ಬೆಂಗಳೂರಿನಲ್ಲಿ 2.75 ಲಕ್ಷ ಬೀದಿ ನಾಯಿಗಳು, ಪೂರ್ವ ವಲಯದಲ್ಲಿ ಅತಿ ಹೆಚ್ಚು: ಬಿಬಿಎಂಪಿ ವರದಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೀದಿ ನಾಯಿ ಗಣತಿ ವರದಿಯ ಪ್ರಕಾರ, 2019 ರ ಗಣತಿಯ ನಂತರ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ 29,645 ರಷ್ಟು ಕಡಿಮೆಯಾಗಿದೆ.
ಬಿಬಿಎಂಪಿ
ಬಿಬಿಎಂಪಿ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೀದಿ ನಾಯಿ ಗಣತಿ ವರದಿಯ ಪ್ರಕಾರ, 2019 ರ ಗಣತಿಯ ನಂತರ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ 29,645 ರಷ್ಟು ಕಡಿಮೆಯಾಗಿದೆ.

ಬಿಬಿಎಂಪಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಎಂಟು ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ, ಮಹದೇವಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ಆರ್‌ಆರ್ ನಗರ ಮತ್ತು ಯಲಹಂಕದಲ್ಲಿ 2,79,355 ಬೀದಿ ನಾಯಿಗಳಿವೆ. ಶುಸಂಗೋಪನಾ ಇಲಾಖೆಯ ಮೂಲಗಳು ಹೇಳುವಂತೆ ಪೂರ್ವ ವಲಯದ ಪ್ರಮುಖ ಪ್ರದೇಶದಲ್ಲಿ ಸುಮಾರು 48,000 ಬೀದಿನಾಯಿಗಳಿವೆ, ಇದು ಅತಿ ಹೆಚ್ಚು, ಪಶ್ಚಿಮ ವಲಯದಲ್ಲಿ ಸುಮಾರು 45,000 ನಾಯಿಗಳು ಮತ್ತು ದಕ್ಷಿಣ ವಲಯವು ಸರಿಸುಮಾರು 30,000 ಬೀದಿನಾಯಿಗಳನ್ನು ಹೊಂದಿದೆ.

ಮಹದೇವಪುರದಲ್ಲಿ ಸುಮಾರು 35 ಸಾವಿರ, ಬೊಮ್ಮನಹಳ್ಳಿಯಲ್ಲಿ 30 ಸಾವಿರ, ಆರ್‌ಆರ್‌ ನಗರದಲ್ಲಿ 27 ಸಾವಿರ, ದಾಸರಹಳ್ಳಿ ಮತ್ತು ಯಲಹಂಕದಲ್ಲಿ ತಲಾ 20 ಸಾವಿರ ಬೀದಿ ನಾಯಿಗಳಿವೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಪ್ರಾಣಿಗಳ ಜನನ ನಿಯಂತ್ರಣಕ್ಕೆ (ABC) ಸ್ಥಳವಿಲ್ಲದ ಕಾರಣ ಹೊರ ಪ್ರದೇಶಗಳು ಆತಂಕಕಾರಿಯಾಗಿವೆ. ನಗರದ ಉಪನಗರ ಪ್ರದೇಶಗಳು ಹೊಸ ಮತ್ತು ದೊಡ್ಡದಾಗಿರುವ ಕಾರಣ ದೊಡ್ಡ ಸವಾಲಾಗಿದೆ. ಎಬಿಸಿಯಂತಹ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಬೀದಿ ನಾಯಿಗಳ ಸಂಖ್ಯೆ ಕೆಲವೇ ವರ್ಷಗಳಲ್ಲಿ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದರು. 

ಬಿಬಿಎಂಪಿ ಮತ್ತು ಪಶುಸಂಗೋಪನಾ ಇಲಾಖೆಯ ಸಿಬ್ಬಂದಿ ಬೀದಿ ನಾಯಿಗಳ ಫೋಟೋ ತೆಗೆಯಲು ಕೆರೆಗಳ ಸುತ್ತ ಡ್ರೋನ್‌ಗಳನ್ನು ಬಳಸಿದರು. ತಲಾ ಇಬ್ಬರು ಸದಸ್ಯರನ್ನು ಒಳಗೊಂಡ 50 ತಂಡಗಳಿಂದ ಗಣತಿ ನಡೆಸಲಾಯಿತು. ಪ್ರತಿ ತಂಡವು 5 ಕಿಮೀ ವ್ಯಾಪ್ತಿಯನ್ನು ಆವರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com