ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿ ಬಂಧನ: ಶಿಕ್ಷೆಯಿಂದ ಬಚಾವ್ ಆಗಲು ಅಪ್ರಾಪ್ತ ಪುತ್ರನ ಬಳಕೆ

ನಿಷಿದ್ಧ ಸರಕುಗಳ ಸಾಗಣೆ ಮಾರ್ಗವೆಂದು ಪರಿಗಣಿಸಲಾಗಿದ್ದ ಬೆಂಗಳೂರನ್ನು ನಿಷಿದ್ಧ ಚಿನ್ನ ಮತ್ತು ನಿಷೇಧಿತ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಬಳಕೆಯ ವೇಗದ ಕೇಂದ್ರವಾಗಿ ಸಹ ಇತ್ತೀಚೆಗೆ ಪರಿವರ್ತನೆಯಾಗುತ್ತಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ನಿಷಿದ್ಧ ಸರಕುಗಳ ಸಾಗಣೆ ಮಾರ್ಗವೆಂದು ಪರಿಗಣಿಸಲಾಗಿದ್ದ ಬೆಂಗಳೂರು ನಿಷಿದ್ಧ ಚಿನ್ನ ಮತ್ತು ನಿಷೇಧಿತ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಬಳಕೆಯ ವೇಗದ ಕೇಂದ್ರವಾಗಿ ಸಹ ಇತ್ತೀಚೆಗೆ ಪರಿವರ್ತನೆಯಾಗುತ್ತಿದೆ. 

ನವೆಂಬರ್ 12ರಿಂದ ನವೆಂಬರ್ 23 ರ ನಡುವೆ 15 ದಿನಗಳೊಳಗೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI), ಬೆಂಗಳೂರು ವಲಯವೊಂದರಲ್ಲೇ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ಸ್ ಎಮಿರೇಟ್ಸ್ ನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 12 ಕೆಜಿಗೂ ಹೆಚ್ಚು ಚಿನ್ನ, 6 ಕೋಟಿ ರೂಪಾಯಿ ಪತ್ತೆಯಾಗಿದೆ. 

ಹೀಗೆ ಅಕ್ರಮವಾಗಿ ಲೋಹ ಮತ್ತು ಪೇಸ್ಟ್ ರೂಪದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ವಶಪಡಿಸಿಕೊಂಡ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಎಲ್ಲರೂ ಭಾರತೀಯರಾಗಿದ್ದು ಅವರಲ್ಲಿ ನಾಲ್ವರು ಕಾರ್ಮಿಕರು, ಅವರಿಗೆ ಮನೆಗೆ ಮರಳಲು ಹಣವಿಲ್ಲದ ಕಾರಣ ಈ ರೀತಿ ವಾಮಮಾರ್ಗದ ದಾರಿ ಕಂಡುಕೊಂಡಿದ್ದರು ಎಂದು ವರದಿಯಾಗಿದೆ. ಅವರಿಗೆ ಬೆಂಗಳೂರಿಗೆ ವಿಮಾನ ಟಿಕೆಟ್‌ಗಳನ್ನು ಮತ್ತು ಅವರ ಹ್ಯಾಂಡ್ಲರ್‌ಗಳಿಂದ ಸರಕುಗಳನ್ನು ಸುರಕ್ಷಿತವಾಗಿ ತಲುಪಿಸಲು ಸ್ವಲ್ಪ ಕಮಿಷನ್ ನೀಡಲಾಯಿತು.

ಇದರಲ್ಲಿ ಒಬ್ಬಾತ ಬೆಂಗಳೂರಿನ 47 ವರ್ಷದ ವ್ಯಕ್ತಿಯಾಗಿದ್ದು, ತನ್ನ ಚೀಲದಲ್ಲಿ 2.4 ಕೆಜಿ ಅಕ್ರಮ ಚಿನ್ನವನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈತ ತನ್ನ ಕುಕೃತ್ಯಕ್ಕೆ 10 ವರ್ಷದ ಮಗನನ್ನು ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿತ್ತು. ತನ್ನ ವೈಯಕ್ತಿಕ ಬಳಕೆಗಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದನು ಎಂದು ಮೂಲಗಳು ತಿಳಿಸಿವೆ. 

ಮೊನ್ನೆ ನವೆಂಬರ್ 12 ರಂದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಸಾಮಾನು ಸರಂಜಾಮುಗಳಲ್ಲಿ ಬಚ್ಚಿಟ್ಟಿದ್ದ 2.79 ಕೋಟಿ ರೂಪಾಯಿ ಮೌಲ್ಯದ 4.64 ಕೆಜಿ ತೂಕದ 40 ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಂಡ ಡಿಆರ್‌ಐ ಕೇರಳದ 35 ವರ್ಷದ ವ್ಯಕ್ತಿಯನ್ನು ಬಂಧಿಸಿತು. ಸೌದಿ ಏರ್‌ಲೈನ್ಸ್‌ನಲ್ಲಿ ಜೆಡ್ಡಾದಿಂದ ಈತ ಬೆಂಗಳೂರಿಗೆ ಬಂದಿದ್ದ. 

