ಕಾಂತರಾಜ ಆಯೋಗದ ಸಾಮಾಜಿಕ-ಆರ್ಥಿಕ ಸಮೀಕ್ಷೆ ತಿರಸ್ಕರಿಸಿದ ವೀರಶೈವ-ಲಿಂಗಾಯತ ಮಹಾಸಭೆ

ಕೆಲ ದಿನಗಳ ಹಿಂದೆ ಒಕ್ಕಲಿಗ ಸಮಾಜದ ಸಭೆ ನಡೆದ ಕೆಲವೇ ದಿನಗಳಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಮತ್ತು ಕಾಂತರಾಜ ಆಯೋಗದ ವರದಿ ಬಗ್ಗೆ ಚರ್ಚಿಸಲು ನಿನ್ನೆ ಗುರುವಾರ ವೀರಶೈವ-ಲಿಂಗಾಯತ ಸಮುದಾಯದ ಸಭೆ ಏರ್ಪಟ್ಟಿತ್ತು. ಸಭೆಯಲ್ಲಿ ಕಾಂತರಾಜ ಆಯೋಗ ವರದಿಯನ್ನು ತಿರಸ್ಕರಿಸಲಾಯಿತು.
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ

ಬೆಂಗಳೂರು: ಕೆಲ ದಿನಗಳ ಹಿಂದೆ ಒಕ್ಕಲಿಗ ಸಮಾಜದ ಸಭೆ ನಡೆದ ಕೆಲವೇ ದಿನಗಳಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಮತ್ತು ಕಾಂತರಾಜ ಆಯೋಗದ ವರದಿ ಬಗ್ಗೆ ಚರ್ಚಿಸಲು ನಿನ್ನೆ ಗುರುವಾರ ವೀರಶೈವ-ಲಿಂಗಾಯತ ಸಮುದಾಯದ ಸಭೆ ಏರ್ಪಟ್ಟಿತ್ತು. ಸಭೆಯಲ್ಲಿ ಕಾಂತರಾಜ ಆಯೋಗ ವರದಿಯನ್ನು ತಿರಸ್ಕರಿಸಲಾಯಿತು.

ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಿನ್ನೆ ಸಭೆ ಸೇರಿದ್ದರು. ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಅನೇಕ ಲೋಪದೋಷಗಳಿವೆ ಎಂಬ ಮಾಹಿತಿಯಿದ್ದು ಸರ್ಕಾರ ಮತ್ತೊಂದು ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕೆಂದು ಯಾವುದೇ ಸಂದೇಹಕ್ಕೆ ಅವಕಾಶ ಮಾಡಿಕೊಡಬಾರದೆಂದು ಸಭೆಯಲ್ಲಿ ಅಭಿಪ್ರಾಯ ಕೇಳಿಬಂತು.

