ಭಾಗಶಃ ಕೆಡವಿದ್ದ ಕಟ್ಟಡಕ್ಕೆ ನೀರಿನ ಬಿಲ್, ನೈರ್ಮಲ್ಯ ಶುಲ್ಕ!: ಪರಿಹಾರ ನೀಡಲು ಬಿಡಬ್ಲ್ಯುಎಸ್ಎಸ್ ಬಿಗೆ ಸೂಚನೆ

ಭಾಗಶಃ ಇದ್ದ ಕಟ್ಟಡಕ್ಕೆ ನೀರಿನ ಬಿಲ್ ಹಾಗೂ ನೈರ್ಮಲ್ಯ ಶುಲ್ಕ ವಿಧಿಸಿದ್ದ ಬಿಡಬ್ಲ್ಯುಎಸ್ಎಸ್ ಬಿ ಈಗ ಪೇಚಿಗೆ ಸಿಲುಕಿದೆ.
ಬಿಡಬ್ಲ್ಯುಎಸ್ ಎಸ್ ಬಿ
ಬಿಡಬ್ಲ್ಯುಎಸ್ ಎಸ್ ಬಿ

ಬೆಂಗಳೂರು: ಭಾಗಶಃ ಇದ್ದ ಕಟ್ಟಡಕ್ಕೆ ನೀರಿನ ಬಿಲ್ ಹಾಗೂ ನೈರ್ಮಲ್ಯ ಶುಲ್ಕ ವಿಧಿಸಿದ್ದ ಬಿಡಬ್ಲ್ಯುಎಸ್ಎಸ್ ಬಿ ಈಗ ಪೇಚಿಗೆ ಸಿಲುಕಿದೆ. ಸಂತ್ರಸ್ತ ಗ್ರಾಹಕನಿಗೆ 10,000 ರೂಪಾಯಿ ಪರಿಹಾರ ಹಾಗೂ 10,000 ರೂಪಾಯಿ ಕಾನೂನು ಹೋರಾಟದ ವೆಚ್ಚವನ್ನು ಭರಿಸಿ, ಪಡೆದಿದ್ದ ಶುಲ್ಕವನ್ನೂ ವಾಪಸ್ ನೀಡುವಂತೆ ಗ್ರಾಹಕ ಆಯೋಗ ಬಿಡಬ್ಲ್ಯುಎಸ್ಎಸ್ ಬಿಗೆ ಸೂಚನೆ ನೀಡಿದೆ. 

ಜೆಪಿ ನಗರದ ಸಾರಕ್ಕಿ ಗ್ರಾಮದಲ್ಲಿ 2012 ರಲ್ಲಿ ಬಿಎಂಆರ್ ಸಿಎಲ್ ಯೋಜನೆಗಾಗಿ ಮನೆಯೊಂದನ್ನು ಭಾಗಶಃ ಕೆಡವಲಾಗಿತ್ತು. ಆಗಿನಿಂದ ಸಂತ್ರಸ್ತ ವ್ಯಕ್ತಿ ಈ ಕಟ್ಟಡವನ್ನು ಬಳಸುತ್ತಿರಲಿಲ್ಲ. ಆದರೂ ಬಿಡಬ್ಲ್ಯುಎಸ್ಎಸ್ ಬಿ ನೀರಿನ ಬಿಲ್ ಹಾಗೂ ನೈರ್ಮಲ್ಯ ಶುಲ್ಕವನ್ನು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅಜ್ಜಪ್ಪ ಎಂಬ ವ್ಯಕ್ತಿ 3ನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಏತನ್ಮಧ್ಯೆ, BWSSB ಒದಗಿಸಿದ ನೀರಿನ ಮೀಟರ್ ಕಾಣೆಯಾಗಿದೆ ಮತ್ತು ಅವರು ನ್ಯಾಯವ್ಯಾಪ್ತಿಯ ಪೊಲೀಸರಿಗೆ ದೂರು ನೀಡಿದ್ದರು.  

ದೂರುದಾರರು ಫೆಬ್ರವರಿ 2015 ರಲ್ಲಿ BWSSBಗೆ ಬಿಲ್‌ ನೀಡದಂತೆ ಗ್ರಾಹಕರು ಮನವಿ ಮಾಡಿದ್ದರು. ಹಲವು ಬಾರಿ ಮನವಿ ಮಾಡಿದ ನಂತರ, BWSSB ಅಧಿಕಾರಿಗಳು ಬಿಲ್‌ಗಳನ್ನು ಪಾವತಿಸಲು ಸಲಹೆ ನೀಡಿದ್ದರು ಮತ್ತು ಪಾವತಿಸಲಾಗಿರುವ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಯಾವುದೂ ಭರವಸೆಯ ಪ್ರಕಾರ ನಡೆಯಲಿಲ್ಲ.

ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಕೆ.ಶಿವರಾಮು ಹಾಗೂ ಸದಸ್ಯರಾದ ಕೆ.ಎಸ್.ರಾಜು ಮತ್ತು ರೇಖಾ ಸಾಯಣ್ಣನವರ್ ಅವರು 2012ರ ಮಾರ್ಚ್ 16ರ ನಂತರ ದೂರುದಾರರಿಂದ ವಸೂಲಾದ ಮೊತ್ತವನ್ನು ಮರುಪಾವತಿಸಲು ಹಾಗೂ ನೀರಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಬಿಲ್ ಗಳ ಪಾವತಿ ಮಾಡದ ಹಿನ್ನೆಲೆಯಲ್ಲಿ ಒಳಚರಂಡಿ ಸಂಪರ್ಕ ಏಪ್ರಿಲ್ 2022ರ ನಂತರ ಕಡಿತಗೊಂಡಿರುವುದರ ಬಗ್ಗೆ ಮತ್ತು ದೂರುದಾರರು ಬರೆದಿರುವ ಮಾರ್ಚ್ 16, 2022 ರ ಪತ್ರದ ಆಧಾರದ ಮೇಲೆ ಅವರು ಏಕೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂಬ ಬಗ್ಗೆ ವಿಚಾರಿಸಿದರು.

BWSSB ಕಡೆಯಿಂದ ಸಂಪೂರ್ಣ ನಿರ್ಲಕ್ಷ್ಯ ಕಂಡುಬಂದಿದೆ. ಮೊತ್ತವನ್ನು ಠೇವಣಿ ಮಾಡುವ ಮೂಲಕ ದೂರುದಾರರು BWSSB ಸೂಚನೆಗಳನ್ನು ಪಾಲಿಸಿದರು. ಆದರೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ ವರ್ತನೆ. ಸೇವೆಯ ಕೊರತೆಯಾಗಿದೆ ಎಂದು ಆಯೋಗ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com