ವಾಟ್ಸಾಪ್ ಸ್ಟೇಟಸ್ ನಲ್ಲಿ ಪಾಕಿಸ್ತಾನ ಧ್ವಜದ ಚಿತ್ರ: ಕೊಪ್ಪಳ ಮೂಲದ ವ್ಯಕ್ತಿ ಬಂಧನ

ಪಾಕಿಸ್ತಾನದ ಧ್ವಜವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದ ಕೊಪ್ಪಳ ಮೂಲದ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ರಾಜೇಸಾಬ್ ನಾಯಕ್ ಎಂದು ಗುರುತಿಸಲಾಗಿದ್ದು, ಈತ ಕುಷ್ಟಗಿ ತಾಲೂಕಿನ ತಾವರೆಗೆರಾ ನಿವಾಸಿಯಾಗಿದ್ದು, ಸೈಕಲ್ ಅಂಗಡಿ ನಡೆಸುತ್ತಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಪಾಕಿಸ್ತಾನದ ಧ್ವಜವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದ ಕೊಪ್ಪಳ ಮೂಲದ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ರಾಜೇಸಾಬ್ ನಾಯಕ್ ಎಂದು ಗುರುತಿಸಲಾಗಿದ್ದು, ಈತ ಕುಷ್ಟಗಿ ತಾಲೂಕಿನ ತಾವರೆಗೆರಾ ನಿವಾಸಿಯಾಗಿದ್ದು, ಸೈಕಲ್ ಅಂಗಡಿ ನಡೆಸುತ್ತಿದ್ದಾನೆ. 

ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ರಾಜೇಸಾಬ್ ನಾಯಕ್ ನನ್ನು ಬಂಧಿಸಲಾಗಿದೆ. ಈ ಘಟನೆ ನವೆಂಬರ್ 24 ರಂದು ಬೆಳಕಿಗೆ ಬಂದಿತ್ತು. ಸುತ್ತಮುತ್ತಲ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡರು. 

ಆರೋಪಿಯನ್ನು ತಾವರಗೆರಾದ ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಸೈಕಲ್ ಅಂಗಡಿಯಿಂದ ವಶಕ್ಕೆ ಪಡೆದು ಪೊಲೀಸರು ಕರೆತಂದರು. ಆತನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿರುವ ಪಾಕಿಸ್ತಾನ ಧ್ವಜದ ಬಗ್ಗೆ ಮತ್ತು ಆತನ ವಾಟ್ಸಾಪ್ ಸ್ಟೇಟಸ್ ಆಗಿ ಧ್ವಜದ ಜೊತೆಗೆ ಭಾಷಣದ ಆಹ್ವಾನ ಪತ್ರಿಕೆಯನ್ನು ಹಾಕಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ತಾನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿರುವ ಧ್ವಜದ ಚಿತ್ರ ಪಾಕಿಸ್ತಾನದ್ದು ಎಂದು ಗೊತ್ತಿದೆಯೇ ಎಂದು ಕೇಳಿದಾಗ ಆತ ಗೊಂದಲದ ಉತ್ತರ ನೀಡಿದ್ದಾನೆ. ಸಮಾಜದಲ್ಲಿ ಗೊಂದಲ ಅಥವಾ ದ್ವೇಷವನ್ನು ಹುಟ್ಟುಹಾಕಲು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ನಾಯಕ್ ವಿರುದ್ಧ ಐಪಿಸಿ ಸೆಕ್ಷನ್ 153 (ಎ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಆಧ್ಯಾತ್ಮಿಕ ಭಾಷಣಕ್ಕಾಗಿ ಆಮಂತ್ರಣ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ. 

ವಾಟ್ಸಾಪ್ ಸ್ಟೇಟಸ್ ಫೋಟೋ ವೈರಲ್ ಆದಾಗ, ಶಾಮಿದ್‌ಸಾಬ್ ಎಂಬಾತ ಅಂತಹ ಆಹ್ವಾನ ಪತ್ರಿಕೆಯನ್ನು ರಚಿಸಿದ್ದಾರೆ ಎಂದು ಹಲವರು ಭಾವಿಸಿದ್ದರು. ಆದರೆ, ತನಿಖೆಯ ವೇಳೆ ಶಮೀದ್‌ಸಾಬ್‌ನ ಕೈವಾಡವಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜೇಸಾಬ್ ನಾಯಕ್ ಯಾಕೆ ಹೀಗೆ ಮಾಡಿದ ಎಂಬುದಕ್ಕೆ ಸ್ಪಷ್ಟ ವಿವರಣೆ ಸಿಕ್ಕಿಲ್ಲ. ಪ್ರಸ್ತುತ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com