ತಿರುಚಿದ ಫೋಟೋ ಪ್ರಕರಣ: ಯುವತಿ ದೂರು, ಬಿಪಿಒ ಸಂಸ್ಥೆ ಉದ್ಯೋಗಿ ಬಂಧನ! 

ಬಿಪಿಒ ಸಂಸ್ಥೆಯೊಂದರ ಗ್ರಾಹಕ ಸೇವಾ ಏಜೆಂಟ್ ಓರ್ವನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. 
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಿಪಿಒ ಸಂಸ್ಥೆಯೊಂದರ ಗ್ರಾಹಕ ಸೇವಾ ಏಜೆಂಟ್ ಓರ್ವನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. 

ಬಂಧನಕ್ಕೊಳಗಾಗಿರುವ 25 ವರ್ಷದ ವ್ಯಕ್ತಿಯ ಗೆಳತಿ ನೀಡಿರುವ ದೂರನ್ನು ಆಧರಿಸಿ ಸಿಸಿಬಿ ಭಾಗವಾಗಿರುವ ಸೈಬರ್ ಕ್ರೈಮ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. 

ಇತರ ಮಹಿಳೆಯರು, ತನ್ನದು ಹಾಗೂ ತನ್ನ ಸಹೋದ್ಯೋಗಿಗಳದ್ದು ಸೇರಿದಂತೆ ಒಟ್ಟು 13,000 ತಿರುಚಿದ ನಗ್ನ ಚಿತ್ರಗಳು ಯುವತಿಗೆ ತನ್ನ ಗೆಳೆಯನ ಮೊಬೈಲ್ ನಲ್ಲಿರುವುದು ಕಂಡುಬಂದಿದೆ.

ಸಂತ್ರಸ್ತೆ 22 ವರ್ಷದ ಯುವತಿಯಾಗಿದ್ದು, ಬೆಳ್ಳಂದೂರಿನ ಇಕೋಸ್ಪೇಸ್ ನಲ್ಲಿರುವ ಬಿಪಿಒ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆಕೆಯ ಗೆಳೆಯ ಆದಿತ್ಯ ಸಂತೋಷ್ ವಿರುದ್ಧ ನವೆಂಬರ್ 23 ರಂದು ಯುವತಿ ದೂರು ದಾಖಲಾಗಿತ್ತು. ಎರಡು ದಿನಗಳ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯು ಕಳೆದ ಐದು ತಿಂಗಳಿನಿಂದ ಗ್ರಾಹಕ ಸೇವಾ ಏಜೆಂಟ್ ಆಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com