ಸುನೀಲ್ ಗವಾಸ್ಕರ್ ಮೂರನೇ ಇನ್ನಿಂಗ್ಸ್: ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿರುವ 200 ಮಕ್ಕಳಿಗೆ ಸಹಾಯ!

ಭಾರತೀಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ತಮ್ಮ ಮೂರನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.  ಜನ್ಮಜಾತ ಹೃದಯ ಕಾಯಿಲೆ (CHD) ಯಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
ಸುನೀಲ್ ಗವಾಸ್ಕರ್
ಸುನೀಲ್ ಗವಾಸ್ಕರ್

ಬೆಂಗಳೂರು: ಭಾರತೀಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ತಮ್ಮ ಮೂರನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.  ಜನ್ಮಜಾತ ಹೃದಯ ಕಾಯಿಲೆ (CHD) ಯಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.

2021 ರಲ್ಲಿ ತಮ್ಮ 72 ನೇ ಹುಟ್ಟುಹಬ್ಬದಂದು  ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡಲು ಪಣ ತೊಟ್ಟ ಅವರು, ಇದುವರೆಗೆ 200 ಕ್ಕೂ ಹೆಚ್ಚು ಮಕ್ಕಳಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಾರ್ಟ್ ಟು ಹಾರ್ಟ್ ಫೌಂಡೇಶನ್ ಮತ್ತು ಶ್ರೀ ಸತ್ಯಸಾಯಿ ಸಂಜೀವಿನಿ ಆಸ್ಪತ್ರೆಯೊಂದಿಗೆ ಪೂರೈಸುವ 35 ಮಕ್ಕಳಿ ಚಿಕಿತ್ಸೆ ನೀಡುವ  ಕಾರ್ಯ ಪ್ರಾರಂಭಿಸಿದರು. ಜನ್ಮಜಾತ ಹೃದಯ ರೋಗದೊಂದಿಗೆ ಜನಿಸಿದ ಮಗುವಿಗೆ ಆರೋಗ್ಯಕರ ಜೀವನವನ್ನು ನಡೆಸಲು ಎರಡನೇ ಅವಕಾಶ ನೀಡುವುದು ಉತ್ತಮ ಕೆಲಸ ಎಂದು ಗವಾಸ್ಕರ್ ನಂಬಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ರೋಟರಿ ಕ್ಲಬ್ ಬೆಂಗಳೂರು ಮತ್ತು ಶ್ರೀ ಸಾಯಿ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಹಾರ್ಟ್ ಟು ಹಾರ್ಟ್ ಫೌಂಡೇಶನ್ ನ 50ನೇ ಸಮಾವೇಶದಲ್ಲಿ ಅವರು  ಭಾಗವಹಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಶ್ರೀ ಸತ್ಯಸಾಯಿ ಸಂಜೀವನಿ ಆಸ್ಪತ್ರೆಗಳೊಂದಿಗೆ ಸಂಬಂಧ ಹೊಂದಿರುವ ಹಾರ್ಟ್ ಟು ಹಾರ್ಟ್ ಫೌಂಡೇಶನ್‌ನ ಆಡಳಿತ ಮಂಡಳಿಯ ಗವರ್ನರ್ ಆಗಿದ್ದಾರೆ. ಸಂಸ್ಥೆಯು  ಇದುವರೆಗೆ 28,000 ಶಸ್ತ್ರಚಿಕಿತ್ಸೆಗಳನ್ನು 'ಉಚಿತವಾಗಿ ಮಾಡಿದ್ದು ಶೇ. 99 ರಷ್ಟು ಯಶಸ್ವಿಯಾಗಿವೆ.

ಭಾರತದಲ್ಲಿ ಸುಮಾರು 2,40,000 ಮಕ್ಕಳು (ಜನಿಸಿದ 1,000 ಮಕ್ಕಳಲ್ಲಿ 8 ಮಕ್ಕಳು) CHD ಯೊಂದಿಗೆ ಜನಿಸುತ್ತಾರೆ, ಇದು ಶಿಶು ಮರಣದ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಚಿಕಿತ್ಸೆ ನೀಡದಿದ್ದರೆ, ಶೇ, 25ರಷ್ಟು ಮಕ್ಕಳು ವೈದ್ಯಕೀಯ/ಶಸ್ತ್ರಚಿಕಿತ್ಸೆಯ ಆರೈಕೆಯಿಲ್ಲದೆ ತಮ್ಮ ಮೊದಲ ಹುಟ್ಟುಹಬ್ಬದ ವರೆಗೂ ಜೀವಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತವು 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು, ತಂಡವು ವಿಶೇಷವಾಗಿ ಬೌಲರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಈ ಬಾರಿ ಕಪ್ ಅನ್ನು ಮನೆಗೆ ತರುತ್ತಾರೆ ಎಂದು ಗವಾಸ್ಕರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಗವಾಸ್ಕರ್ ಅವರ ಕೆಲಸದಿಂದ ಪ್ರೇರಿತರಾಗಿರುವ ಲೆಜೆಂಡರಿ ಕ್ರಿಕೆಟಿಗರು ಈಗ ಇತರ ಮಕ್ಕಳಿಗೆ ಸಹಾಯ ಮಾಡಲು ಬಯಸುತ್ತಿದ್ದಾರೆ, ಇದರಿಂದ ತಮ್ಮ ಮಕ್ಕಳ ಚಿಕಿತ್ಸೆಗೆ ಹಣ ನೀಡಲು ಹೆಣಗಾಡುತ್ತಿರುವ ಆರ್ಥಿಕವಾಗಿ ದುರ್ಬಲ ವರ್ಗಗಳ ಪೋಷಕರ ಮುಖದಲ್ಲಿ ಸಂತೋಷ ಮೂಡುತ್ತಿದೆ ಎಂದು ತಿಳಿಸಿದ್ದಾರೆ. ಶ್ರೀ ಸಾಯಿ ಸತ್ಯ ಸಂಜೀವನಿ ಆಸ್ಪತ್ರೆಯು  ಜನವರಿಯಲ್ಲಿ ತೆಲಂಗಾಣದಲ್ಲಿ ನಾಲ್ಕನೇ ಆಸ್ಪತ್ರೆ ತೆರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com