ಕಾಂತರಾಜ ಆಯೋಗದ ವರದಿ ಕುರಿತು ನಿನ್ನೆಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸಮೀಕ್ಷೆಯನ್ನು ವಿಸ್ತಾರವಾಗಿ ಕೈಗೊಂಡಿಲ್ಲ, ಅನೇಕ ಮನೆಗಳಿಗೆ ಭೇಟಿ ನೀಡದೆ ಅಂದಾಜಿನಲ್ಲಿ ವರದಿ ನೀಡಲಾಗಿದೆ. ವರದಿಯಲ್ಲಿ ನೀಡಿರುವ ವೀರಶೈವ-ಲಿಂಗಾಯತ ಸಮುದಾಯದ ಸದಸ್ಯರ ಸಂಖ್ಯೆ ನಿಜವಾದ ಸಂಖ್ಯೆಗಿಂತ ಕಡಿಮೆಯಾಗಿದೆ. ಸಮುದಾಯದ ಜನರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಸಭೆಯಲ್ಲಿ ನಿನ್ನೆ ಮಾತುಗಳು ಕೇಳಿಬಂದವು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ ಎಸ್ ದ್ವಾರಕನಾಥ್, ವರದಿಯಲ್ಲಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಹಾಗಿರುವಾಗ ಅದು ವೈಜ್ಞಾನಿಕವಾಗಿಲ್ಲ, ಅದರಲ್ಲಿ ಲೋಪದೋಷಗಳಿವೆ ಎಂದು ಹೇಳಲು ಹೇಗೆ ಸಾಧ್ಯ, ಕೇವಲ ವದಂತಿಗಳಿಂದ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದಿದ್ದಾರೆ. ಈ ಮಧ್ಯೆ ಹಿಂದುಳಿದ ಜಾತಿಗಳ ಹಲವು ನಾಯಕರು ರಾಜ್ಯದ ಎರಡು ಪ್ರಬಲ ಸಮುದಾಯಗಳ ಮುಖಂಡರ ಅಭಿಪ್ರಾಯಗಳಿಂದ ಅಚ್ಚರಿಗೊಂಡಿದ್ದು ಈ ಬಗ್ಗೆ ಸದ್ಯದಲ್ಲಿಯೇ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಶ್ವ ವಿದ್ಯಾಲಯ ಮಾಜಿ ಉಪ ಕುಲಪತಿ ಪ್ರೊ ಎಸ್ ಜಾಫೆಟ್, ಸರ್ಕಾರ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಷ್ಟ್ರವ್ಯಾಪಿ ಜಾತಿ ಗಣತಿ ಇತ್ತೀಚಿನ ವಿದ್ಯಮಾನವಲ್ಲ. ಹಿಂದುಳಿದ ಜಾತಿಗಳಿಂದ ಸಾಂದರ್ಭಿಕವಾಗಿ ಮಾಡಲಾಗಿದೆ, ಅದೇ ಸಮಯದಲ್ಲಿ, ಇದಕ್ಕೆ ಮೇಲ್ವರ್ಗದವರಿಂದ ವಿರೋಧವಿದೆ. ಇದು ದೇಶದಲ್ಲಿನ ಜಾತಿ ಜನಸಂಖ್ಯಾಶಾಸ್ತ್ರದ ಮೇಲೆ ಅಂಕಿಅಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಇದು ರಾಜ್ಯದ ಯೋಜನೆ ಕಲ್ಯಾಣ ಕಾರ್ಯವಿಧಾನಗಳಿಗೆ ಸಹಾಯ ಮಾಡುತ್ತದೆ, ಇದರಿಂದಾಗಿ ಕೆಲವು ವಿಶೇಷ ಜಾತಿಗಳಿಂದ ಮೂಲೆಗುಂಪಾಗುವ ಬದಲು ಪ್ರತಿಯೊಂದು ಸಮುದಾಯವು ದೇಶದ ಸಂಪನ್ಮೂಲಗಳಲ್ಲಿ ಸಮಾನವಾದ ಪಾಲನ್ನು ಹೊಂದಿದೆ ಎಂದರು.

ಸಮೀಕ್ಷೆ ಜಾತಿ ಗಣತಿ ಅಲ್ಲ: ಶಿವರಾಜ್ ತಂಗಡಗಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಇನ್ನೂ ಬಿಡುಗಡೆಯಾಗದ ಜಾತಿ ಗಣತಿ ಅಥವಾ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯನ್ನು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವಿರೋಧಿಸುತ್ತಿದ್ದರೂ ಸಹ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಇದನ್ನು 'ಜಾತಿ ಗಣತಿ' ಎಂದು ಕರೆಯುವುದು ಸರಿಯಲ್ಲ ಎನ್ನುತ್ತಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವರದಿಯನ್ನು ನೋಡದೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಇನ್ನೂ ಸಲ್ಲಿಕೆಯಾಗದ ವರದಿಯ ವಿರುದ್ಧ ಕೆಲವು ಸಮುದಾಯಗಳು ಪ್ರತಿಭಟನೆ ನಡೆಸುತ್ತಿದ್ದು, ವರದಿ ನೋಡಿದವರು ವಿವರ ನೀಡುವಂತೆ ಮನವಿ ಮಾಡಿದರು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ಅವರ ವರದಿಯು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯಾಗಿದ್ದು, ಎಲ್ಲ ಸಮುದಾಯಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವಿವರ ಪಡೆಯಲು ಇದನ್ನು ಜಾತಿ ಗಣತಿ ಎಂದು ಕರೆಯುವುದು ಸರಿಯಲ್ಲ ಎಂದರು. ರಾಜ್ಯ ಸರ್ಕಾರ ವರದಿಯನ್ನು ಅಧ್ಯಯನ ಮಾಡಲಿದೆ ಎಂದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವರದಿ ಸಿದ್ಧವಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಒಪ್ಪಿಗೆ ನೀಡಿರಲಿಲ್ಲ ಎಂದು ಶಿವರಾಜ ತಂಗಡಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com