ಏಕೈಕ ಸೇತುವೆ ಉಳಿಸಲು ಸಿದ್ದಾಪುರದ ಅಣಲೆಬೈಲು ಗ್ರಾಮಸ್ಥರ ಹೋರಾಟ!

ಕನಿಷ್ಠ 6 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆಯನ್ನು ಉಳಿಸಲು ಅಣಲೆಬೈಲ್ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. 2020ರಿಂದ ಸೇತುವೆಯ ಪಿಲ್ಲರ್‌ಗಳ ಸುತ್ತಲೂ ಮರಳಿನ ಚೀಲಗಳನ್ನು ಹಾಕಿ ಅದನ್ನು ಉಳಿಸಲು ಹೆಣಗಾಡುತ್ತಿದ್ದಾರೆ. 
ಸೇತುವೆ ಉಳಿಸಲು ಮರಳಿನ ಚೀಲ ಹಾಕಿರುವುದು
ಸೇತುವೆ ಉಳಿಸಲು ಮರಳಿನ ಚೀಲ ಹಾಕಿರುವುದು

ಸಿದ್ದಾಪುರ(ಉತ್ತರ ಕನ್ನಡ): ಕನಿಷ್ಠ 6 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆಯನ್ನು ಉಳಿಸಲು ಅಣಲೆಬೈಲ್ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. 2020ರಿಂದ ಸೇತುವೆಯ ಪಿಲ್ಲರ್‌ಗಳ ಸುತ್ತಲೂ ಮರಳಿನ ಚೀಲಗಳನ್ನು ಹಾಕಿ ಅದನ್ನು ಉಳಿಸಲು ಹೆಣಗಾಡುತ್ತಿದ್ದಾರೆ. 

2008ರಲ್ಲಿ ಅಣಲೆಬೈಲ್ ನಲ್ಲಿ ನಿರ್ಮಿಸಲಾಗಿದ್ದ ಸೇತುವೆಯು ಮಳೆಗಾಲದಲ್ಲಿ ಈ ಭಾಗದಲ್ಲಿ ಸುರಿದ ಭಾರಿ ಮಳೆಗೆ ಈಗ ಶಿಥಿಲಾವಸ್ಥೆ ತಲುಪಿದೆ. ಸೇತುವೆ ನಿರ್ಮಾಣಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದ ಆಮೆಗಾರು, ನೆಡೇಮನೆ, ಕ್ಯಾತನಮನೆ, ಹುಳಜಡ್ಡಿ, ದಸಬನಕಲ್ ಹಾಗೂ ಸಮೀಪದ ಗ್ರಾಮಗಳ ಜನರು ಇದನ್ನು ಉಳಿಸಿಕೊಳ್ಳಲು ಈಗ ಹೋರಾಡುತ್ತಿದ್ದಾರೆ. 

2005ರಲ್ಲಿ ಅಘನಾಶಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಅಲ್ಲಿಯವರೆಗೂ ಗ್ರಾಮಸ್ಥರು ಶಿರಸಿ ಮತ್ತಿತರ ಕಡೆಗಳಿಗೆ ತೆರಳಲು ಅರೆಕಾದ ಟ್ರಂಕ್‌ಗಳಿಂದ ಮಾಡಿದ ತಾತ್ಕಾಲಿಕ ಸೇತುವೆಯನ್ನು ಬಳಸುತ್ತಿದ್ದರು. ಬಳಿಕ ತಂತಿಗಳನ್ನು ಬಳಸಿ ನೇತಾಡುವ ಸೇತುವೆ ನಿರ್ಮಿಸಿದರೂ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ನಾವು ಅದನ್ನು 2006ರಲ್ಲಿ ಮತ್ತು 2007ರಲ್ಲಿ ಪುನರ್ನಿರ್ಮಿಸಿದೆವು ಎಂದು ಅಣಲೆಬೈಲ್ ನ ಎಂಎನ್ ಹೆಗಡೆ ಹೇಳುತ್ತಾರೆ. 

ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದಾಗ ಸೇತುವೆ ನಿರ್ಮಾಣಕ್ಕೆ 7 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಯಿತು. 2015 ಮತ್ತು 2016ರಲ್ಲಿ ಮಾನ್ಸೂನ್ ಸಮಯದಲ್ಲಿ ಸೇತುವೆ ಕೆಲ ದಿನ ಮುಳುಗಿ ಹೋಗಿತ್ತು. ಇದರಿಂದಾಗಿ ಸೇತುವೆಯ ಬೇಲಿಗಳು ಮತ್ತು ತಡೆಗೋಡೆಗಳು ಹಾನಿಗೊಳಗಾಗಿವೆ ಎಂದು ಹೇಳುತ್ತಾರೆ. 

2020ರಲ್ಲಿ ಸೇತುವೆಯು ಹಲವಾರು ವಾರಗಳವರೆಗೆ ಮುಳುಗಿದಾಗ ಕೆಟ್ಟುಹೋದವು. ಪಿಲ್ಲರ್‌ಗಳಲ್ಲಿ ದೊಡ್ಡ ಬಿರುಕುಗಳು ಉಂಟಾದವು. ಆಗ ಗ್ರಾಮಸ್ಥರು ಸೇತುವೆಯ ಕಂಬಗಳನ್ನು ಮರಳಿನ ಚೀಲಗಳಿಂದ ಬಲಪಡಿಸುವ ಮೂಲಕ ಉಳಿಸಲು ನಿರ್ಧರಿಸಿದರು. ಕಂಬಗಳ ಸುತ್ತ 400ಕ್ಕೂ ಹೆಚ್ಚು ಮರಗಳಿನ ಚೀಲಗಳನ್ನು ಹಾಕಿದ್ದಾರೆ ಎಂದು ಸೇತುವೆಯ ಶಿಥಿಲಾವಸ್ಥೆ ಪರಿಸ್ಥಿತಿಯನ್ನು ವಿವರಿಸಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಆದಷ್ಟು ಬೇಗನೆ ಗಮನಹರಿಸಿದರೆ ಉತ್ತಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com