ತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್‌ಪ್ರೆಸ್‌: ಕೋಚ್‌ಗಳಿಂದ ಬೇರ್ಪಟ್ಟ ಎಂಜಿನ್; ಕೆಲಕಾಲ ಉದ್ವಿಗ್ನ ಸ್ಥಿತಿ

ತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್‌ಪ್ರೆಸ್‌ನ ಇಂಜಿನ್ ಬೋಗಿಗಳಿಂದ ನಿನ್ನೆ ಶುಕ್ರವಾರ ಬೆಳಗ್ಗೆ ಬಿಳಕಿಯಲ್ಲಿ ಬೇರ್ಪಟ್ಟು ಚಲಿಸಲು ಪ್ರಾರಂಭಿಸಿ ಉದ್ವಿಗ್ನ ವಾತಾವರಣ ಸ್ಥಿತಿ ನಿರ್ಮಾಣವಾಯಿತು. ಭದ್ರಾವತಿ ತಾಲೂಕಿನ ಕಡಕ್ಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸಿದ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅನಾಹುತವಾಗಿಲ್ಲ.
ಕೋಚ್ ನಿಂದ ಬೇರ್ಪಟ್ಟ ಎಂಜಿನ್
ಕೋಚ್ ನಿಂದ ಬೇರ್ಪಟ್ಟ ಎಂಜಿನ್

ಶಿವಮೊಗ್ಗ: ತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್‌ಪ್ರೆಸ್‌ನ ಇಂಜಿನ್ ಬೋಗಿಗಳಿಂದ ನಿನ್ನೆ ಶುಕ್ರವಾರ ಬೆಳಗ್ಗೆ ಬಿಳಕಿಯಲ್ಲಿ ಬೇರ್ಪಟ್ಟು ಚಲಿಸಲು ಪ್ರಾರಂಭಿಸಿ ಉದ್ವಿಗ್ನ ವಾತಾವರಣ ಸ್ಥಿತಿ ನಿರ್ಮಾಣವಾಯಿತು. ಭದ್ರಾವತಿ ತಾಲೂಕಿನ ಕಡಕ್ಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸಿದ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅನಾಹುತವಾಗಿಲ್ಲ.

ನಿನ್ನೆ ಬೆಳಗ್ಗೆ 7.10ಕ್ಕೆ ತಾಳಗುಪ್ಪದಿಂದ ಶಿವಮೊಗ್ಗ ಮುಖ್ಯ ರೈಲು ನಿಲ್ದಾಣಕ್ಕೆ ಆಗಮಿಸಿದ ರೈಲು 7.15ಕ್ಕೆ ಭದ್ರಾವತಿ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತು.  ಬಿಲಾಕಿ ತಲುಪಿದ ನಂತರ, ಇಂಜಿನ್ ಇದ್ದಕ್ಕಿದ್ದಂತೆ ಕೋಚ್‌ಗಳಿಂದ ಬೇರ್ಪಟ್ಟು ಮುಂದೆ ಚಲಿಸಿತು. ಕೂಡಲೇ ಲೊಕೊ ಪೈಲಟ್‌ ಎಂಜಿನ್‌ ಸ್ಥಗಿತಗೊಳಿಸಿದರು.

ಆನ್‌ಬೋರ್ಡ್ ಸಿಬ್ಬಂದಿ ತಕ್ಷಣ ಎಂಜಿನ್ ನ್ನು ಕೋಚ್‌ಗಳೊಂದಿಗೆ ಮರುಸಂಪರ್ಕಿಸಿದರು ಇದರಿಂದ ಭಾರೀ ಅನಾಹುತವಾಗುವುದು ತಪ್ಪಿತು ಎಂದು ಸೌತ್ ವೆಸ್ಟರ್ನ್ ರೈಲ್ವೇ ಮೂಲಗಳು ತಿಳಿಸಿವೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ತನಿಖೆ ನಡೆಯುತ್ತಿದೆ. 

ತರುವಾಯ ರೈಲು ಭದ್ರಾವತಿಗೆ ತೆರಳಿತು, ಬೆಳಗ್ಗೆ 8.46ಕ್ಕೆ ತನ್ನ ಸ್ಥಾನವನ್ನು ತಲುಪಿದ ರೈಲು ನಿಗದಿತ ಸಮಯಕ್ಕಿಂತ 1 ಗಂಟೆ 21 ನಿಮಿಷ ತಡವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com