ಧಾರವಾಡ: ಪ್ರಮೋಷನ್ ಆಗಿ ಪದೋನ್ನತಿ ಸ್ವೀಕರಿಸಿದ ದಿನವೇ ಹೃದಯಾಘಾತ; ಖಜಾನೆ ಇಲಾಖೆ AD ಸಾವು

ಪ್ರಮೋಷನ್ ಆಗಿ ಪದೋನ್ನತಿ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಸರ್ಕಾರಿ ಅಧಿಕಾರಿಯೊಬ್ಬರು ನಿಧನರಾದ ಮನಕಲಕುವ ಘಟನೆ ಧಾರವಾಡದಲ್ಲಿ ನಡೆದಿದೆ.
ಜಯಪ್ರಕಾಶ್ ಕಲಕೋಟಿ
ಜಯಪ್ರಕಾಶ್ ಕಲಕೋಟಿ

ಧಾರವಾಡ: ಪ್ರಮೋಷನ್ ಆಗಿ ಪದೋನ್ನತಿ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಸರ್ಕಾರಿ ಅಧಿಕಾರಿಯೊಬ್ಬರು ನಿಧನರಾದ ಮನಕಲಕುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಜಯಪ್ರಕಾಶ್ ಕಲಕೋಟಿ ನಿಧನರಾದ ಅಧಿಕಾರಿ. ಈ ಮೊದಲು ಜಯಪ್ರಕಾಶ್‌ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಖಜಾನೆ‌‌ ಕಚೇರಿಯಲ್ಲಿದ್ದರು. ಕಳೆದ 15 ದಿನಗಳ ಹಿಂದೆ ಅವರಿಗೆ ಪ್ರಮೋಷನ್ ಆಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕು ಖಜಾನೆಯಲ್ಲಿ ಖಜಾನೆ ಸಹಾಯಕ ಅಧಿಕಾರಿಯಾಗಿದ್ದ ಅವರು ಸಹಾಯಕ ನಿರ್ದೇಶಕರಾಗಿ ಬಡ್ತಿ ಹೊಂದಿ ಜಿಲ್ಲಾ ಖಜಾನೆಗೆ ವರ್ಗಾವಣೆಯಾಗಿದ್ದರು. ಸೋಮವಾರ ಬೆಳ್ಳಿಗ್ಗೆ ಕಾರ್ಯಭಾರ ವಹಿಸಿಕೊಂಡಿದ್ದರು.

ಜಯಪ್ರಕಾಶ ಅವರು ಸೋಮವಾರ ಬೆಳಿಗ್ಗೆ ಕಚೇರಿಗೆ ಬಂದರು. ಎದೆನೋವು ಎಂದು ಹೇಳಿ ಹೋದರು. ಅವರನ್ನು ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಘಾತದಿಂದ ಸಂಜೆ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com