10 ಸಾವಿರ ರೂ. ಠೇವಣಿ, ಪರವಾನಗಿ: ಅಪಾರ್ಟ್ ಮೆಂಟ್ ಅಸೋಸಿಯೇಷನ್ ಹೊಸ ನಿಯಮಗಳಿಂದ ಪ್ರಾಣಿಪ್ರಿಯರು ಗರಂ!

ಉದ್ಯಾನನಗರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ಮಹಾವೀರ್ ಅಪಾರ್ಟ್‌ಮೆಂಟ್ ನಲ್ಲಿ ಕಳೆದ ವಾರ ನಿವಾಸಿಗಳಿಗೆ ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಲಾಗಿತ್ತು. ಸಾಕುಪ್ರಾಣಿಗಳನ್ನು ಹೊಂದಿರುವ ನಿವಾಸಿಗಳು 10,000 ರೂಪಾಯಿ ಠೇವಣಿ ಇಡಬೇಕೆಂದು ಅದರಲ್ಲಿ ಸೂಚನೆಯಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ಮಹಾವೀರ್ ಅಪಾರ್ಟ್‌ಮೆಂಟ್ ನಲ್ಲಿ ಕಳೆದ ವಾರ ನಿವಾಸಿಗಳಿಗೆ ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಲಾಗಿತ್ತು. ಸಾಕುಪ್ರಾಣಿಗಳನ್ನು ಹೊಂದಿರುವ ನಿವಾಸಿಗಳು 10,000 ರೂಪಾಯಿ ಠೇವಣಿ ಇಡಬೇಕೆಂದು ಅದರಲ್ಲಿ ಸೂಚನೆಯಿತ್ತು. ಅಲ್ಲದೆ ಮುಂಜಾನೆ 6 ರಿಂದ 7 ಗಂಟೆಯವರೆಗೆ, ಮಧ್ಯಾಹ್ನ 1 ರಿಂದ 2 ಮತ್ತು ರಾತ್ರಿ 10ರಿಂದ 11 ಗಂಟೆಯವರೆಗೆ ಸಾಕುಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗಬಹುದು ಎಂದು ಸಮಯ ನಿರ್ಬಂಧ ಹಾಕಲಾಗಿತ್ತು. 

ಸಾಕುಪ್ರಾಣಿಗಳನ್ನು ಹೊಂದಿರುವ ಅಪಾರ್ಟ್ ಮೆಂಟ್ ಮಾಲೀಕರು ಪರವಾನಗಿ ಪಡೆಯಬೇಕು ಮತ್ತು ತಮ್ಮ ಸಾಕು ಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿತ್ತು. ಅಪಾರ್ಟ್ ಮೆಂಟಿನ ನಿವಾಸಿಗಳ ಹಿತರಕ್ಷಣೆಗೆ ಇದನ್ನು ಮಾಡಲಾಗಿದೆ ಎಂದು ಇಟ್ಟಿನ ಮಹಾವೀರ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಹೇಳುತ್ತಾರೆ. 

ಈ ಆಂತರಿಕ ಆದೇಶ ಹಲವಾರು ಸಾಕುಪ್ರಾಣಿ ಪ್ರೇಮಿಗಳ ಸೋಷಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ ವೈರಲ್ ಆಗಿದ್ದು, ಇದು ಅನೇಕರಿಗೆ ಅಸಮಾಧಾನವನ್ನುಂಟು ಮಾಡಿದೆ. ಒಬ್ಬ ಶ್ವಾನ ಪೋಷಕರಾದ ಗ್ರೆನಾಲ್ಡ್ ಅಲ್ಮೇಡಾ, ಈ ಆದೇಶ ನಿಜವೇ, ನಾಯಿಯ ಮಾಲೀಕರಿಗೆ ಇದರಿಂದ ತೊಂದರೆಯಾಗುತ್ತದೆ. ಇಂತಿಷ್ಟೇ ಹೊತ್ತಿಗೆ ನಾಯಿಗಳ ಜೈವಿಕ ಪ್ರಕ್ರಿಯೆಗೆ ಹೊರಗೆ ಕರೆದುಕೊಂಡು ಹೋಗಬೇಕೆಂಬ ನಿಯಮ ನಾಯಿಗಳಿಗೆ ಸಮಸ್ಯೆಯನ್ನುಂಟುಮಾಡುತ್ತದೆ ಎಂದರು. 

