ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ: ಬೆಂಗಳೂರು ಆಗ್ನೇಯ ಪೊಲೀಸರಿಂದ 'ವಿ ಕೇರ್' ಸಹಾಯವಾಣಿ ಆರಂಭ

ನಗರದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸರು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿ ಕೇರ್ ಎಂಬ ಸಹಾಯವಾಣಿಯನ್ನು  ಪ್ರಾರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸರು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿ ಕೇರ್ ಎಂಬ ಸಹಾಯವಾಣಿಯನ್ನು  ಪ್ರಾರಂಭಿಸಿದ್ದಾರೆ.

ಸಹಾಯವಾಣಿ ಸಂಖ್ಯೆ 8277946600 ಕ್ಕೆ ಕರೆ ಮಾಡಿ ಕನ್ನಡ ಮಾತ್ರವಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ವಿಭಾಗದ ವ್ಯಾಪ್ತಿಯ ಪ್ರದೇಶಗಳಲ್ಲಿ ಹೊರ ರಾಜ್ಯಗಳ ಜನರು ಕೂಡ ವಾಸಿಸುತ್ತಿದ್ದಾರೆ. ಹೀಗಾಗಿ ಈ ಸಹಾಯವಾಣಿಗೆ ಕರೆ ಮಾಡಿ ಕನ್ನಡ ಮಾತ್ರವಲ್ಲದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮೂಲಗಳ ಪ್ರಕಾರ, ಈ ಬಹುಭಾಷಾ ವಿಧಾನವು ಸಂಕಷ್ಟದಲ್ಲಿರುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಮಾತನಾಡಿ, ಸಂಕಷ್ಟದಲ್ಲಿರುವವರು ಅಥವಾ ಅವರ ಸಂಬಂಧಿಕರು ಅಥವಾ ಪೋಷಕರು ಸಹಾಯಕ್ಕಾಗಿ 8277946600 ಗೆ ಡಯಲ್ ಮಾಡಬಹುದು ಎಂದರು.

ಈ ಸಹಾಯವಾಣಿಯಲ್ಲಿ ವಾಟ್ಸ್​ಆ್ಯಪ್ ಕೂಡ ಇದೆ. ಜನರು ತಮ್ಮ ಸಂಕಟ ಮತ್ತು ನೋವನ್ನು ಇದರ ಮೂಲಕವೂ ಹಂಚಿಕೊಳ್ಳಬಹುದಾಗಿದೆ. ಒತ್ತಡ ಮತ್ತು ಆತಂಕವು ಎಲ್ಲಾ ವಯೋಮಾನದವರ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಕೆ ಬಾಬಾ ಹೇಳಿದರು. ಅಲ್ಲದೆ, ನಗರದಲ್ಲಿ ಜನವರಿಯಿಂದ ಅಕ್ಟೋಬರ್‌ವರೆಗೆ 1,967 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಸಂತ್ರಸ್ತರಿಗೆ ಸಕಾಲದಲ್ಲಿ ನೆರವು ನೀಡಿದ್ದರೆ ಕೆಲವು ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬಹುದಿತ್ತು ಎಂದರು.

ಮಾನಸಿಕವಾಗಿ ಸವಾಲಿನ ಸಂದರ್ಭಗಳು ಮತ್ತು ಆತಂಕವನ್ನು ನಿಭಾಯಿಸಲು ಪೊಲೀಸ್ ಇಲಾಖೆಯ 50 ಮಹಿಳಾ ಸಿಬ್ಬಂದಿ ನಿಮ್ಹಾನ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ. ಆರಂಭದಲ್ಲಿ, ಸಿಬ್ಬಂದಿ ಫೋನ್ ಮೂಲಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಈ ಉಪಕ್ರಮದ ಭಾಗವಾಗಿ, ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ ಚಿಕಿತ್ಸೆ ಪಡೆಯಲು ಸಹಾಯ ಮಾಡುತ್ತಾರೆ ಎಂದು ವಿವರ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com