ಬೆಳಗಾವಿ ಅಧಿವೇಶನ: ಪೊಲೀಸ್ ವಾಸ್ತವ್ಯಕ್ಕೆ 2 ಕೋಟಿ ರೂ. ವೆಚ್ಚದಲ್ಲಿ 4 ಜರ್ಮನ್ ಟೆಂಟ್ ನಿರ್ಮಾಣ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಭದ್ರತೆಗಾಗಿ 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸುವರ್ಣ ಸೌಧ
ಸುವರ್ಣ ಸೌಧ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಭದ್ರತೆಗಾಗಿ 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಪೊಲೀಸ್ ಸಿಬ್ಬಂದಿಯ ವಾಸ್ತವ್ಯಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಬೃಹತ್ ಜರ್ಮನ್ ಟೆಂಟ್​ಗಳನ್ನು ನಿರ್ಮಿಸಲಾಗುತ್ತಿದೆ.

ಸುವರ್ಣ ವಿಧಾನ ಸೌಧದ ಅಲಾರವಾಡ ಬಳಿ 5 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕೆ ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ನೊಂದಿಗೆ ಬೃಹತ್ ಟೌನ್ ಶಿಪ್ ನಿರ್ಮಿಸಲಾಗುವುದು. ಬಂದೋಬಸ್ತ್‌ಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ ಇಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಎಸ್​ಎಸ್ ಸಿದ್ರಾಮಪ್ಪ ಅವರು ಮಾಹಿತಿ ನೀಡಿದ್ದಾರೆ.

ಒಂದು ಜರ್ಮನ್ ಟೆಂಟ್​ 100 ಅಡಿ ಅಗಲ, 200 ಅಡಿ ಉದ್ದ ಇರಲಿದೆ. ನಾಲ್ಕು ದೊಡ್ಡ ಮತ್ತು ಒಂದು ಚಿಕ್ಕ ಟೆಂಟ್ ನಿರ್ಮಿಸಲಾಗುತ್ತಿದೆ. ಒಂದು ಬೃಹತ್ ಟೆಂಟ್​ನಲ್ಲಿ 500 ಸಿಬ್ಬಂದಿ ಮಲಗಲು ವ್ಯವಸ್ಥೆ ಇರಲಿದೆ. ಸಿಂಗಲ್ ಕಾಟ್ ಜೊತೆ ಬೆಡ್-ದಿಂಬು, ಬೆಡ್​​ಶೀಟ್, ಹಾಸಿಗೆ, ಚಾರ್ಜಿಂಗ್ ವ್ಯವಸ್ಥೆ ಇರಲಿದೆ.

ಹಿರಿಯ ಅಧಿಕಾರಿಗಳಿಗಾಗಿ ಚಿಕ್ಕ ಟೆಂಟ್ ನಿರ್ಮಾಣ ಮಾಡಲಾಗಿದೆ. ಏಕಕಾಲದಲ್ಲಿ 2 ಸಾವಿರ ಜನರು ಮಲಗಬಹುದಾಗಿದೆ. ಪಾಳಿ ಕೆಲಸ ಮಾಡೋದರಿಂದ ಯಾವುದೇ ತೊಂದರೆ ಆಗಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com