ಆಸಿಡ್ ದಾಳಿ ವಿರುದ್ಧ ರಕ್ಷಣೆಗೆ 25 ಮಂದಿ ವೃತ್ತಿಪರರಿಗೆ ತರಬೇತಿ!

ರಾಜ್ಯದಲ್ಲಿ ಆಸಿಡ್ ದಾಳಿ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ 25 ಮಂದಿ ವೃತ್ತಿಪರರಿಗೆ ವಿಶೇಷ ತರಬೇತಿ ನೀಡಲಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಆಸಿಡ್ ದಾಳಿಯ ವಿರುದ್ಧ ಯೋಧರ ತಂಡ ಅಸ್ತಿತ್ವಕ್ಕೆ ಬರಲಿದೆ.
ಆಸಿಡ್ ದಾಳಿ (ಸಾಂಕೇತಿಕ ಚಿತ್ರ)
ಆಸಿಡ್ ದಾಳಿ (ಸಾಂಕೇತಿಕ ಚಿತ್ರ)
Updated on

 ಬೆಂಗಳೂರು: ರಾಜ್ಯದಲ್ಲಿ ಆಸಿಡ್ ದಾಳಿ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ 25 ಮಂದಿ ವೃತ್ತಿಪರರಿಗೆ ವಿಶೇಷ ತರಬೇತಿ ನೀಡಲಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಆಸಿಡ್ ದಾಳಿಯ ವಿರುದ್ಧ ಯೋಧರ ತಂಡ ಅಸ್ತಿತ್ವಕ್ಕೆ ಬರಲಿದೆ.

ದೇಶಾದ್ಯಂತ ಆಸಿಡ್ ದಾಳಿ ಸಂತ್ರಸ್ತರಿಗೆ ಮಹತ್ವದ ನೆರವು, ರಕ್ಷಣೆ ನೀಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಈ ತಂಡ ಮಾಡಲಿದೆ. ಪ್ರಥಮ ಚಿಕಿತ್ಸೆ, ಮಾನಸಿಕ ಸಮಾಲೋಚನೆ, ಭಾವನಾತ್ಮಕ ಸಬಲೀಕರಣದ ಸೇವೆಗಳು ಈ ತಂಡದಿಂದ ಲಭ್ಯವಾಗಲಿದೆ. 

ವೃತ್ತಿಪರರು ಭಿನ್ನ ರೀತಿಯ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಹೈಬ್ರಿಡ್-ಮಾದರಿಯ ತರಬೇತಿಯನ್ನು ಪಡೆದಿದ್ದಾರೆ.  ವಸಂತನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಸುನಿತಾ ಕೆ ಮಣಿ ನೇತೃತ್ವದ Emotional First Aid Academy (ಎಮೋಷನಲ್ ಫರ್ಸ್ಟ್ ಏಡ್ ಅಕಾಡೆಮಿ)ಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸುನಿತಾ ಅವರು ಆಸಿಡ್ ದಾಳಿಯ ಸಂತ್ರಸ್ತರು ಎದುರಿಸುತ್ತಿರುವ ಭೀಕರತೆಯನ್ನು ವಿವರಿಸಿದರು ಮತ್ತು ಅವರ ಜೀವನವನ್ನು ಪುನರ್ನಿರ್ಮಿಸಲು ಸಂತ್ರಸ್ತರನ್ನು ಸಬಲೀಕರಣಗೊಳಿಸುವುದು ತರಬೇತಿಯ ಉದ್ದೇಶವನ್ನು ತಿಳಿಸಿದರು. ದೈಹಿಕ ಚಿಕಿತ್ಸೆಯ ಆಚೆಗೆ, ಈ ಸಂತ್ರಸ್ತರಿಗೆ ಮಾನಸಿಕ ಮತ್ತು ಭಾವನಾತ್ಮಕ ಆರೈಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಈ ಉಪಕ್ರಮ ಆಸಿಡ್ ದಾಳಿಯಿಂದ ಬದುಕುಳಿದವರ ವಿವಿಧ ಅಗತ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ದಾಪುಗಾಲಿಟ್ಟಿದೆ, ಅವರ ಚೇತರಿಕೆಯ ಪ್ರಯಾಣದಲ್ಲಿ ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುತ್ತದೆ. ಆಸಿಡ್ ದಾಳಿ ಸಂತ್ರಸ್ತರಿಗೆ ಮಾನಸಿಕ ಮತ್ತು ಭಾವನಾತ್ಮಕ ಆರೈಕೆ ಅತ್ಯಗತ್ಯವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com