ಹಾಸನಾಂಬ ದೇವಸ್ಥಾನದಲ್ಲಿ ವಿವಿಐಪಿಗಳ ನಿರ್ವಹಣೆ ವೇಳೆ ತಾಳ್ಮೆ ಕಳೆದುಕೊಂಡು ಎಸಿಗೆ ಹೊಡೆದ ಡಿಸಿ!

ಹಾಸನಾಂಬೆ ದೇಗುಲದ ವಿವಿಐಪಿ ಗೇಟ್ ತಳ್ಳಿ ಜನರು ನುಗ್ಗಿದ್ದ ಹಿನ್ನೆಲೆ ಆಕ್ರೋಶಗೊಂಡ ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಾಳ್ಮೆ ಕಳೆದುಕೊಂಡು ಸಕಲೇಶಪುರ ಉಪವಿಭಾಗದ ಸಹಾಯಕ ಆಯುಕ್ತೆ ಶೃತಿ ಎಂಬುವರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. 
ಜಿಲ್ಲಾಧಿಕಾರಿ ಸತ್ಯಭಾಮ
ಜಿಲ್ಲಾಧಿಕಾರಿ ಸತ್ಯಭಾಮ

ಹಾಸನ: ಹಾಸನಾಂಬೆ ದೇಗುಲದ ವಿವಿಐಪಿ ಗೇಟ್ ತಳ್ಳಿ ಜನರು ನುಗ್ಗಿದ್ದ ಹಿನ್ನೆಲೆ ಆಕ್ರೋಶಗೊಂಡ ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಾಳ್ಮೆ ಕಳೆದುಕೊಂಡು ಸಕಲೇಶಪುರ ಉಪವಿಭಾಗದ ಸಹಾಯಕ ಆಯುಕ್ತೆ ಶೃತಿ ಎಂಬುವರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. 

ದೇವಿಯ ದರ್ಶನಕ್ಕೆ ಭಾರಿ ಜನಸ್ತೋಮ ಸೇರಿತ್ತು. ಶಾಸಕ ಸಿಮೆಂಟ್ ಮಂಜು ಅವರು ವಿವಿಐಪಿ ಗೇಟ್ ಮೂಲಕ ದೇಗುಲದ ಒಳಗೆ ಪ್ರವೇಶಿಸುತ್ತಿದ್ದಂತೆ ಶಾಸಕರ ಜೊತೆ ಗೇಟ್ ತಳ್ಳಿ ಜನರು ಒಳಗೆ ನುಗ್ಗಿದ್ದಾರೆ. ಈ ವೇಳೆ ಗರಂ ಆದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಕೈಗೆ ಹೊಡೆದು ಸುಮ್ಮನಿರುವಂತೆ ಗದರಿಸಿ ಹೇಳಿದರು.

ಬೆಳಗ್ಗೆಯಿಂದಲೇ ಜನಸಂದಣಿ ನಿಯಂತ್ರಿಸಲು ಜಿಲ್ಲಾಧಿಕಾರಿ, ಎಸ್ಪಿ ಹರಸಾಹಸ ಪಟ್ಟಿದ್ದರು. ಡಿಸಿ ಕೂಡ ವಿವಿಐಪಿ ಗೇಟ್ ಮುಂದೆ ಕುಳಿತು ರಾತ್ರಿಯವರೆಗೂ ಜನಸಂದಣಿಯನ್ನು ಖುದ್ದಾಗಿ ನಿಯಂತ್ರಿಸಿದ್ದರು.

ಇದಕ್ಕೂ ಮುನ್ನ ಡಿಸಿ ಕೂಡ ಹಲವು ಬಾರಿ ಕೈ ಜೋಡಿಸಿ ಭಕ್ತರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com