ಬೆಂಗಳೂರು: ಬಸವಣ್ಣ, ಶಂಕರಾಚಾರ್ಯ, ಭಗವಾನ್ ಮಹಾವೀರ, ಕೆಂಪೇಗೌಡ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶ್ರೀಕೃಷ್ಣ ಸೇರಿದಂತೆ 31 ಪ್ರಮುಖರ ಜಯಂತಿಗಳನ್ನು ರಾಜ್ಯದಾದ್ಯಂತ ಅದ್ಧೂರಿಯಾಗಿ ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆಯ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಯಂತಿಗಳನ್ನು ಆಯೋಜಿಸಲು 5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ (ಡಿಸಿ) ಸರ್ಕಾರ ಅಧಿಕಾರ ನೀಡಿದೆ.
ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಯಂತಿಗಳನ್ನು ಆಯೋಜಿಸಲು 50 ಸಾವಿರ ಹಾಗೂ ತಾಲೂಕು ಮಟ್ಟದಲ್ಲಿ 20 ಸಾವಿರ ರೂ.ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಬಹುದು.
Advertisement