ಮೈಸೂರು ದಸರಾ 2023: ಏರ್ ಶೋಗೆ ಅಭೂತಪೂರ್ವ ಪ್ರತಿಕ್ರಿಯೆ, ಭಾರಿ ಜನಸಾಗರ, 4 ಕಿ.ಮೀ ಟ್ರಾಫಿಕ್ ಜಾಮ್

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಏರ್ ಶೋಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಏರ್ ಶೋಗೆ ಜನಸಾಗರವೇ ಹರಿದುಬರುತ್ತಿದೆ.
ಮೈಸೂರು ಏರ್ ಶೋ
ಮೈಸೂರು ಏರ್ ಶೋ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಏರ್ ಶೋಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಏರ್ ಶೋಗೆ ಜನಸಾಗರವೇ ಹರಿದುಬರುತ್ತಿದೆ.

ದಸರಾ ಮಹೋತ್ಸವದ ಅಂಗವಾಗಿ ಇಲ್ಲಿನ ಬನ್ನಿಮಂಟಪದಲ್ಲಿ ಸಂಜೆ ಏರ್ಪಾಡಾಗಿರುವ ಏರ್ ಶೋ ವೀಕ್ಷಿಸಲು ಸಾವಿರಾರು ಜನ ಬರುತ್ತಿರುವುದಿಂದ ಬನ್ನಿಮಂಟಪ ಮೈದಾನದ ಸುತ್ತ ಸುಮಾರು 5 ಕಿ.ಮೀನಷ್ಟು ದೂರ ವಾಹನ ದಟ್ಟಣೆ ಏರ್ಪಟ್ಟಿದೆ. ಮೈದಾನವನ್ನು ಸಂಪರ್ಕಿಸುವ ಎಲ್ಐ ಸಿ ವೃತ್ತ ಮತ್ತು ಹೈವೇ ವೃತ್ತದಲ್ಲಿ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಏರ್ ಶೋ ತಾಲೀಮು ಪ್ರದರ್ಶನ ಭಾನುವಾರ ನಡೆದ ಸಂದರ್ಭದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ನಿನ್ನೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿತ್ತು. ಇಂದು ಪ್ರದರ್ಶನ ವೀಕ್ಷಣೆಗೆ ಪಾಸ್ ಕಡ್ಡಾಯ ಮಾಡಿದ್ದರು ಜನದಟ್ಟಣೆ ಹೆಚ್ಚಿದೆ.

ಗಮನ ಸೆಳೆದ ಲೋಹದ ಹಕ್ಕಿಗಳ ರಿಹಾರ್ಸಲ್‌
ಭಾನುವಾರ ಏರ್ ಶೋ ಪೂರ್ವಾಭ್ಯಾಸ (ರಿಹಾರ್ಸಲ್‌) ನಡೆಯಿತು. ಈ ವೇಳೆ ಆಗಸದಲ್ಲಿ ಬಗೆಬಗೆಯ ಲೋಹದ ಹಕ್ಕಿಗಳು ಸಾಹಸ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆದವು. ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಸೇರಿ ಹಲವು ಯುದ್ಧ ವಿಮಾನಗಳು ಆಕಾಶದಲ್ಲಿ ಚಮಾತ್ಕಾರ ತೋರಿಸುತ್ತಿದ್ದಂತೆ ನೆರೆದಿದ್ದ ಜನರು ಪುಳಕಿತಗೊಂಡರು. ಏರ್ ಶೋ ಪೂರ್ವಾಭ್ಯಾಸ ವೀಕ್ಷಿಸಲು ನೂರಾರು ಮಂದಿ ಆಗಮಿಸಿದ್ದರು. 2019ರಲ್ಲಿ ಮೈಸೂರಿನಲ್ಲಿ ದಸರಾ ಅಂಗವಾಗಿ ಏರ್ ಶೋ ನಡೆದಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಏರ್‌ ಶೋ ನಡೆಯುತ್ತಿರುವುದಿರಂದ ನೋಡಲು ಜನರು ಕಾತರದಿಂದ ಇದ್ದಾರೆ. 

ಮಹಾರಾಜರಿಂದ ಆಯುಧ ಪೂಜೆ
ಇಂದು ಆಯುಧಪೂಜೆ.. ರಾಜರಿಗೆ ಅತಿ ಮುಖ್ಯವಾದದ್ದು ಅವರ ಆಯುಧವಾಗಿದೆ. ಈ ಹಿನ್ನೆಲೆಯಲ್ಲಿ ಅನಾದಿ ಕಾಲದಿಂದಲೂ ವಿಜಯದಶಮಿಯಂದು ಆಯುಧ ಪೂಜೆಯನ್ನು (Ayudha Puja) ಮಾಡಿ ಗೌರವ ಸಲ್ಲಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಅಂತೆಯೇ ಇಂದೂ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆಯುಧಗಳಿಗೆ ಪೂಜೆ ಸಲ್ಲಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com