ರಾಯಚೂರು: ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನು ಕೊಂದ ಮಗ

ತನ್ನ ತಾಯಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ತನ್ನ ತಾಯಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ದೇವರಭೂಪುರ ಗ್ರಾಮದ ನಿವಾಸಿ 32 ವರ್ಷದ ಶೀಲವಂತ ಎಂದು ಗುರುತಿಸಲಾಗಿದೆ. ಸಂತ್ರಸ್ತನನ್ನು 55 ವರ್ಷದ ಬಂಡಿ ತಿಮ್ಮಣ್ಣ ಎನ್ನಲಾಗಿದೆ.

ಆರೋಪಿ ಶೀಲವಂತ ತನ್ನ ತಂದೆಯನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲಿಗೆ ಶವವನ್ನು ವಿಲೇವಾರಿ ಮಾಡಲು ಯತ್ನಿಸಿದನಾದರೂ, ನಂತರ ಮನಸ್ಸು ಬದಲಾಯಿಸಿ ತನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಬಂಡಿ ತಿಮ್ಮಣ್ಣ ಮತ್ತು ಅವರ ಪತ್ನಿ, ಪುತ್ರ ಶೀಲವಂತನೊಂದಿಗೆ ವಾಸವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಂಡಿ ತಿಮ್ಮಣ್ಣ ತನ್ನ ಪತ್ನಿಗೆ ನಿತ್ಯ ಚಿತ್ರಹಿಂಸೆ ನೀಡುತ್ತಿದ್ದರು. ಶೀಲವಂತ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಅವರು ಆರೋಪಿಯ ತಾಯಿಗೆ ಕಿರುಕುಳ ನೀಡುತ್ತಿದ್ದರು.

ಭಾನುವಾರ ಇದೇ ವಿಚಾರವಾಗಿ ತಂದೆ-ಮಗನ ನಡುವೆ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ, ಆರೋಪಿಯು ಸಂತ್ರಸ್ತರ ಕಿರಿಯ ಮಗನನ್ನು ಕೋಣೆಗೆ ಹೋಗುವಂತೆ ಹೇಳಿದ್ದಾನೆ. ನಂತರ ದೊಡ್ಡ ಕಲ್ಲನ್ನು ತೆಗೆದುಕೊಂಡು ತನ್ನ ತಂದೆಯ ತಲೆಯನ್ನು ಒಡೆದಿದ್ದಾನೆ. ಆತನನ್ನು ತಡೆಯುವ ಪತ್ನಿಯ ಪ್ರಯತ್ನವು ವಿಫಲವಾಯಿತು.

ಮೃತ ಪತಿ ಪ್ರತಿದಿನ ತನಗೆ ಚಿತ್ರಹಿಂಸೆ ನೀಡುತ್ತಿದ್ದು, ತಾಯಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಲಾಗದೇ ಮಗ ಸಿಟ್ಟಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. 

ಈ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com