ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಸೇರಿಸಲು ಪ್ರಸ್ತಾಪ!

ಹಂಪಿ ಪಾರಂಪರಿಕ ತಾಣದ ನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ, ಸರ್ಕಾರವು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವನ್ನು (HWAHMA) ವಿಜಯನಗರ ಜಿಲ್ಲೆಯ ಅಧಿಕಾರ ವ್ಯಾಪ್ತಿಗೆ ತರಲು ಪ್ರಸ್ತಾಪಿಸಿದೆ.
ಹಂಪಿ ( ಸಂಗ್ರಹ ಚಿತ್ರ)
ಹಂಪಿ ( ಸಂಗ್ರಹ ಚಿತ್ರ)

ಬೆಂಗಳೂರು: ಹಂಪಿ ಪಾರಂಪರಿಕ ತಾಣದ ನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ, ಸರ್ಕಾರವು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವನ್ನು (HWAHMA) ವಿಜಯನಗರ ಜಿಲ್ಲೆಯ ಅಧಿಕಾರ ವ್ಯಾಪ್ತಿಗೆ ತರಲು ಪ್ರಸ್ತಾಪಿಸಿದೆ.

2021 ರಲ್ಲಿ ಬಳ್ಳಾರಿ ಜಿಲ್ಲೆಯನ್ನು ಬಳ್ಳಾರಿ ಮತ್ತು ವಿಜಯನಗರ ಎಂದು ವಿಭಜಿಸಿದ್ದರೂ, ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ ಬಳ್ಳಾರಿಯ ವ್ಯಾಪ್ತಿಗೆ ಬಂದಿತು, ಇದು ಆಡಳಿತದ ಮೇಲೆ ಪರಿಣಾಮ ಬೀರಿತು. ಹಂಪಿ ಭೌಗೋಳಿಕವಾಗಿ ವಿಜಯನಗರದ ಅಡಿಯಲ್ಲಿ ಬಂದರೆ, ಆಡಳಿತವನ್ನು ಬಳ್ಳಾರಿ ಮೂಲಕ ನಡೆಸಲಾಯಿತು.

ನ್ಯಾಯಾಲಯದ ಮೊಕದ್ದಮೆಗಳು ಮತ್ತು ಆಡಳಿತಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಬಳ್ಳಾರಿ ಮೂಲಕ ರವಾನಿಸಬೇಕು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದ್ದಾರೆ. ಈ ಆಡಳಿತ ವೈಪರೀತ್ಯದಿಂದಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗಳಿಗೆ ಸುಮಾರು 60 ಕಿ.ಮೀ ದೂರದಲ್ಲಿರುವ ಬಳ್ಳಾರಿಗೆ ತೆರಳಬೇಕಾಯಿತು ಎಂದು HWHAMA ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವ-ಪ್ರಸಿದ್ಧ ತಾಣ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸಲು ಮತ್ತು ವಿಶೇಷ ಕಾಳಜಿ ವಹಿಸಲು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಷಯ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ ಮತ್ತು ಹಂಪಿ ಆಡಳಿತದ ಅಧಿಕಾರಕ್ಕೆ ನಿಯಮಗಳನ್ನು ರೂಪಿಸುವ ಕಾಯಿದೆಯನ್ನು ಅಂಗೀಕರಿಸಲಾಗುತ್ತದೆ..

ಹಂಪಿಯ ನಿರ್ವಹಣೆಯನ್ನು ಸುಧಾರಿಸಬೇಕು ಎಂದು ಸರ್ಕಾರಕ್ಕೆ ಹಲವು ಸಲಹೆಗಳು ಬಂದಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು HWHAMA ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದೆ.

ಈ ಮಧ್ಯೆ, ಬೆಳಗಾವಿಗೆ ಭೇಟಿ ನೀಡಿದ್ದ ವಿಧಾನಸಭಾ ಸ್ಪೀಕರ್ ಮತ್ತು ಪರಿಷತ್ ಅಧ್ಯಕ್ಷರು ಮತ್ತು ಅಧಿಕಾರಿಗಳ ತಂಡಗಳು ವಾಪಸಾಗಿವೆ, ಡಿಸೆಂಬರ್ 4 ರಿಂದ 15 ರವರೆಗೆ ಮುಂದಿನ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಗುರುವಾರ ಸಂಪುಟ ಸಭೆಯಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com