ದಿಢೀರ್ ಬೆಲೆ ಕುಸಿತದಿಂದ ರೈತರು ಕಂಗಾಲು; ಟೊಮೇಟೊಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ!

ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ತಿಂಗಳ ಹಿಂದೆ ಕೆಜಿಗೆ 200 ರೂ. ಗೆ ತಲುಪಿದ ನಂತರ ಟೊಮೇಟೊ ಬೆಲೆ ತೀವ್ರ ಕುಸಿತ ಕಂಡಿದೆ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ. ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ. ಗೆ ಟೊಮೇಟೊ ಮಾರಾಟವಾಗುತ್ತಿದೆ.
ಚಿತ್ರದುರ್ಗದ ಚಳ್ಳಕೆರೆಯ ಚಿಕ್ಕಮ್ಮನಹಳ್ಳಿ ಟೊಮೇಟೊ ಮಾರುಕಟ್ಟೆ ಮುಂಭಾಗ ಬುಧವಾರ ರಸ್ತೆಗೆ ಟೊಮೇಟೊ ಎಸೆದ ರಂಗಸ್ವಾಮಿ.
ಚಿತ್ರದುರ್ಗದ ಚಳ್ಳಕೆರೆಯ ಚಿಕ್ಕಮ್ಮನಹಳ್ಳಿ ಟೊಮೇಟೊ ಮಾರುಕಟ್ಟೆ ಮುಂಭಾಗ ಬುಧವಾರ ರಸ್ತೆಗೆ ಟೊಮೇಟೊ ಎಸೆದ ರಂಗಸ್ವಾಮಿ.

ಚಳ್ಳಕೆರೆ: ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ತಿಂಗಳ ಹಿಂದೆ ಕೆಜಿಗೆ 200 ರೂ. ಗೆ ತಲುಪಿದ ನಂತರ ಟೊಮೇಟೊ ಬೆಲೆ ತೀವ್ರ ಕುಸಿತ ಕಂಡಿದೆ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ. ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ. ಗೆ ಟೊಮೇಟೊ ಮಾರಾಟವಾಗುತ್ತಿದೆ. ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಟೊಮೆಟೊ ಮಾರುಕಟ್ಟೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಕೆಜಿಗೆ 2 ರೂ. ಗೆ ಕುಸಿದಿದೆ.

ತಿಂಗಳ ಹಿಂದೆ 2,000 ರಿಂದ 2,500 ರೂ. ಗೆ ಮಾರಾಟವಾಗುತ್ತಿದ್ದ 15 ಕೆಜಿ ಟೊಮೇಟೊ ಕ್ರೇಟ್‌ಗೆ ಈಗ 20-30 ರೂ. ಕೂಡ ಸಿಗುತ್ತಿಲ್ಲ. ಇದು ರೈತರನ್ನು ತೀವ್ರವಾಗಿ ಬಾಧಿಸುತ್ತಿದೆ. 'ಇದು ರೈತರಿಗೆ ಟೊಮೇಟೊ ಫಸಲನ್ನು ಕೀಳುವ ವೆಚ್ಚವನ್ನು ಸಹ ಮರುಪಡೆಯಲು ಸಹಾಯ ಮಾಡುತ್ತಿಲ್ಲ ಮತ್ತು ಅವರನ್ನು ಆರ್ಥಿಕ ತೊಂದರೆಗೆ ತಳ್ಳಿದೆ. ಒಂದು ತಿಂಗಳ ಹಿಂದೆ ಟೊಮೇಟೊ ರಕ್ಷಣೆಗೆ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿದ ಹಲವು ರೈತರು ಈಗ ಬೆಳೆಯನ್ನು ಗಮನಿಸದೆ ಹಾಗೆಯೇ ಬಿಟ್ಟಿದ್ದಾರೆ ಮತ್ತು ಜನರು ಅವುಗಳನ್ನು ಕೀಳಲು ಮುಕ್ತರಾಗಿದ್ದಾರೆ' ಎಂದು ಮೂಲಗಳು ತಿಳಿಸಿವೆ. 

ಚಳ್ಳಕೆರೆಯ ತಳಕು ಹೋಬಳಿಯ ಅಜ್ಜನಹಳ್ಳಿ ಗ್ರಾಮದ ರಂಗಸ್ವಾಮಿ 1.50 ಲಕ್ಷ ರೂ. ಖರ್ಚು ಮಾಡಿ ಎರಡು ಎಕರೆಯಲ್ಲಿ ಟೊಮೇಟೊ ಬೆಳೆದು ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮಾರಾಟಕ್ಕೆ ಕೊಂಡೊಯ್ದಿದ್ದಾರೆ. ಆದರೆ, ವ್ಯಾಪಾರಿಗಳು ಕೇವಲ 30 ರೂ. ಗೆ ಕ್ರೇಟ್ ಅನ್ನು ಕೊಂಡುಕೊಳ್ಳಲು ಮುಂದಾದಾಗ ಬಲವಂತವಾಗಿ ರಸ್ತೆಗೆ ಸುರಿದಿದ್ದಾರೆ.

