ಪೇಜಾವರ ಸ್ವಾಮೀಜಿಗೆ ಪಿತೃ ವಿಯೋಗ: ಅಂಗಡಿಮಾರು ಕೃಷ್ಣ ಭಟ್ ನಿಧನ

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ, ಅಂಗಡಿಮಾರ್ ಕೃಷ್ಣ ಭಟ್ (105) ಅವರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ತಂದೆ ಕೃಷ್ಣ ಭಟ್ ಜೊತೆ ಪೇಜಾವರ ಶ್ರೀ
ತಂದೆ ಕೃಷ್ಣ ಭಟ್ ಜೊತೆ ಪೇಜಾವರ ಶ್ರೀ
Updated on

ಉಡುಪಿ:  ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ, ಅಂಗಡಿಮಾರ್ ಕೃಷ್ಣ ಭಟ್ (105) ಅವರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಕೃಷ್ಣ ಭಟ್ ಅವರು ಕಟೀಲು, ಪುನರೂರು ಮತ್ತು ಪಾವಂಜೆಯ ವಿವಿಧ ದೇವಸ್ಥಾನಗಳಲ್ಲಿ ಅರ್ಚಕರಾಗಿ ಕೆಲಸ ಮಾಡಿ ನಾಲ್ಕು ವೇದಗಳಲ್ಲಿ ಪರಿಣತರಾಗಿದ್ದರು. ಭಟ್ ಅವರು ಋಗ್, ಯಜುರ್, ಸಾಮ ಮತ್ತು ಅಥರ್ವಣ ವೇದಗಳ ಬಗ್ಗೆ ಅಪಾರ ಜ್ಞಾನ  ಹೊಂದಿದ್ದರು.

ಸಾಂಪ್ರದಾಯಿಕ ಕೃಷಿಕ ಮತ್ತು ಆಧ್ಯಾತ್ಮಿಕ ವಿದ್ವಾಂಸರಾದ ಭಟ್ ಅವರು ತುಳು ಲಿಪಿಯ ಪ್ರತಿಪಾದಕರಾಗಿದ್ದರು ಮತ್ತು ತುಳುವ ಸಂಪ್ರದಾಯಗಳ ಪಂಚಾಂಗವನ್ನು ಪರಿಚಯಿಸಿದರು. ಅವರು ಹಲವಾರು ಯಾಗಗಳನ್ನು ಮಾಡಿದರು. ಹೆಚ್ಚಿನ ಸಂಖ್ಯೆಯ ಶಿಷ್ಯರಿಗೆ ಸಂಸ್ಕೃತ ಕಲಿಸಿದರು. ಭಟ್ ಅವರು ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಮತ್ತು ಕನ್ಯಾಕುಮಾರಿ ದೇವಸ್ಥಾನದಲ್ಲಿ ಅರ್ಚಕರಾಗಿ ಸಹ ಸೇವೆ ಸಲ್ಲಿಸಿದ್ದರು.

ಕೃಷ್ಣ ಭಟ್ ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ‘ಭಜನೆ’ ರಚಿಸಿದ್ದರು. ಪ್ರಾರ್ಥನಾ ಗೀತೆಗಳನ್ನೂ ಬರೆದಿದ್ದರು. ಅವರ ಪತ್ನಿ ಯಮುನಾ ಭಟ್ ದಶಕಗಳ ಹಿಂದೆ ನಿಧನರಾಗಿದ್ದರು. ಶ್ರೀ ವಿಶ್ವಪ್ರಸನ್ನ ತೀರ್ಥರು ಅವರ ಎಂಟನೆಯ ಮಗ. ಕೃಷ್ಣ ಭಟ್ ಅವರು ಐವರು ಪುತ್ರರು (ಪೇಜಾವರ ಶ್ರೀಗಳು ಸೇರಿದಂತೆ) ಮತ್ತು ಏಳು ಪುತ್ರಿಯರನ್ನು ಅಗಲಿದ್ದಾರೆ.

ಕೃಷ್ಣ ಭಟ್ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದವು. ಭಟ್ ಅವರು ಉಡುಪಿ ಶ್ರೀಕೃಷ್ಣಮಠದ ‘ಕೃಷ್ಣಾನುಗ್ರಹ ಪ್ರಶಸ್ತಿ’ ಹಾಗೂ ಕಲ್ಕೂರ ಪ್ರತಿಷ್ಠಾನದ ‘ಪೇಜಾವರ ಶ್ರೀ ಜೀವಮಾನ ಪ್ರಶಸ್ತಿ’ಗೆ ಭಾಜನರಾಗಿದ್ದರು. ಕೃಷ್ಣ ಭಟ್ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com