8 ಗಂಟೆಯಲ್ಲಿ 5 ಟ್ರಿಪ್, 137 ಕಿಮೀ ಟಾರ್ಗೆಟ್: ಒತ್ತಡದಲ್ಲಿ ಚಾಲಕರ ಕಾರ್ಯ ನಿರ್ವಹಣೆಯಿಂದ ಅಪಘಾತ ಹೆಚ್ಚಳ; ರಾಮಲಿಂಗಾರೆಡ್ಡಿ ಹೇಳೋದೇನು?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ ಗಳಿಂದ ನಡೆಯುತ್ತಿರುವ ರಸ್ತೆ ಅಪಘಾತದಲ್ಲಿ ಹೆಚ್ಚು ಜೀವ ಕಳೆದುಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಅಕ್ಟೋಬರ್ ತಿಂಗಳೊಂದರಲ್ಲೇ ಕಿಲ್ಲರ್ ಬಿಎಂಟಿಸಿಗೆ ಮೂವರು ಬಲಿಯಾಗಿದ್ದಾರೆ.
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ ಗಳಿಂದ ನಡೆಯುತ್ತಿರುವ ರಸ್ತೆ ಅಪಘಾತದಲ್ಲಿ ಹೆಚ್ಚು ಜೀವ ಕಳೆದುಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಅಕ್ಟೋಬರ್ ತಿಂಗಳೊಂದರಲ್ಲೇ ಕಿಲ್ಲರ್ ಬಿಎಂಟಿಸಿಗೆ ಮೂವರು ಬಲಿಯಾಗಿದ್ದಾರೆ.

ಅಪಘಾತಗಳು ಅನೇಕ ಕಾರಣಗಳಿಂದ ಸಂಭವಿಸುತ್ತಿವೆ. ಬಿಎಂಟಿಸಿ ಚಾಲಕರು ಕೆಲಸದ ಒತ್ತಡದಲ್ಲಿದ್ದಾರೆ. ಚಾಲಕರು ಕೇವಲ ಮೂರು ನಿಮಿಷದಲ್ಲಿ 1 ಕಿ.ಮೀ ದೂರ ಕ್ರಮಿಸಬೇಕು. ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಯ ಗಮನಿಸಿದರೆ, ಚಾಲಕರು ಇದನ್ನು ಹೇಗೆ ಪೂರ್ಣಗೊಳಿಸುತ್ತಾರೆ?

ಉದಾಹರಣೆಗೆ, ಎಂಟು-ಗಂಟೆಗಳ ಪಾಳಿಯಲ್ಲಿ, BMTC ಯ ಪಶ್ಚಿಮ ವಿಭಾಗದ ಅಡಿಯಲ್ಲಿ ಬರುವ ಒಬ್ಬ ಚಾಲಕ ಐದು ಟ್ರಿಪ್‌ಗಳಲ್ಲಿ 138 ಕಿಮೀ ಕ್ರಮಿಸಬೇಕು, ಅಂದರೆ ಅವನು ಪ್ರತಿ ಟ್ರಿಪ್‌ನಲ್ಲಿ 27 ಕಿಮೀಗಿಂತ ಹೆಚ್ಚು ಸಂಚರಿಸಬೇಕು, ಚಾಲಕರು ಕೇವಲ ನಾಲ್ಕು ಟ್ರಿಪ್‌ಗಳನ್ನು ಪೂರ್ಣಗೊಳಿಸಬಹುದು ಮತ್ತು ಎಂಟು ಗಂಟೆಗಳಲ್ಲಿ ತಮ್ಮ ಐದನೇ ಟ್ರಿಪ್ ಪ್ರಾರಂಭಿಸಬಹುದು. ಐದನೇ ಟ್ರಿಪ್ ಅನ್ನು ‘ಓವರ್ಟೈಮ್’ ಎಂದು ಪರಿಗಣಿಸಬೇಕು ಜೊತೆಗೆ ಚಾಲಕನಿಗೆ  ಓವರ್ ಟೈಮ್ ಕೆಲಸ ಮಾಡಿದ್ದಕ್ಕೆ  ಹಣ ಪಾವತಿಸಬೇಕು. ಆದರೆ, ಬಿಎಂಟಿಸಿ ಇದನ್ನು ಪರಿಗಣಿಸುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಕಾರ್ಯದರ್ಶಿ ವಿಜಯಭಾಸ್ಕರ್  ಹೇಳಿದ್ದಾರೆ.

