ರಾಜ್ಯ ಶಿಕ್ಷಣ ನೀತಿ: ಅಧ್ಯಯನ ಮತ್ತು ಪರಿಶೀಲನೆಗೆ 9 ಉಪ ಸಮಿತಿ ರಚನೆ

ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ಮತ್ತು ಪರಿಶೀಲಿಸಲು ಒಂಬತ್ತು ಕಾರ್ಯ ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಸಮಿತಿ ಶುಕ್ರವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ಮತ್ತು ಪರಿಶೀಲಿಸಲು ಒಂಬತ್ತು ಕಾರ್ಯ ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಸಮಿತಿ ಶುಕ್ರವಾರ ತಿಳಿಸಿದೆ.

ಅಕ್ಟೋಬರ್ 11 ರಂದು ರಚಿತವಾದ 15 ಸದಸ್ಯರ ಸಮಿತಿಯು, SEP ಯ ವರದಿಯು ಸತ್ಯ ಹಾಗೂ ಮಾಹಿತ  ಆಧರಿಸಿದೆಯೇ ಹೊರತು ಊಹೆಗಳನ್ನಲ್ಲ ಎಂದು ಪುನರುಚ್ಚರಿಸಿತು. ಈ ನೀತಿಯು ರಾಜ್ಯದ ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸವಾಲುಗಳನ್ನು ಸರಿಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದೆ.

ಡಿಜಿಟಲ್ ಮೂಲಸೌಕರ್ಯ ಮತ್ತು ಕೌಶಲ ಅಭಿವೃದ್ಧಿ ಕೂಡ ವರದಿಯ ಭಾಗವಾಗಲಿದೆ ಎಂದು ಸಮಿತಿಯ ಅಧ್ಯಕ್ಷ ,ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷರೂ ಆಗಿರುವ ಸುಖದೇವ್ ಥೋರಟ್  ತಿಳಿಸಿದ್ದಾರೆ.

ಕಮಿಷನ್‌ಗೆ ಸರ್ಕಾರ ಸಂಪೂರ್ಣ ಅಧಿಕಾರ ಕೊಟ್ಟಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ನೀತಿ ರಚನೆಗೆ ಸರ್ಕಾರ ಕಮಿಷನ್ ರಚನೆ ಮಾಡಿದೆ. ಮೊದಲ ಸಭೆಯಲ್ಲಿ ಸದ್ಯ ರಾಜ್ಯದಲ್ಲಿ‌ ಇರುವ ವ್ಯವಸ್ಥೆ ಸ್ಟಡಿ ಮಾಡಲಾಗಿದೆ. ಶೈಕ್ಷಣಿಕ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಬೇಕಾದ ಪ್ರಾಥಮಿಕ ಸಭೆ ಮಾಡಿದ್ದೇವೆ.

ಸದ್ಯ ರಾಜ್ಯದಲ್ಲಿ‌‌ ಇರುವ ಶಿಕ್ಷಣ ನೀತಿ ಬಗ್ಗೆ ಪರಾಮರ್ಶೆ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣದ ಜೊತೆ ವ್ಯಾಲ್ಯುಬೇಸ್ ಶಿಕ್ಷಣ ನೀಡುವುದು ನಮ್ಮ ‌ಮೊದಲ ಆದ್ಯತೆ ಆಗಿರಲಿದೆ. ವರದಿ ಸಿದ್ದತೆ ಈಗ ಪ್ರಾರಂಭ ಮಾಡಲಾಗಿದೆ. 6 ತಿಂಗಳಲ್ಲಿ ಸರ್ಕಾರಕ್ಕೆ ನಮ್ಮ ಕಮಿಷನ್ ವರದಿ ನೀಡಲಿದೆ. ವರದಿ ಜಾರಿ ಮಾಡೋ

‘ರಾಜ್ಯ ಶಿಕ್ಷಣ ನೀತಿಯ ಕರಡು ರಚಿಸಲು ಸರ್ಕಾರ ನಮಗೆ ಆದೇಶ ನೀಡಿದೆ. ಮೊದಲ ಹಂತದಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಲಾಗುವುದು. ರಾಜ್ಯದಲ್ಲಿನ ಒಟ್ಟಾರೆ  ಶಿಕ್ಷಣದ ಸಾಧನೆಯನ್ನು ಪರಿಶೀಲಿಸಲಾಗುವುದು. ದಾಖಲಾತಿ, ಪ್ರವೇಶ, ಆಡಳಿತ ರಚನೆ, ಹಣಕಾಸು ಮತ್ತು ಧನಸಹಾಯ, ವೆಚ್ಚ, ಗುಣಮಟ್ಟದ ಶಿಕ್ಷಣ, ದೂರ ಶಿಕ್ಷಣ ಮತ್ತು ಆನ್‌ಲೈನ್‌ ಶಿಕ್ಷಣ, ಅಧ್ಯಾಪಕರು ಮತ್ತು ಮೌಲ್ಯ ಶಿಕ್ಷಣದಂತಹ ಅಂಶಗಳತ್ತ ಗಮನಹರಿಸಲಿದೆ’ ಎಂದು ವಿವರಿಸಿದರು.