ನವೆಂಬರ್ 15 ರಂದು, ತಮಿಳುನಾಡಿನ 35 ಮತ್ತು 37 ವರ್ಷ ವಯಸ್ಸಿನ ಇಬ್ಬರಿಂದ 1.6 ಕೋಟಿ ಮೌಲ್ಯದ ಎರಡು ಕ್ಯಾರಿಯರ್‌ಗಳ ಒಳ ಉಡುಪುಗಳಲ್ಲಿ ಹೊಲಿದ 3.7 ಕೆಜಿ ಚಿನ್ನವನ್ನು ಡಿಆರ್‌ಐ ವಶಪಡಿಸಿಕೊಂಡಿದೆ. ಅವರು ದುಬೈನಿಂದ ಎಮಿರೇಟ್ಸ್ ಏರ್‌ಲೈನ್ ಮೂಲಕ ಕೆಐಎಗೆ ಬಂದಿದ್ದರು. ನವೆಂಬರ್ 23 ರಂದು, ಡಿಆರ್‌ಐ ಇಬ್ಬರು ಪ್ರಯಾಣಿಕರನ್ನು ತಡೆದರು, ಅವರಲ್ಲಿ ಒಬ್ಬ ತಮ್ಮ ಅಪ್ರಾಪ್ತ ಮಗನೊಂದಿಗೆ ಪ್ರಯಾಣಿಸಿ 2.4 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದ. ಮತ್ತೊಬ್ಬ ದಕ್ಷಿಣ ಕನ್ನಡದ 26 ವರ್ಷದ ಕಾರ್ಮಿಕನಾಗಿದ್ದು, ಅವನು ತನ್ನ ಒಳ ಉಡುಪಿನಲ್ಲಿ ಪೇಸ್ಟ್ ರೂಪದಲ್ಲಿ 1.6 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದನು. ಎರಡು ಕ್ಯಾರಿಯರ್‌ಗಳು ಸಂಬಂಧವಿಲ್ಲದ ಪ್ರಕರಣಗಳಾಗಿದ್ದು, 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 4 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಡಿಆರ್‌ಐನಿಂದ 60 ಕೋಟಿ ಮೌಲ್ಯದ ಕೊಕೇನ್ ವಶ: ಈ ವರ್ಷದ ಏಪ್ರಿಲ್‌ನಿಂದ, ಬೆಂಗಳೂರಿನ ಡಿಆರ್‌ಐ ನಾಲ್ಕು ನಿಷಿದ್ಧ ಡ್ರಗ್ ಕ್ಯಾರಿಯರ್‌ಗಳನ್ನು ಬಂಧಿಸಿದೆ - ಮೂವರು ಆಫ್ರಿಕನ್ನರು ಮತ್ತು ಒಬ್ಬ ಭಾರತೀಯನಾಗಿದ್ದಾನೆ. ಅಡಿಸ್ ಅಬಾಬಾದಿಂದ ನಗರಕ್ಕೆ ಕಳ್ಳಸಾಗಣೆ ಮಾಡಲಾಗಿದ್ದ 60 ಕೋಟಿ ರೂಪಾಯಿ ಮೌಲ್ಯದ 6 ಕೆಜಿ ಕೊಕೇನ್ ನ್ನು ವಶಪಡಿಸಿಕೊಂಡಿದ್ದಾರೆ. 

ಏಪ್ರಿಲ್ 30 ರಂದು, 927 ಗ್ರಾಂ ಕೊಕೇನ್‌ನೊಂದಿಗೆ ನೈಜೀರಿಯನ್ ಒಬ್ಬನನ್ನು ಬಂಧಿಸಲಾಯಿತು. ಮೇ ತಿಂಗಳಲ್ಲಿ 2 ಕೆಜಿ ಕೊಕೇನ್‌ನೊಂದಿಗೆ ಲೈಬೀರಿಯನ್ ಪ್ರಜೆಯನ್ನು ಬಂಧಿಸಲಾಗಿತ್ತು. ಜೂನ್‌ನಲ್ಲಿ, 2.1 ಕೆಜಿ ಕೊಕೇನ್‌ನೊಂದಿಗೆ ತಮಿಳುನಾಡಿನ ಕ್ಯಾರಿಯರ್‌ನನ್ನು ಬಂಧಿಸಲಾಯಿತು. ಆಗಸ್ಟ್‌ನಲ್ಲಿ, ಮಕ್ಕಳ ಪುಸ್ತಕಗಳಲ್ಲಿ ಬಚ್ಚಿಟ್ಟಿದ್ದ 1 ಕೆಜಿ ಕೊಕೇನ್‌ನೊಂದಿಗೆ ಜಾಂಬಿಯಾನನ್ನು ಬಂಧಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com