ಲಂಕಾ ಮಾನವ ಕಳ್ಳಸಾಗಣೆ ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಬಂಧಿಸಿದ ರಾಷ್ಟ್ರೀಯ ತನಿಖಾ ದಳ

ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ಇಮ್ರಾನ್ ಖಾನ್ ಅಲಿಯಾಸ್ ಹಾಜಾ ನಜರ್ಬೀಡೆನ್ (39) ನನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಬ್ಸ್ಕಾಂಡರ್ ಟ್ರ್ಯಾಕಿಂಗ್ ತಂಡ (ಎಟಿಟಿ)  ಬಂಧಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ಇಮ್ರಾನ್ ಖಾನ್ ಅಲಿಯಾಸ್ ಹಾಜಾ ನಜರ್ಬೀಡೆನ್ (39) ನನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಬ್ಸ್ಕಾಂಡರ್ ಟ್ರ್ಯಾಕಿಂಗ್ ತಂಡ (ಎಟಿಟಿ)   ಬಂಧಿಸಿದೆ

ತಮಿಳುನಾಡಿನ ಥೇಣಿ ಜಿಲ್ಲೆಯ ಅಜ್ಞಾತ ಸ್ಥಳದಲ್ಲಿ ಈತನನ್ನು ಸೆರೆ ಹಿಡಿದಿದೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಖಾನ್ ಪ್ರಾಥಮಿಕ ತನಿಖೆಯಲ್ಲಿ ಕುಖ್ಯಾತ ಕಳ್ಳಸಾಗಾಣಿಕೆದಾರ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಇಮ್ರಾನ್ ಖಾನ್ ಜೂ.2021ರಿಂದ ಪರಾರಿಯಾಗಿದ್ದ. ಎನ್‌ಐಎ ಬೆಂಗಳೂರು ಶಾಖೆಯ ಎಟಿಟಿ ಕಳೆದ ಹಲವು ತಿಂಗಳುಗಳಿಂದ ಆತನ ಚಲನವಲನಗಳ ಮೇಲೆ ನಿಗಾ ಇರಿಸಿತ್ತು. ಈತ ತಮಿಳುನಾಡಿನ ರಾಮನಾಥಪುರಂ ನಿವಾಸಿ. ಈ ಪ್ರದೇಶದಲ್ಲಿ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತ ಕುಖ್ಯಾತ ಮಾನವ ಕಳ್ಳಸಾಗಾಣಿಕೆದಾರ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ಹೇಳಿದೆ.

ಇಮ್ರಾನ್ ಖಾನ್, ಶ್ರೀಲಂಕಾದ ಪ್ರಜೆ ಈಶನ್ ಎಂಬಾತನ ಸಹಯೋಗದೊಂದಿಗೆ ಈ ಹಿಂದೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ನೊಂದಿಗೆ ಸಂಬಂಧ ಹೊಂದಿದ್ದ. 38 ಶ್ರೀಲಂಕಾ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ತಮಿಳುನಾಡಿನ ವಿವಿಧ ಸ್ಥಳಗಳಿಗೆ ಅಕ್ರಮವಾಗಿ ಸಾಗಿಸಲು ಯೋಜನೆ ರೂಪಿಸಿದ್ದ.

ಶ್ರೀಲಂಕಾದ ಪ್ರಜೆಗಳಿಗೆ ಕೆನಡಾಕ್ಕೆ ವಲಸೆ ಹೋಗಲು ಕಾನೂನುಬದ್ಧ ದಾಖಲಾತಿ ಮತ್ತು ಉದ್ಯೋಗಾವಕಾಶ ನೀಡುವ ಆಮಿಷ ಒಡ್ಡಿದ್ದ. ಇತರ ಆರೋಪಿಗಳ ನೆರವಿನಿಂದ ಅವರನ್ನು ಅವರ ತಾಯ್ನಾಡಿನಿಂದ ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಸಾಗಿಸುತ್ತಿದ್ದ. ತರುವಾಯ ಇತರ ರಾಷ್ಟ್ರಗಳಿಗೆ ಸಾಗಿಸುತ್ತಿದ್ದ. ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಇಮ್ರಾನ್ ಖಾನ್ ಪ್ರಮುಖ ವ್ಯಕ್ತಿ ಎಂದು ತನಿಖೆ ಸಂಸ್ಥೆ ಬಹಿರಂಗಪಡಿಸಿದೆ.

 ಅ.5 2021 ರಂದು ದಿನಕರನ್, ವಿಶ್ವನಾಥನ್, ರಸೂಲ್, ಸತಮ್ ಉಷೇನ್ ಮತ್ತು ಅಬ್ದುಲ್ ಮುಹೀತು ಎಂಬ ಐವರು ಭಾರತೀಯ ಆರೋಪಿಗಳ ವಿರುದ್ಧ ಎನ್‌ಐಎ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದೆ. ಪ್ರಕರಣದಲ್ಲಿ ಈವರೆಗೆ ಒಟ್ಟು 13 ಶಂಕಿತರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com