ಮಾಧ್ಯಮಗಳು ಸಮಾಜ, ಸರ್ಕಾರದ ನಡುವೆ ಸೌಹಾರ್ದದ ಸೇತುವೆಯಾಗಬೇಕು: ಸಿಎಂ ಸಿದ್ದರಾಮಯ್ಯ

ಮಾಧ್ಯಮಗಳು ಸಮಾಜ ಮತ್ತು ಸರ್ಕಾರದ ನಡುವೆ ಸೌಹಾರ್ದದ ಸೇತುವೆಯಾಗಬೇಕು. ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. 
ಬಿಕೆ ರವಿ ಸಂಪಾದಕತ್ವದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಿತರರು
ಬಿಕೆ ರವಿ ಸಂಪಾದಕತ್ವದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಿತರರು
Updated on

ಬೆಂಗಳೂರು: ಮಾಧ್ಯಮಗಳು ಸಮಾಜ ಮತ್ತು ಸರ್ಕಾರದ ನಡುವೆ ಸೌಹಾರ್ದದ ಸೇತುವೆಯಾಗಬೇಕು. ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. 

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ ಸಂಪಾದಕತ್ವದ "ಮೀಡಿಯಾ  ಆಫ್ ದಿ ಮಿಲೇನಿಯಂ" ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ,  ಬಿ.ಕೆ.ರವಿ ಅವರಿಗೆ ಬರೆಯುವ ಶಕ್ತಿ ಇದೆ. ಇದುವರೆಗೂ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಮಾಧ್ಯಮ ಸಾಕ್ಷರತೆ ಕುರಿತಾದ ಈ ಹೊಸ ಪುಸ್ತಕ ಮಾಧ್ಯಮ ಕ್ಷೇತ್ರದ ಅರಿವನ್ನು ವಿಸ್ತರಿಸಲಿ.  ವೃತ್ತಿಧರ್ಮ ಕಾಪಾಡಿಕೊಂಡರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರು ಮುಂದಾಗಬೇಕು. ಸಂವಿಧಾನ ಉಳಿದರೆ ಪತ್ರಿಕಾ ವೃತ್ತಿಯ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ತಿಳಿಸಿದರು.‌ 

ಭಾರತೀಯ ಮಾಧ್ಯಮ ಮತ್ತು ಉದ್ಯಮ ಸೃಷ್ಟಿಸಿರುವ ಮತ್ತು ಎದುರಿಸುತ್ತಿರುವ ಇವತ್ತಿನ ಸಮಸ್ಯೆಗಳಿಗೆ ಮಾಧ್ಯಮ ಸಾಕ್ಷರತೆ ಪರಿಹಾರ ಆಗಬಲ್ಲದು. ಹೀಗಾಗಿ ಪದವಿ ಪೂರ್ವ ಹಂತದಿಂದಲೇ ಮಾಧ್ಯಮ ಸಾಕ್ಷರತೆಗೆ ಪೂರಕವಾದ ಪಠ್ಯಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಕೃತಿಯ ಸಂಪಾದಕರಾದ ಬಿ.ಕೆ.ರವಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮುನ್ನುಡಿ ಹಾಡಿರುವ ಕರ್ನಾಟಕ ಮಾದರಿ ಅಭಿವೃದ್ಧಿ ಕುರಿತಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ  ಕಿರುಚಿತ್ರವನ್ಮು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com