ಆಭರಣ ಮಳಿಗೆಗೆ ನುಗ್ಗಿದ ನೀರು
ಆಭರಣ ಮಳಿಗೆಗೆ ನುಗ್ಗಿದ ನೀರು

ಬೆಂಗಳೂರು: ಆಭರಣ ಮಳಿಗೆಗೆ ಮಳೆ ನೀರು ನುಗ್ಗಿ ಕೋಟ್ಯಾಂತರ ರೂ ನಷ್ಟ, ನೀರಿನಲ್ಲಿ ಕೊಚ್ಚಿ ಹೋದ ಚಿನ್ನ, ಬೆಳ್ಳಿ ಒಡವೆ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಚಿನ್ನಾಭರಣ ಮಳಿಗೆ​ಗೆ ಮಳೆ ನೀರು ನುಗ್ಗಿದ್ದು ಎರಡೂವರೆ ಕೋಟಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಚಿನ್ನಾಭರಣ ಮಳಿಗೆ​ಗೆ ಮಳೆ ನೀರು ನುಗ್ಗಿದ್ದು ಎರಡೂವರೆ ಕೋಟಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ನಿನ್ನೆ ಅಂದರೆ ಮೇ 21ರ ಸಂಜೆ ಸುರಿದ ಮಳೆ ಭಾರೀ ಅನಾಹುತಗಳನ್ನು ತಂದೊಡ್ಡಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಮಳೆ ಇದೀಗ ಮಲ್ಲೇಶ್ವರಂನ ಚಿನ್ನಾಭರಣ ವ್ಯಾಪಾರಿಗಳಿಗೆ 2.5 ಕೋಟಿ ರೂ ನಷ್ಟ ತಂದಿಟ್ಟಿದೆ. 

ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಮಲ್ಲೇಶ್ವರಂ ನ ಸಂಪಿಗೆ ರಸ್ತೆಯಲ್ಲಿರುವ ನಿಹಾನ್ ಆಭರಣ ಮಳಿಗೆ​ಗೆ ಮಳೆ ನೀರು ನುಗ್ಗಿದ್ದು, ಈ ವೇಳೆ ಮಳಿಗೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಮಳೆ ನೀರು ಮಳಿಗೆಗೆ ನುಗ್ಗಿದ ವೇಳೆ ಸಿಬ್ಬಂದಿಗಳು ಇದ್ದರಾದರೂ ಆಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗದಂತೆ ತಡೆಯಲೆತ್ನಿಸಿದ್ದಾರೆ. 

ಆದರೆ ಹರಸಾಹಸದ ಹೊರತಾಗಿಯೂ ಸಾಕಷ್ಟು ಆಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಚಿನ್ನಾಭರಣ ಮಳಿಗೆ​ಗೆ ಮಳೆ ನೀರು ನುಗ್ಗಿ ಎರಡೂವರೆ ಕೋಟಿ ಲಾಸ್ ಆಗಿದ್ದು ಶಾಪ್ ಮಾಲಕಿ ಕಣ್ಣೀರಿಡುವಂತಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com