ಹಿಜಾಬ್ ನಿಷೇಧ ಹಿಂಪಡೆಯುವಂತೆ ಅಮ್ನೆಸ್ಟಿ ಇಂಡಿಯಾ ಆಗ್ರಹ: ಪ್ರತಿಕ್ರಿಯಿಸಲು ಡಿಕೆಶಿ ನಕಾರ

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರ ಮೇಲೆ ಹೇರಲಾಗಿರುವ ನಿಷೇಧ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಮ್ನೆಸ್ಟಿ ಇಂಡಿಯಾ ಆಗ್ರಹಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರ ಮೇಲೆ ಹೇರಲಾಗಿರುವ ನಿಷೇಧ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಮ್ನೆಸ್ಟಿ ಇಂಡಿಯಾ ಆಗ್ರಹಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅಮ್ನೆಸ್ಟಿ ಇಂಡಿಯಾ, ರಾಜ್ಯ ಸರ್ಕಾರವು ಮಾನವ ಹಕ್ಕುಗಳಿಗೆ ಆದ್ಯತೆ ನೀಡಬೇಕು. ಅದನ್ನು ಎತ್ತಿಹಿಡಿಯಬೇಕು. ಆದ್ಯತೆಯ ಮೇಲೆ ಸರ್ಕಾರ ಕಾರ್ಯನಿರ್ವಹಿಸಬೇಕೆಂದು ಹೇಳಿದೆ.

ಅಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರ ಮೇಲೆ ಹೇರಲಾಗಿರುವ ನಿಷೇಧವನ್ನು ಕೂಡಲೇ ಹಿಂಪಡೆಯುವಂತೆಯೂ ಆಗ್ರಹಿಸಿದೆ.

ಹಿಜಾಬ್ ನಿಷೇಧವು ಮುಸ್ಲಿಂ ಹುಡುಗಿಯರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ಕುರಿತು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ, ಸಮಾಜದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವ ಸಾಮರ್ಥ್ಯವನ್ನು ಇದು ತಡೆಯುತ್ತದೆ ಎಂದು ತಿಳಿಸಿದೆ.

ಜಾನುವಾರುಗಳ ಸಂರಕ್ಷಣೆ ಕಾಯಿದೆ 2020, ಧಾರ್ಮಿಕ ಸ್ವಾತಂತ್ರ್ಯದ ಕರ್ನಾಟಕ ರಕ್ಷಣೆಯ ಹಕ್ಕು ಮಸೂದೆ 2022ರಲ್ಲಿನ ತಾರತಮ್ಯದ ನಿಬಂಧನೆಗಳನ್ನು ಪರಿಶೀಲಿಸಬೇಕು ಮತ್ತು ರದ್ದುಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ನಡುವೆ ಅಮ್ನೆಸ್ಟಿ ಇಂಡಿಯಾದ ಆಗ್ರಹ ಕುರಿತು ಪ್ರತಿಕ್ರಿಯೆ ನೀಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com