ಸಾರಿಗೆ ಕಾರ್ಮಿಕರನ್ನು ನಿಯಂತ್ರಿಸುವ ಮೋಟಾರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಆಕ್ಟ್ 1961 ರ ಪ್ರಕಾರ, ಚಾಲಕನ ಎಂಟು ಗಂಟೆಗಳ ಕರ್ತವ್ಯವು ಡಿಪೋದಿಂದ ಬಸ್ ತೆಗೆದುಕೊಂಡ ಸಮಯದಿಂದ ಪ್ರಾರಂಭವಾಗುತ್ತದೆ. ಅವರು ಮಾರ್ಗವನ್ನು ಆಧರಿಸಿ, ಚಾಲಕರು ಯಾವುದೇ ಹೆಚ್ಚುವರಿ ವೇತನವಿಲ್ಲದೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಭಾಸ್ಕರ್ ಹೇಳಿದರು.

ಆರ್ಥಿಕ ಮುಗ್ಗಟ್ಟಿನ ನೆಪ ಹೇಳಿ ಬಸ್ ನಿಗಮ ವಾಹನ ನಿರ್ವಹಣೆಗೆ ಹಣ ಹಾಕುತ್ತಿಲ್ಲ ಎಂದು ದೂರಿದ್ದಾರೆ. ವರ್ಷವಿಡೀ ಬಸ್ಸುಗಳು ಪ್ರತಿದಿನ ಹಗಲಿರುಳು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಸವೆದಿರುವ ಮತ್ತು ಅನರ್ಹವಾಗಿರುವ ಬಿಡಿ ಭಾಗಗಳನ್ನು ಬದಲಾಯಿಸಬೇಕು. ಆದರೆ ಹೊಸ ಬಿಡಿ ಭಾಗಗಳನ್ನು ಖರೀದಿಸುವ ಬದಲು, ಕಾರ್ಯನಿರ್ವಹಿಸದ ಇತರ ಬಸ್‌ಗಳಿಂದ ಅಗತ್ಯವಿರುವ ಬಿಡಿಭಾಗವನ್ನು ತೆಗೆದುಕೊಂಡು ಬದಲಾಯಿಸಲು ಸಾರಿಗೆ ನಿಗಮವು ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿಗೆ ನಡೆದ ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಯುವ  ಚಾಲಕರು ಭಾಗಿಯಾಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. "ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಪಘಾತದಲ್ಲಿ ಭಾಗಿಯಾಗಿರುವ ಎಲ್ಲಾ ಬಿಎಂಟಿಸಿ ಚಾಲಕರನ್ನು ಕಡ್ಡಾಯವಾಗಿ ಡ್ರೈವಿಂಗ್ ತರಬೇತಿಗೆ ಕಳುಹಿಸಲಾಗುತ್ತದೆ ಮತ್ತು ಅವರ ಇನ್‌ಕ್ರಿಮೆಂಟ್ ಮತ್ತು ಇತರ ಪ್ರಯೋಜನಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಸಮಯಕ್ಕೆ ಸರಿಯಾಗಿ ಟ್ರಿಪ್‌ಗಳನ್ನು ಪೂರ್ಣಗೊಳಿಸಲು ಚಾಲಕರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರುತ್ತಿರುವ ಕಾರಣ ಮಾರ್ಗದ ಸಮಯವನ್ನು ಪರಿಷ್ಕರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾ  ರೆಡ್ಡಿ, ಅವರ ಮೇಲೆ ಯಾವುದೇ ಒತ್ತಡವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವಾಹನ ಬಳಕೆದಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಮತ್ತು ಬಿಎಂಟಿಸಿ ಚಾಲಕರನ್ನು ದೂಷಿಸುವುದನ್ನು ನಿಲ್ಲಿಸಬೇಕು ಎಂದು ರೆಡ್ಡಿ ಮತ್ತು ಭಾಸ್ಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com