ನಗರ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ: ವಾರಕ್ಕೆರಡು ಬಾರಿ ಸಾರ್ವಜನಿಕ ಸಾರಿಗೆ ಬಳಸಲು ಸಿಇಒಗಳು, ರಾಜಕೀಯ ನಾಯಕರ ಪಣ

ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಉಚಿತ ಪಾಸ್‌ಗಳನ್ನು ಒದಗಿಸುವ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ನಗರ ತಜ್ಞ ಮತ್ತು ಯುಲು ಸಹ-ಸಂಸ್ಥಾಪಕ ಆರ್‌ಕೆ ಮಿಶ್ರಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಈ ಸಂದರ್ಭದಲ್ಲಿ ನಗರದ ಸಂಚಾರ ದಟ್ಟಣೆಯನ್ನು ತಗ್ಗಿಸಲು, ಮೆಟ್ರೊ ಸಂಚಾರ ಮತ್ತು ಬಿಎಂಟಿಸಿಯ ಬಳಕೆಯನ್ನು ಹೆಚ್ಚಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ರಾಜೀವ್ ಗೌಡ, ಬಿಎಂಟಿಸಿ ಎಂಡಿ ಸತ್ಯವತಿ ಮತ್ತು ಪ್ರಮುಖ ಟೆಕ್ ಕಂಪನಿಗಳ ಸಿಇಒಗಳು ಹೊರ ವರ್ತುಲ ರಸ್ತೆ (ORR)ಯಲ್ಲಿ ಬುಧವಾರ ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಇಂಟೆಲ್‌ನ ಇಕೋಸ್ಪೇಸ್ ಕಚೇರಿಗೆ ಫೀಡರ್ ಬಸ್ ಸೇವೆಯಲ್ಲಿ ಸಂಚರಿಸಿದರು. 

ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ ಅಧ್ಯಕ್ಷರೂ ಆಗಿರುವ ಇಂಟೆಲ್‌ನ ಮಾನಸ್ ದಾಸ್, ವಿಎಂ ವೇರ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್‌ಕುಮಾರ್ ನಾರಾಯಣನ್, ಸುಸ್ಥಿರ ಪರಿಸರ ವ್ಯವಸ್ಥೆ ಸಹಯೋಗದ ಸಂಸ್ಥಾಪಕ ಜಯನ್ ದೇಸಾಯಿ, ಒರಾಕಲ್‌ನ ಮುತ್ತು ರಂಗನಾಥನ್, ಟೆಕ್ಕಿಗಳು ಮತ್ತು ನಾಗರಿಕ ಗುಂಪುಗಳು ಸಾರ್ವಜನಿಕ ಸಾರಿಗೆಯನ್ನು ಬಳಸಿ ಜನಮನ ಸೆಳೆಯುತ್ತಿದ್ದಾರೆ. 

ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (B.PAC) ಮತ್ತು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (WRI) ಇಂಡಿಯಾ ಪ್ರಾರಂಭಿಸಿದ 'ಪರ್ಸನಲ್2ಪಬ್ಲಿಕ್' ಉಪಕ್ರಮದ ಭಾಗವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಪ್ರತಿಜ್ಞೆಯನ್ನು ತೆಗೆದುಕೊಂಡರು. ಮೆಟ್ರೋ ರೈಲು, ಬಸ್ ಮತ್ತು ಪ್ರಯಾಣಿಕ ರೈಲುಗಳನ್ನು ವಾರಕ್ಕೆ ಎರಡು ಬಾರಿಯಾದರೂ ಇತರರನ್ನು ಅನುಸರಿಸಲು ಪ್ರೇರೇಪಿಸುತ್ತದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೊನೆಯ ಮೈಲಿ ಸಂಪರ್ಕವನ್ನು ಒದಗಿಸಲು ರಾಜ್ಯ ಸರ್ಕಾರವು ಈಗಿರುವ ಬಿಎಂಟಿಸಿ ಬಸ್ಸು ಸೇವೆಗೆ ಹಂತಹಂತವಾಗಿ 2,000 ಬಸ್‌ಗಳನ್ನು ಸೇರಿಸಲಿದೆ. ಇನ್ನು ಆರು ತಿಂಗಳಲ್ಲಿ ಬಸ್ ನಿಗಮದಲ್ಲಿ ಹಲವು ಬದಲಾವಣೆ ಆಗಲಿದೆ ಎಂದರು.

ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಪ್ರತಿ ಐದು ನಿಮಿಷಗಳಿಗೊಮ್ಮೆ ಫೀಡರ್ ಬಸ್ಸುಗಳು ಚಲಿಸುತ್ತವೆ. ವೃತ್ತಿಪರರು ಈಗ ಒತ್ತಡ ರಹಿತ ಸಾರ್ವಜನಿಕ ಸಾರಿಗೆಯನ್ನು ಬದಲಾಯಿಸಬಹುದು ಎಂದು ಸ್ಟೇಟ್ ಇನ್ಸ್ ಟಿಟ್ಯೂಟ್ ಫಾರ್ ದ ಟ್ರಾನ್ಸ್ ಫಾರ್ಮೇಶನ್ ಆಫ್ ಕರ್ನಾಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ರಾಜೀವ್ ಗೌಡ ಹೇಳಿದರು.

ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಉಚಿತ ಪಾಸ್‌ಗಳನ್ನು ಒದಗಿಸುವ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ನಗರ ತಜ್ಞ ಮತ್ತು ಯುಲು ಸಹ-ಸಂಸ್ಥಾಪಕ ಆರ್‌ಕೆ ಮಿಶ್ರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com