ಜಂಬೂಸವಾರಿ ತಾಲೀಮಿನ ವೇಳೆ ಅವಘಡ: ಕುಶಾಲತೋಪು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯ

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದ್ದು ಜಂಬೂ ಸವಾರಿಯ ಪುಷ್ಪಾರ್ಚನೆಯ ರಿಹರ್ಸಲ್ ಮಾಡುವಾಗ ಅವಘಡ ನಡೆದಿದೆ. ಸಿಡಿಮದ್ದು ತಾಲೀಮು ನಡೆಸುವಾಗ ಸಿಡಿದ ಪರಿಣಾಮ ಸಿಬ್ಬಂದಿ ಓರ್ವನಿಗೆ ಸುಟ್ಟ ಗಾಯಗಳಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದ್ದು ಜಂಬೂ ಸವಾರಿಯ ಪುಷ್ಪಾರ್ಚನೆಯ ರಿಹರ್ಸಲ್ ಮಾಡುವಾಗ ಅವಘಡ ನಡೆದಿದೆ. ಸಿಡಿಮದ್ದು ತಾಲೀಮು ನಡೆಸುವಾಗ ಸಿಡಿದ ಪರಿಣಾಮ ಸಿಬ್ಬಂದಿ ಓರ್ವನಿಗೆ ಸುಟ್ಟ ಗಾಯಗಳಾಗಿವೆ.

ನಿನ್ನೆ ಸಂಜೆ ಅರಮನೆಯಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್ ಮಾಡುವಾಗ ನಡೆಸಲಾಗಿತ್ತು. ಈ ವೇಳೆ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲ ತೋಪು ಸಿಡಿಸುವಾಗ ಸಿಡಿದ ಮದ್ದಿನಿಂದ ಸಿಬ್ಬಂದಿಗೆ ಗಾಯಗಳು ಆಗಿವೆ. ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇತ್ತ ನಾಡಿನೆಲ್ಲೆಡೆ ದಸರಾ ಹಬ್ಬದ ಸಡಗರ ಮನೆ ಮಾಡಿದೆ. ಆಯುಧ ಪೂಜೆ ಸಂಭ್ರಮ ಕಾಣ್ತಿದೆ. ಮೈಸೂರು ಅರಮನೆಯಲ್ಲಿಂದು ಆಯುಧ ಪೂಜೆ ಆರಂಭವಾಗಿದ್ದು, ಬೆಳಗ್ಗೆ 5 ಗಂಟೆ 30 ನಿಮಿಷಕ್ಕೆ ಚಂಡಿ‌ಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಈಗಾಗಲೇ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com