ಬೆಳಕಿನ ಹಬ್ಬಕ್ಕೆ ಹೊಸ ಹಾಡಿನ ರೂಪ... ಹಚ್ಚೋಣ ಕಲರ್ಸ್ ಕನ್ನಡದ ದೀಪ...

ಕನ್ನಡದಲ್ಲಿ ದೀಪಾವಳಿಯ ಕುರಿತೇ ಹಾಡಿರುವ ಹಾಡುಗಳ ಸರಮಾಲೆಯೇನಿಲ್ಲ. ಆ ಹಾಡುಗಳ ಸೊಗಸು, ಮಾಧುರ್ಯ ಬಲು ಆಕರ್ಷಕ. ಒಂದು ರೀತಿಯಲ್ಲಿ ಆ ಹಾಡುಗಳು ದೀಪಾವಳಿಗೆ ಕೊಟ್ಟ ಬಳುವಳಿ.
ದೀಪಾವಳಿ
ದೀಪಾವಳಿ

ಬೆಂಗಳೂರು: ಕನ್ನಡದಲ್ಲಿ ದೀಪಾವಳಿಯ ಕುರಿತೇ ಹಾಡಿರುವ ಹಾಡುಗಳ ಸರಮಾಲೆಯೇನಿಲ್ಲ. ಬೆರಳೆಣಿಕೆಯಷ್ಟೇ ದೀಪಾವಳಿ ಹಾಡುಗಳಿರಬಹುದು. ಆ ಹಾಡುಗಳ ಸೊಗಸು, ಮಾಧುರ್ಯ ಬಲು ಆಕರ್ಷಕ. ಅದೇ ಕಾರಣಕ್ಕೆ ಅದೇ ದೀಪಾವಳಿ ಹಾಡುಗಳನ್ನು ನಾವೆಲ್ಲಾ ಪ್ರತೀ ದೀಪಾವಳಿಯಲ್ಲಿ ಬಳಸುತ್ತಾ ಬಂದಿದ್ದೇವೆ. ಒಂದು ರೀತಿಯಲ್ಲಿ ಆ ಹಾಡುಗಳು ದೀಪಾವಳಿಗೆ ಕೊಟ್ಟ ಬಳುವಳಿ. ಆ ಹಾಡುಗಳನ್ನು ಮೆಚ್ಚುತ್ತಲೇ ಕನ್ನಡಿಗರಿಗೆಲ್ಲ ಮೆಚ್ಚಾಗುವ ದೀಪಾವಳಿ ಕುರಿತು ಹೊಸತಾದ ಹಾಡನ್ನು ಬರೆಸಿ ಹಾಡಿಸಿ, ಸಂಗೀತ ಸಂಯೋಜಿಸಿ, ಚಿತ್ರೀಕರಿಸಿದೆ ಕಲರ್ಸ್ ಕನ್ನಡ. 

ನೂರಾರು ಹೊಸಾ ಪ್ರಯೋಗಗಳನ್ನು ನಿರಂತರ ಮಾಡುತ್ತಾ ಬಂದಿರುವ ಕಲರ್ಸ್ ಕನ್ನಡ ಪ್ರಪ್ರಥಮ ಬಾರಿಗೆ ದೀಪಾವಳಿ ಕುರಿತ ಹಾಡನ್ನು ಜನರಿಗೋಸ್ಕರ ತರುತ್ತಿದೆ. 

ಈ ದೀಪಾವಳಿ ಹಾಡನ್ನು ಸೋಶಿಯಲ್ ಮೀಡಿಯಾಗಳಲ್ಲಿ ಬಳಸುವುದಷ್ಟೇ ಅಲ್ಲದೆ ಹಾಡನ್ನು ಹಾಡಿ ಬೇರೆಯವರಿಂದಲೂ ಹಾಡಿಸಬಹುದು ಮತ್ತು ಕ್ಯಾಚೀ ಆಗಿರುವ ಈ ಹಾಡನ್ನು ಬಳಸಿ ರೀಲ್ಸ್ ಮಾಡಿಸುವುದು ಅದ್ಭುತ ಐಡಿಯಾ ಆಗಬಹುದು ಎನ್ನುವುದು ಕೇಳಿದವರ ಮತ್ತು ನೋಡಿದವರ ಅಭಿಪ್ರಾಯ. 

ಕಲರ್ಸ್ ಕನ್ನಡದ ಮೆಗಾ ಸೀರಿಯಲ್ ಗಳ ತಾರೆಯರೆಲ್ಲಾ ಈ ದೀಪಾವಳಿ ಹಾಡಿನಲ್ಲಿ ಜಗಮಗಿಸುತ್ತಿದ್ದಾರೆ. ನೋಡಲೂ ಚೆನ್ನ ಹಾಡಲೂ ಚೆನ್ನ ಅನ್ನುವಂತಿರುವ ಈ ದೀಪಾವಳಿ ಹಾಡು ಕಲರ್ಸ್ ಕನ್ನಡದ ವಿನೂತನ ಪ್ರಯತ್ನ. ಕಲರ್ಸ್ ವಾಹಿನಿಯ ಸಮಸ್ತ ನಕ್ಷತ್ರ ಕೂಟಗಳನ್ನು ಒಂದೇ ಹಾಡಿನಲ್ಲಿ ತಂದು ಕಾಣಿಸಿರುವುದು ಮತ್ತು ಕುಣಿಸಿರುವುದು ವಿಶಿಷ್ಟ ವಿಭಿನ್ನ ವಿನೂತನ ಪ್ರಯತ್ನ. 

ಈ ದೀಪಾವಳಿ ಹಾಡು ಕಿವಿಗೊಳ್ಳೆಯದು, ಕಣ್ಣಿಗೂ. ಕಲರ್ಸ್ ಕನ್ನಡದ ಕಲರ್ಫುಲ್ ವೀಕ್ಷಕರಿಗೆ ಇದು ಅಚ್ಚುಮೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. 

ಈ ಸಲ ಪಟಾಕಿಯನ್ನ ಕಲರ್ಸ್ ಕನ್ನಡದ ದೀಪಾವಳಿ ಹಾಡಿನಿಂದ ಹಚ್ಚಿ! ಹಚ್ಚೋಣ ಕಲರ್ಸ್ ಕನ್ನಡದ ದೀಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com