ಮೌಢ್ಯ ನಂಬಲ್ಲ, ದೇವರನ್ನು ನಂಬುತ್ತೇನೆ: ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಮೌಢ್ಯ ನಂಬಲ್ಲ. ಆದರೆ, ದೇವರನ್ನು ನಂಬುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಸನಾಂಬೆ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೌಢ್ಯ ನಿನ್ನೆ, ಮೊನ್ನೆಯದಲ್ಲ. ಮೌಢ್ಯ ಎಂದರೆ ನಂಬಿಕೆಯಲ್ಲಿ ಅಪನಂಬಿಕೆ. ಮೌಢ್ಯವನ್ನು ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಅವುಗಳನ್ನು ನಾನು ನಂಬುವುದಿಲ್ಲ ಎಂದರು.
ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನ: ಮೌಢ್ಯ ನಂಬಲ್ಲ. ಆದರೆ, ದೇವರನ್ನು ನಂಬುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಹಾಸನಾಂಬೆ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೌಢ್ಯ ನಿನ್ನೆ, ಮೊನ್ನೆಯದಲ್ಲ. ಮೌಢ್ಯ ಎಂದರೆ ನಂಬಿಕೆಯಲ್ಲಿ ಅಪನಂಬಿಕೆ. ಮೌಢ್ಯವನ್ನು ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಅವುಗಳನ್ನು ನಾನು ನಂಬುವುದಿಲ್ಲ. ಆದರೆ, ದೇವರಲ್ಲಿ ನಂಬಿಕೆ ಇದೆ ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೂ.37,700 ಕೋಟಿ ಬೆಳೆ ನಷ್ಟ ಸಂಭವಿಸಿದೆ. ಎನ್ ಡಿಆರ್ ಎಫ್- ಎಸ್ ಡಿಆರ್ ಎಫ್ ನಿಯಮದಂತೆ ರೂ. 17, 900 ಕೋಟಿ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಪ್ರಸ್ತಾವ ನೀಡಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ ಅಗತ್ಯ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com