ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನ ಬೆಂಗಳೂರಿನ ಮಹಿಳೆ ಏರ್ ಲಿಫ್ಟ್!

ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನಾ ವಿಶೇಷ ಚಿಕಿತ್ಸೆಗಾಗಿ ಇಸ್ರೇಲ್‌ಗೆ ತೆರಳಿದ್ದ 50ರ ಹರೆಯದ ಮಹಿಳೆ ಹಾಗೂ ಆಕೆಯ ಪತಿಯನ್ನು ಟೆಲ್‌ ಅವೀವ್‌ನಿಂದ ಬೆಂಗಳೂರಿಗೆ ವಿಶೇಷ ವೈದ್ಯಕೀಯ ಸೌಲಭ್ಯವಿರುವ ವಿಶೇಷ ವಿಮಾನದ ಮೂಲಕ ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್‌ ಕ್ರಿಟಿಕಲ್‌ ಕೇರ್‌ ಏರ್‌ ಟ್ರಾನ್ಸ್‌ಫರ್‌ ಟೀಮ್‌ (ಐಸಿಎಟಿಟಿ) ಕರೆತಂದಿದೆ. 
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ

ಬೆಂಗಳೂರು: ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನಾ ವಿಶೇಷ ಚಿಕಿತ್ಸೆಗಾಗಿ ಇಸ್ರೇಲ್‌ಗೆ ತೆರಳಿದ್ದ 50ರ ಹರೆಯದ ಮಹಿಳೆ ಹಾಗೂ ಆಕೆಯ ಪತಿಯನ್ನು ಟೆಲ್‌ ಅವೀವ್‌ನಿಂದ ಬೆಂಗಳೂರಿಗೆ ವಿಶೇಷ ವೈದ್ಯಕೀಯ ಸೌಲಭ್ಯವಿರುವ ವಿಶೇಷ ವಿಮಾನದ ಮೂಲಕ ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್‌ ಕ್ರಿಟಿಕಲ್‌ ಕೇರ್‌ ಏರ್‌ ಟ್ರಾನ್ಸ್‌ಫರ್‌ ಟೀಮ್‌ (ಐಸಿಎಟಿಟಿ) ಕರೆತಂದಿದೆ. 

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಯಲಹಂಕ ಮೂಲದ ಐಸಿಎಟಿಟಿಯ ಇಬ್ಬರು ಸಹ ಸಂಸ್ಥಾಪಕರು ಮಾಹಿತಿ ಹಂಚಿಕೊಂಡಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬದಿಂದ ನಮಗೆ ಕರೆ ಬಂದ ತಕ್ಷಣ, ನಮ್ಮ ತಂಡ ಆಕೆಯನ್ನು ಬೆಂಗಳೂರಿಗೆ ಕರೆತರುವ ಮಾರ್ಗ ಮತ್ತು ವಾಯುಪ್ರದೇಶಕ್ಕೆ ಸಂಬಂಧಿಸಿದ ಅಗತ್ಯ ಅನುಮತಿ ಪಡೆಯಿತು. ಏರ್ ಆಂಬ್ಯುಲೆನ್ಸ್‌ಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಸಿದ್ಧವಾಗಿ ಇರಿಸಲಾಗಿತ್ತು. ಸಿಬ್ಬಂದಿಯೊಂದಿಗೆ ಬೆಳಗಿನ ವಿಮಾನದಿಂದ ಅವರನ್ನು ಕಳುಹಿಸಲಾಯಿತು ಎಂದು ಡಾ. ಶಾಲಿನಿ ನಲ್ವಾಡ್ ತಿಳಿಸಿದರು. 

ಮುಖ್ಯ ವೈದ್ಯಕೀಯ ಅಧಿಕಾರಿ ಡಾ ರಾಮಚಂದ್ರ ರೆಡ್ಡಿ ಮತ್ತು ನಮ್ಮ ಮುಖ್ಯ ಪ್ಯಾರಾಮೆಡಿಕ್ ರತ್ನಾಕರ್ ರೇವೂರಿಗೆ ಇಸ್ರೇಲ್‌ನಲ್ಲಿರುವ ಡೆಪ್ಯುಟಿ ಹೈಕಮಿಷನ್ ಮೂಲಕ ವಿಶೇಷ ಏರೋ ಮೆಡಿಕಲ್ ವೀಸಾ ಪಡೆಯಲಾಯಿತು. 
ಇದನ್ನು ಕೇವಲ ಮೂರು ಗಂಟೆಗಳಲ್ಲಿ ಮಾಡಲಾಯಿತು ಎಂದು ಡಾ. ರಾಹುಲ್ ಸಿಂಗ್ ಸರ್ದಾರ್ ಮಾಹಿತಿ ನೀಡಿದರು. 

ಮಹಿಳೆ ಬೆಂಗಳೂರಿನಿಂದ ಹೊರಡಬೇಕಿತ್ತು ಆದರೆ ಅವರ ತುರ್ತು ವಿಮಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇತ್ತು. ಅದಕ್ಕಾಗಿ ಅವರನ್ನು ಗೋವಾಕ್ಕೆ ಕರೆದೊಯ್ದು ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಅಬುಧಾಬಿಗೆ ತೆರಳಿದ್ದರು. ಅಕ್ಟೋಬರ್ 5 ರಂದು ವಿಮಾನ ಟೆಲ್ ಅವೀವ್ ತಲುಪಿತು. ಅಲ್ಲಿ ನಮ್ಮ ಸಿಬ್ಬಂದಿ ಆಕೆಯ ಆರೋಗ್ಯವನ್ನು ಸ್ಥಿರಗೊಳಿಸಿ, ಅಕ್ಟೋಬರ್ 6 ರಂದು ಬೆಂಗಳೂರಿಗೆ ಕರೆ ತಂದರು. ನಂತರ ಅವರನ್ನು ಲ್ಯಾಂಡ್ ಆಂಬ್ಯುಲೆನ್ಸ್ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿತು ಎಂದು ಅವರು ವಿವರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com