ಸಾಕುಪ್ರಾಣಿಗಳನ್ನು ಸಾಕಲು 10 ಸಾವಿರ ರೂಪಾಯಿ ಠೇವಣಿ ಇಡಬೇಕೆಂಬ ಆದೇಶ ಸರಿಯೇ ಸಾಕುಪ್ರಾಣಿಗಳಿಗೆ ತೋರಿಸುವ ಪ್ರೀತಿ, ದಯೆ ಇಷ್ಟೊಂದು ದುಬಾರಿಯೇ, ಇಲ್ಲಿ "ಸಾಮರಸ್ಯದ ಜೀವನ ಪರಿಸರ"ದ ಹಿತಾಸಕ್ತಿ ಎಲ್ಲಿದೆ ಎಂದು ಕೇಳಿದರು.

ಸಿಜೆ ಮೆಮೋರಿಯಲ್ ಟ್ರಸ್ಟ್‌ನ ಪ್ರಿಯಾ ಚೆಟ್ಟಿ-ರಾಜಗೋಪಾಲ್, “ಸಾಕುಪ್ರಾಣಿಗಳಿಗೆ ಠೇವಣಿ ಇಡಬೇಕೆಂದು ಹೇಳುವುದು ಕಾನೂನುಬದ್ಧವಲ್ಲ. ಸುತ್ತೋಲೆಯು ಎಷ್ಟೇ ನಯವಾಗಿ ಹೇಳಿದರೂ, ಬಿಬಿಎಂಪಿಯಿಂದ ಅಂಗೀಕರಿಸದ ಕಾರಣ ಅವರು ಠೇವಣಿ ಅಥವಾ ದಂಡವನ್ನು ಪರವಾನಗಿಗೆ ಒತ್ತಾಯಿಸುವಂತಿಲ್ಲ. ಅಲ್ಲದೆ, ಅವರು ಉಲ್ಲೇಖಿಸುವ ನೋಂದಣಿ ಫಾರ್ಮ್ ನ್ನು ಪರಿಶೀಲಿಸುವ ಅಗತ್ಯವಿದೆ ಎನ್ನುತ್ತಾರೆ.

ಇಲ್ಲಿ ಅಪಾರ್ಟ್ ಮೆಂಟ್ ಕಮಿಟಿ ಮತ್ತು ನಿವಾಸಿಗಳ ನಡುವೆ ಚರ್ಚೆಯ ಅಗತ್ಯವಿದೆ. ಸಾಕುಪ್ರಾಣಿಗಳಿಗೆ ಹೊರಾಂಗಣ ಪ್ರವೇಶದ ಅಗತ್ಯವಿರುವುದರಿಂದ ಇದನ್ನು ವಿಧಿಸಲಾಗದು. ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಸಾರ್ವಜನಿಕವಾಗಿ ತಾರದೆ ಇನ್ನೊಬ್ಬರಿಗೆ ತೊಂದರೆ ನೀಡದಂತೆ ನೋಡಿಕೊಳ್ಳಬೇಕು. ನಮ್ಮ ಸಮುದಾಯಗಳಲ್ಲಿ ಸಾಕುಪ್ರಾಣಿಗಳನ್ನು ಸಾಕಬಹುದೇ ಎಂದು ಮೊದಲು ನಿರ್ಧರಿಸಬೇಕು ಎನ್ನುತ್ತಾರೆ. 

ಈ ಪತ್ರಿಕೆಯು ಅಭಿಷೇಕ್ ಅಗರ್ವಾಲ್ ಅವರನ್ನು ಸಂಪರ್ಕಿಸಿದಾಗ, "ನನಗೆ ಅದರ ಕಾನೂನುಬದ್ಧತೆಯ ಬಗ್ಗೆ ಅರಿವಿಲ್ಲ. ನಾನು ಪರಿಶೀಲಿಸುತ್ತೇನೆ. ಸಾಕುಪ್ರಾಣಿಗಳು ಮಲವಿಸರ್ಜನೆ ಅಥವಾ ಮೂತ್ರ ವಿಸರ್ಜನೆಯ ಕುರಿತು ಇತರ ಮಾಲೀಕರಿಂದ ದೂರುಗಳನ್ನು ಸ್ವೀಕರಿಸಿದ್ದೇನೆ. ಇದರಿಂದಾಗಿ ಶಿಸ್ತು ಜಾರಿಗೊಳಿಸಲು ನಾವು ಈ ನಿಯಮಗಳನ್ನು ತರಲು ಪ್ರಯತ್ನಿಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com