ಆರ್ಗ್ಯಾನಿಕ್​ ಚೀಲದ ಹೆಸರಿನಲ್ಲಿ ವಂಚನೆ: ಕೋಟಿ ಕೋಟಿ ವಂಚಿಸಿದ್ದ ಎನ್ವಿ ಗ್ರೀನ್ ಬಯೋಟೆಕ್ ಮಾಲೀಕನ ವಿರುದ್ಧ FIR

ಆರ್ಗ್ಯಾನಿಕ್​ ಚೀಲದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಎನ್ವಿ ಗ್ರೀನ್ ಬಯೋಟೆಕ್ ಮಾಲೀಕ ಅಶ್ವತ್ಥ್ ಹೆಗ್ಡೆ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.
ಅಶ್ವತ್ಥ್ ಹೆಗ್ಡೆ
ಅಶ್ವತ್ಥ್ ಹೆಗ್ಡೆ

ಬೆಂಗಳೂರು: ಆರ್ಗ್ಯಾನಿಕ್​ ಚೀಲದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಎನ್ವಿ ಗ್ರೀನ್ ಬಯೋಟೆಕ್ ಮಾಲೀಕ ಅಶ್ವತ್ಥ್ ಹೆಗ್ಡೆ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. 

ಉದ್ಯಮಿ ನೀಲಿಮಾ ಎಂಬುವರು ಅಶ್ವತ್ಥ್ ಹೆಗ್ಡೆ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಶ್ವತ್ಥ್ ಹೆಗ್ಡೆ ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್​ ಚೀಲ ಕಂಡು ಹಿಡಿದಿದ್ದಾಗಿ ನಂಬಿಸಿದ್ದರು. ಇದು ಬಿಸಿ ನೀರಿನಲ್ಲೂ ಕರಗುತ್ತದೆ ಎಂದು ಹೇಳಿದ್ದರು. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ ಹಾಗೂ ಕಾರ್ಮಿಕರನ್ನು ನೀಡುವುದಾಗಿ ಹೇಳಿದ್ದರು ಎಂದು ನೀಲಿಮಾ ದೂರಿನಲ್ಲಿ ತಿಳಿಸಿದ್ದಾರೆ.

ಮೊದಲ ಹಂತವಾಗಿ 74 ಕೋಟಿ ರೂಪಾಯಿ ಹಣ ಪಡೆದಿದ್ದರು. ನಂತರ 5 ಲಕ್ಷ ರುಪಾಯಿ ಮೌಲ್ಯದ ಯಂತ್ರ ಕೊಟ್ಟು ಅಶ್ವತ್ಥ್ ಮೋಸ ಮಾಡಿದ್ದಾರೆ. ಇನ್ನು ಆರ್ಗ್ಯಾನಿಕ್ ಬ್ಯಾಗ್ ತಯಾರಿಕೆಗೆ ಕಚ್ಚಾ ವಸ್ತು ನೀಡಲಿಲ್ಲ. ಇನ್ನು ಅನುಭವವಿಲ್ಲದ ಕಾರ್ಮಿಕರನ್ನು ನೀಡಿದ್ದರು ಎಂದು ನೀಲಿಮಾ ಆರೋಪಿಸಿದ್ದಾರೆ. 

ನೀಲಿಮಾ ನೀಡಿದ ದೂರಿನ ಆಧಾರದ ಮೇಲೆ ಅಶ್ವತ್ಥ್ ಹೆಗ್ಡೆ ವಿರುದ್ಧ ಅಶೋಕನಗರ ಪೊಲೀಸರು ಐಪಿಸಿ ಸೆಕ್ಷನ್ 406, 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com