ಕೊಡವ ರಾಷ್ಟ್ರೀಯ ಸಮಿತಿಯಿಂದ ಕೊಡಗಿನಾದ್ಯಂತ 'ಪಾದಯಾತ್ರೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ರಾಷ್ಟ್ರೀಯ ಸಮಿತಿ ಜಿಲ್ಲೆಯಾದ್ಯಂತ ‘ಪಾದಯಾತ್ರೆ’ಗೆ ಕರೆ ನೀಡಿದೆ. ಸಮಿತಿ ಒಂಬತ್ತು ಬೇಡಿಕೆಗಳನ್ನು ಮುಂದಿಟ್ಟಿದ್ದು, ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
ಕೊಡವ ರಾಷ್ಟ್ರೀಯ ಸಮಿತಿ ಸಾಂದರ್ಭಿಕ ಚಿತ್ರ
ಕೊಡವ ರಾಷ್ಟ್ರೀಯ ಸಮಿತಿ ಸಾಂದರ್ಭಿಕ ಚಿತ್ರ

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ರಾಷ್ಟ್ರೀಯ ಸಮಿತಿ ಜಿಲ್ಲೆಯಾದ್ಯಂತ ‘ಪಾದಯಾತ್ರೆ’ಗೆ ಕರೆ ನೀಡಿದೆ. ಸಮಿತಿ ಒಂಬತ್ತು ಬೇಡಿಕೆಗಳನ್ನು ಮುಂದಿಟ್ಟಿದ್ದು, ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.

ಕೊಡವ ಸಮುದಾಯದ ಕಾನೂನು ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಅರ್ಥಶಾಸ್ತ್ರಜ್ಞ ಡಾ.ಸುಬ್ರಹ್ಮಣ್ಯ ಸ್ವಾಮಿ ಅವರ ಜನ್ಮದಿನದಂದು ಸೆ.15ರಂದು ತಲಕಾವೇರಿಯಿಂದ ಪಾದಯಾತ್ರೆ ಆರಂಭವಾಗಲಿದೆ ಎಂದು ಕೊಡವ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಎನ್‌ಯು ನಾಚಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಪಾದಯಾತ್ರೆಯನ್ನು ಐದು ಹಂತಗಳಲ್ಲಿ ಆಯೋಜಿಸಲಾಗುವುದು ಮತ್ತು ಸಮುದಾಯದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ 'ನಾಡ್ ಮಂದ್' (ಗ್ರಾಮಗಳಲ್ಲಿನ ಹಿಂದಿನ ನ್ಯಾಯಾಲಯ) ಸಭೆಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ನಾಪೋಕ್ಲು ನಲ್ಲಿರುವ  ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನದ ಬಳಿ ಪಾದಯಾತ್ರೆ ಅಂತ್ಯಗೊಳಿಸಲು ಯೋಜಿಸಲಾಗಿದೆ. ಕೊಡಗಿಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆಯ ಜೊತೆಗೆ ಕೊಡವ ಸಮುದಾಯಕ್ಕೆ ಎಸ್‌ಟಿ ವರ್ಗಕ್ಕೆ ಸೇರಿಸಬೇಕು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸುವುದು, ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಕೊಡವ ಸಂಸ್ಕೃತಿ ಸೇರಿಸುವುದು, ಹೊಸ ಸಂಸತ್ತಿನಲ್ಲಿ ಕೊಡವರಿಗೆ ಪ್ರಾತಿನಿಧ್ಯ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಆಯೋಜಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com