ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಆರ್ ಡಿ ಪಾಟೀಲ್ ಗೆ ರಕ್ಷಣೆ ನೀಡಿದ್ದ ಇಬ್ಬರ ಬಂಧನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA Exam Scam) ಪರೀಕ್ಷೆಯ ಪ್ರಮುಖ ಆರೋಪಿ ಆರ್.​ಡಿ. ಪಾಟೀಲ್ ತಲೆಮರೆಸಿಕೊಂಡಿದ್ದು ಆತನ ಹುಡುಕಾಟಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿರುವುದರ ಮಧ್ಯೆ ಆತನಿಗೆ ರಕ್ಷಣೆ ನೀಡಿದ ಆರೋಪದಡಿ ಫ್ಲ್ಯಾಟ್ ಮಾಲೀಕ ಮತ್ತು ಮ್ಯಾನೇಜರ್​​ನನ್ನು ಪೊಲೀಸರು ಬಂಧಿಸಿದ್ದಾರೆ.
ಆರ್ ಡಿ ಪಾಟೀಲ್ (ಸಂಗ್ರಹ ಚಿತ್ರ)
ಆರ್ ಡಿ ಪಾಟೀಲ್ (ಸಂಗ್ರಹ ಚಿತ್ರ)

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA Exam Scam) ಪರೀಕ್ಷೆಯ ಪ್ರಮುಖ ಆರೋಪಿ ಆರ್.​ಡಿ. ಪಾಟೀಲ್ ತಲೆಮರೆಸಿಕೊಂಡಿದ್ದು ಆತನ ಹುಡುಕಾಟಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿರುವುದರ ಮಧ್ಯೆ ಆತನಿಗೆ ರಕ್ಷಣೆ ನೀಡಿದ ಆರೋಪದಡಿ ಫ್ಲ್ಯಾಟ್ ಮಾಲೀಕ ಮತ್ತು ಮ್ಯಾನೇಜರ್​​ನನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿಯ ವರದಾ ಲೇಔಟ್​ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟಮೆಂಟ್​ನಲ್ಲಿದ್ದ ಆರ್​ಡಿ ಪಾಟೀಲ್, ನವೆಂಬರ್ 6 ರಂದು ಪೊಲೀಸರು ದಾಳಿ ನಡೆಸಿದಾಗ ಪರಾರಿಯಾಗಿದ್ದ. ಅದರಂತೆ ಆರೋಪಿಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಫ್ಲ್ಯಾಟ್ ಮಾಲೀಕ ಮತ್ತು ಅಪಾರ್ಟ್ ಮೆಂಟ್ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ.

ಆರ್ ಡಿ ಪಾಟೀಲ್​ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಶಹಾಪೂರದ ಶಂಕರ್ ಗೌಡಯಾಳವಾರ್ ಮತ್ತು ಅಪಾರ್ಟ್ ಮೆಂಟ್ ವ್ಯವಸ್ಥಾಪಕ ದಿಲೀಪ್ ಪವಾರ್ ಬಂಧಿತರಾಗಿದ್ದಾರೆ. ಆರ್​ಡಿ ಪಾಟೀಲ್​ನಿಂದ ವ್ಯವಸ್ಥಾಪಕ ದಿಲೀಪ್ 10 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದು, ಆ ಹಣ ಫ್ಲ್ಯಾಟ್ ಮಾಲೀಕ ಶಂಕರ್ ಗೌಡಗೆ ಕೊಟ್ಟಿದ್ದರು ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com