ಬೆಂಗಳೂರು: 11 ದಿನಗಳ ಬಾಣಂತಿ ಪತ್ನಿ ಕೊಂದು ಪೇದೆ ಆತ್ಮಹತ್ಯೆ ಯತ್ನ!

ಪೊಲೀಸ್ ಪೇದೆಯೊಬ್ಬರು ಬಾಣಂತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದೇವನಹಳ್ಳಿ: ಪೊಲೀಸ್ ಪೇದೆಯೊಬ್ಬರು ಬಾಣಂತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್ ಮತ್ತು ಪ್ರತಿಭಾಗೆ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಆರೋಪಿ ಕಿಶೋರ್ ಗೆ ತನ್ನ ಪತ್ನಿ ಮೇಲೆ ಅನುಮಾನ ಇತ್ತು. ಆ ಅನುಮಾನವೇ ಇಂದು ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಮದುವೆಯಾದ ಒಂದು ವರ್ಷದಲ್ಲೇ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಕುಟುಂಬಸ್ಥರು ಇಬ್ಬರಿಗೂ ಹಲವು ಸಲ ಬುದ್ದಿ ಹೇಳಿದ್ದರು. 11 ದಿನಗಳ ಹಿಂದಷ್ಟೇ ಪ್ರತಿಭಾಗೆ ಮಗುವಾಗಿತ್ತು. ಹೀಗಾಗಿ ಬಾಣಂತನಕ್ಕೆ ತಂದೆ ಮನೆಗೆ ಬಂದಿದ್ದರು.

ಮಗು ನೋಡುವ ನೆಪದಲ್ಲಿ ಮಾವನ ಮನೆಗೆ ಬಂದವ ಮನೆಯಲ್ಲಿ ಪತ್ನಿ ಒಬ್ಬಳೆ ಇದ್ದ‌ ವೇಳೆ‌ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಫ್ಯಾನಿಗೆ ಸೀರೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮೃತ ಪ್ರತಿಭಾ ಪೋಷಕರು ಮನೆಗೆ ಬಂದಿದ್ದರಿಂದ ಬೆಚ್ಚಿಬಿದ್ದ ಕಿಶೋರ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಇನ್ನು ಆರೋಪಿ ಕಿಶೊರ್ ತನ್ನ ಪತ್ನಿಯನ್ನು ಕೊಂದು ಕೋಲಾರಕ್ಕೆ ಹೋಗಿ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಕಿಶೋರ್ ಕೋಲಾರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com