ರಾಹುಲ್ ಗಾಂಧಿ ಆಧುನಿಕ ರಾವಣ: ಬಿಜೆಪಿ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ರಾಹುಲ್ ಗಾಂಧಿಯವರನ್ನು’ರಾವಣ’ನಂತೆ ಬಿಂಬಿಸಿ ಬಿಜೆಪಿ ಪೋಸ್ಟರ್ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ,  ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಿತು.
ಬಿಜೆಪಿ ರಿಲೀಸ್ ಮಾಡಿರುವ ಪೋಸ್ಟರ್,
ಬಿಜೆಪಿ ರಿಲೀಸ್ ಮಾಡಿರುವ ಪೋಸ್ಟರ್,
Updated on

ಬೆಂಗಳೂರು : ರಾಹುಲ್ ಗಾಂಧಿಯವರನ್ನು’ರಾವಣ’ನಂತೆ ಬಿಂಬಿಸಿ ಬಿಜೆಪಿ ಪೋಸ್ಟರ್ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ,  ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಿತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೈಲಾಗದವರ ಕೊನೆ ಅಸ್ತ್ರ ಅಪಪ್ರಚಾರ ಮಾಡುವುದು. ಅವರಲ್ಲಿ ವಾಟ್ಸ್ ಆಪ್ ಯೂನಿವರ್ಸಿಟಿ ಚೇರ್ಮನ್ ಯಾರು? ರಾಜ್ಯದಲ್ಲಿ 700 ಜನರು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡ್ತಿದಾರೆ. ಸುಳ್ಳನ್ನು ನಿಜ ಎಂದು ಬಿಂಬಿಸೋದೆ ಇವರ ಕೆಲಸ. ನಮ್ಮ ನಾಯಕರನ್ನು ರಾವಣನಿಗೆ ಹೋಲಿಸಿದ್ರೆ, ಅವರನ್ನು ಶಕುನಿಗೆ, ಕೀಚಕನಿಗೆ, ದುರ್ಯೋಧನನಿಗೆ ಹೋಲಿಸಬಹುದು. ಹೋಲಿಸೋದೇನು, ಅವರು ಇರೋದೆ ಹಾಗೆ. ಬಿಜೆಪಿ ನಾಯಕರು ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಮಾತನಾಡ್ತಾರೆ. ಇದು ಹರಿಶ್ಚಂದ್ರ ರೀತಿನಾ? ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ಬಿಜೆಪಿ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯವರಿಗೆ ಭಯ ಹುಟ್ಟಿಕೊಂಡಿದೆ. ರಾಹುಲ್ ಗಾಂಧಿ ಅವರನ್ನು ರಾವಣನ ರೀತಿ ಬಿಂಬಿಸಿದ್ದಾರೆ. ಉತ್ತರ ಭಾರತದಲ್ಲಿ ರಾವಣನ್ನೂ ಪೂಜಿಸುವ ಸಂಸ್ಕೃತಿ ಇದೆ. ರಾಹುಲ್ ಗಾಂಧಿ ಮೇಲೆ ಎಷ್ಟು ಭಯ ಇದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ  ನಡೆಸಿದರು.

ರಾಹುಲ್ ಗಾಂಧಿಯವರ "ಭಾರತ್ ಜೋಡೋ" ಯಾತ್ರೆಯ ನಂತರ, I.N.D.I.A ಮೈತ್ರಿಯನ್ನು ರಚಿಸಲಾಯಿತು, ಮೈತ್ರಿ ಬಲಗೊಳ್ಳುತ್ತಿದೆ  ಹೀಗಾಗಿ ಬಿಜೆಪಿಯವರಿಗೆ ಭಯ ಎದುರಾಗಿದೆ ಎಂದು ಅವರು ಹೇಳಿದರು. ಬಿಜೆಪಿ ನಾಯಕರು ರಾಮಾಯಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಕಾರಣ ಅವರು ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com