ಮತದಾನ ಪ್ರಾರಂಭವಾಗುತ್ತಿದ್ದಂತೆ, ಕರ್ನಾಟಕದಲ್ಲಿರುವ ನನ್ನ ಎಲ್ಲಾ ಸಹೋದರ ಸಹೋದರಿಯರು ಅಲ್ಲಿಗೆ ಹೋಗಿ ಬದಲಾವಣೆಗಾಗಿ ಮತ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ನಿಮ್ಮ ಜೀವನವನ್ನು ಉತ್ತಮಗೊಳಿಸಲು ದಣಿವರಿಯಿಲ್ಲದೆ ಕೆಲಸ ಮಾಡುವ ಬಲಿಷ್ಠ, ಅಭಿವೃದ್ಧಿ ಆಧಾರಿತ ಮತ್ತು ಸಮರ್ಥ ಸರ್ಕಾರವನ್ನು ತರಲು ಇದು ಸಮಯ ಎಂದು ಅವರು ಟ್ವೀಟ್ ಮಾಡಿದ್ದಾರೆ. "ಕಾಂಗ್ರೆಸ್ ವಿನ್ನಿಂಗ್ 150" ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. 224 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಮುಖ್ಯವಾಗಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜನತಾದಳ (ಜಾತ್ಯತೀತ) ನಡುವೆ ತ್ರಿಕೋನ ಸ್ಪರ್ಧೆಯಾಗಿದೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com