ಸಾರ್ವಜನಿಕರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ನಾಲ್ಕು ವಿಭಾಗಗಳಲ್ಲಿ ಸಮಾಲೋಚನೆ ನಡೆಸಲಾಗುವುದು. ನೀತಿಯ ಕುರಿತು ಅವರ ಜತೆ ಸಂವಹನ ನಡೆಸಿ, ಪ್ರತಿಕ್ರಿಯೆಗಳನ್ನು ದಾಖಲಿಸಲಾಗುವುದು. ಆಳವಾದ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಲಾಗುವುದು.

ಸರ್ಕಾರದ ಸೂಚನೆಯಂತೆ ಬರುವ ಮಾರ್ಚ್‌ (2024) ಒಳಗೆ ವರದಿ ಸಲ್ಲಿಸುವ ಗುರಿ ಇಟ್ಟುಕೊಂಡು ಕೆಲಸ ಆರಂಭಿಸಿದ್ದೇವೆ. ಸಮಯದ ಅಗತ್ಯವಿದ್ದರೆ ವಿಸ್ತರಣೆ ಕೋರುತ್ತದೆ. ಆಯೋಗದ ಶಿಫಾರಸುಗಳು ಸಂಗ್ರಹಿಸುವ ದತ್ತಾಂಶ, ಸಮೀಕ್ಷೆ ಮತ್ತು ಸಂಶೋಧನೆಗಳನ್ನು ಆಧರಿಸಿರುತ್ತವೆ. ಸತ್ಯಾಂಶಗಳಿಗೆ ಮನ್ನಣೆ ನೀಡಲಾಗುವುದು, ಊಹೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ವರದಿ ಸಿದ್ದ ಮಾಡುವ ಮುನ್ನ ಎಲ್ಲಾ ವಿವಿಯ ವಿಸಿಗಳು, ‌ಶಿಕ್ಷಕರು, ವಿದ್ಯಾರ್ಥಿಗಳು, NGOಗಳು, ಶಿಕ್ಷಣ ಸಂಸ್ಥೆಗಳ ಜೊತೆ ಸಭೆಗಳನ್ನ ಮಾಡ್ತೀವಿ. ರಾಜ್ಯದ 4 ವಿಭಾಗವಾರು ಸಭೆ ಮಾಡ್ತೀವಿ. ಎಲ್ಲರ ಅಭಿಪ್ರಾಯ ‌ಪಡೆದು ಪಾಲಿಸಿ ಸಿದ್ದತೆ ಕ್ರಮವಹಿಸುತ್ತೇವೆ. ಲಭ್ಯ ಇರುವ ಎಲ್ಲಾ ರಿಪೋರ್ಟ್‌ಗಳು, ಅಂಕಿಗಳು, ವಿವಿಧ ಪಾಲಿಸಿಗಳು ಎಲ್ಲವನ್ನು ಅಧ್ಯಯನ ಮಾಡಿ ಪಾಲಿಸಿ ಸಿದ್ದತೆ ಮಾಡ್ತೀವಿ. ಇದೊಂದು ಉತ್ತಮ ಪಾಲಿಸಿ ಆಗಲಿದೆ.

ಶಾಶ್ವತವಾಗಿ ಕರ್ನಾಟಕ ಶಿಕ್ಷಣ ವ್ಯವಸ್ಥೆಯನ್ನ ಉತ್ತಮಗೊಳಿಸುವ ಪಾಲಿಸಿ ಇದಾಗಲಿದೆ ಎಂದು ಹೇಳಿದರು. ಫೆಬ್ರವರಿ 28, 2024 ರೊಳಗೆ ವರದಿಯನ್ನು ಸಲ್ಲಿಸುವುದಾಗಿ ಸದಸ್ಯರು ಹೇಳಿದರು, ಆದರೆ ಅಗತ್ಯವಿದ್ದರೆ ಸರ್ಕಾರದಿಂದ ವಿಸ್ತರಣೆಯನ್ನು  ಕೋರುವುದಾಗಿ  ಥೋರಟ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com