ಈ ಬೆಳೆ ಬೆಳೆಯಲು ತಗುಲಿರುವ ವೆಚ್ಚವನ್ನು ಸಹ ಪಡೆಯಲು ಸಾಧ್ಯವಾಗಿಲ್ಲ. ಬೆಳೆ ಇಳಿಕೆಯಾಗಿರುವುದರಿಂದ, ಪ್ರತಿಭಟನೆಯ ಸಂಕೇತವಾಗಿ ನಾನು ಟೊಮೇಟೊವನ್ನು ರಸ್ತೆಗೆ ಸುರಿಯಲು ನಿರ್ಧರಿಸಿದ್ದೇನೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಇದರಿಂದ ರೈತರಿಗೆ ಟೊಮೇಟೊ ಮೌಲ್ಯ ಸಿಗುತ್ತದೆ. ಒಂದು ಕ್ರೇಟ್ ಟೊಮೇಟೊ ಕೀಳಲು 100 ರೂ. ವೆಚ್ಚವಾಗುತ್ತದೆ. ಆದರೆ, ಕೇವಲ 30 ರೂ.ಗೆ ಮಾರುವುದು ಹೇಗೆ ಎಂದು ರಂಗಸ್ವಾಮಿ ಪ್ರಶ್ನಿಸಿದರು.

ಚಳ್ಳಕೆರೆಯ ಚಿಕ್ಕಮ್ಮನಹಳ್ಳಿ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿ 15 ಕೆಜಿಯ ಕ್ರೇಟ್ ಟೊಮೇಟೊವನ್ನು 20 ರಿಂದ 160 ರೂ. ಗೆ ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಎರಡನೇ ಟೊಮೇಟೊ ಮಾರುಕಟ್ಟೆಯ ವ್ಯಾಪಾರಿ ವೆಂಕಟೇಶ್ ಟಿಎನ್‌ಐಇಗೆ ತಿಳಿಸಿದರು. ಕಳೆದ 10 ದಿನಗಳಿಂದ ಇದೇ ಟ್ರೆಂಡ್ ಆಗಿದ್ದು, ಟೊಮೇಟೊ ಕೀಳಲು ತಗಲುವ ವೆಚ್ಚವೂ ರೈತರಿಗೆ ಸಿಗುತ್ತಿಲ್ಲ ಹೀಗಾಗಿ ಮಾರುಕಟ್ಟೆಯ ಮುಂದೆಯೇ ಬಿಸಾಡುತ್ತಿದ್ದಾರೆ.

ಪ್ರತಿನಿತ್ಯ ಸುಮಾರು 40,000 ಕ್ರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ನಾವು ಇಂದು 5,000 ರಿಂದ 6,000 ಕ್ರೇಟ್‌ಗಳನ್ನು ಮಾತ್ರ ಪಡೆಯುತ್ತಿದ್ದೇವೆ. ನಾವು ದೆಹಲಿ ಮಾರುಕಟ್ಟೆಯಲ್ಲಿ ಟೊಮೇಟೊಗಳನ್ನು ಮಾರಾಟ ಮಾಡಲು ಬಯಸಿದರೆ, ಅವುಗಳ ಗುಣಮಟ್ಟವನ್ನು ಅವಲಂಬಿಸಿ ದೊಡ್ಡ ಪೆಟ್ಟಿಗೆಗಳಲ್ಲಿ ಹಾಕಬೇಕು ಮತ್ತು ಅದರ ಬೆಲೆ 110 ರಿಂದ 150 ರೂ. ಇರುತ್ತದೆ. ಇದು ಲಾಭದಾಯಕವಲ್ಲ ಎನ್ನುತ್ತಾರೆ ಅವರು.

ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಟೊಮೇಟೊ ರಾಷ್ಟ್ರೀಯ ಮಾರುಕಟ್ಟೆಗೆ ಬರಲು ಪ್ರಾರಂಭಿಸಿದ ನಂತರ ಬೆಲೆಯಲ್ಲಿ ಮತ್ತಷ್ಟು ಕುಸಿತ ಕಾಣುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. 

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಆರ್‌. ವಿರೂಪಾಕ್ಷ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಟೊಮೇಟೊ ಇಳುವರಿ ಅಧಿಕವಾಗಿದ್ದು, ಇದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com