ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: SSLC, ದ್ವಿತೀಯ ಪಿಯುಸಿಗೆ ಇನ್ನುಂದೆ ಮೂರು ಬಾರಿ ವಾರ್ಷಿಕ ಪರೀಕ್ಷೆ!

ರಾಜ್ಯದಲ್ಲಿ 2023-24ನೇ ಶೈಕ್ಷಣಿಕ ವರ್ಷದಿಂದ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೂರು ಪ್ರಯತ್ನಗಳ ಅಡಿಯಲ್ಲಿ ಒಬ್ಬ ವಿದ್ಯಾರ್ಥಿಯು ಅತ್ಯುತ್ತಮ ಅಂಕಗಳನ್ನು ಉಳಿಸಿಕೊಳ್ಳಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ 2023-24ನೇ ಶೈಕ್ಷಣಿಕ ವರ್ಷದಿಂದ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೂರು ಪ್ರಯತ್ನಗಳ ಅಡಿಯಲ್ಲಿ ಒಬ್ಬ ವಿದ್ಯಾರ್ಥಿಯು ಅತ್ಯುತ್ತಮ ಅಂಕಗಳನ್ನು ಉಳಿಸಿಕೊಳ್ಳಬಹುದಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು ಪರಿಷ್ಕೃತ ಪರೀಕ್ಷಾ ವ್ಯವಸ್ಥೆಯ 'ಪೂರಕ ಪರೀಕ್ಷೆ' ಯನ್ನು ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಮರುನಾಮಕರಣ ಮಾಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮೂರು ಅವಕಾಶಗಳನ್ನು ಒದಗಿಸುತ್ತದೆ. ಇದು ಬದಲಾಗುತ್ತಿರುವ ವೇಗವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

ನಾವು ಪರಿಷ್ಕೃತ ಪರೀಕ್ಷಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, 1, 2 ಮತ್ತು 3ನೇ ಪರೀಕ್ಷೆಗಳಲ್ಲಿ ಗಳಿಸಿದ ಅತ್ಯುತ್ತಮ ಅಂಕಗಳನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳುವ ಮೂಲಕ ಅಂಕಗಳನ್ನು ಸುಧಾರಿಸಲು ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ ಹೆಚ್ಚಿನ ಅಧ್ಯಯನ ಅಥವಾ ಉದ್ಯೋಗದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಯೋಜನವಾಗಲಿದೆ ಎಂದು KSEAB ಹೇಳಿದೆ.

ವಿದ್ಯಾರ್ಥಿಗಳ ಕಲಿಕೆಯ ಗತಿ ಮತ್ತು ಶೈಲಿಯು ವಿಭಿನ್ನವಾಗಿದ್ದು, 1, 2 ಮತ್ತು 3 ಪರೀಕ್ಷೆಗಳನ್ನು ನಡೆಸುವುದು ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ಮಿತಿಯಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂರು ಪೂರಕ ಪರೀಕ್ಷೆಯನ್ನು ವಾರ್ಷಿಕ ಪರೀಕ್ಷೆ ಎಂದು ಮರುನಾಮಕರಣ ಮಾಡುವ ಮೂಲಕ ಮೂರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದರಿಂದ ಅದು ಅವರ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುತ್ತದೆ KSEAB ಹೇಳಿದೆ.

ಈ ಮೂರು ಪ್ರಯತ್ನಗಳಲ್ಲಿ ಪಡೆದ ಅಂಕಗಳ ಪೈಕಿ ವಿಷಯವಾರು ಉತ್ತಮ ಅಂಕಗಳನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ತಮ್ಮ ಮುಂದಿನ ಶೈಕ್ಷಣಿಕ ಕೋರ್ಸ್‌ಗೆ ತಡವಾಗಿ ಸೇರುವ ವಿದ್ಯಾರ್ಥಿಗಳಿಗೆ 'ಬ್ರಿಡ್ಜ್ ಕೋರ್ಸ್' ಅನ್ನು ಒದಗಿಸಲಾಗುವುದು.

ಪ್ರಸ್ತುತ ಪರೀಕ್ಷಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಒಂದು ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಈ ಪರೀಕ್ಷಾ ಪದ್ಧತಿಯು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಒತ್ತಡ ಮತ್ತು ಆತಂಕವನ್ನು ಸೃಷ್ಟಿಸುತ್ತಿದೆ ಎಂದು ಕೆಎಸ್‌ಇಎಬಿ ಹೇಳಿದೆ.

ಇದರಿಂದ ವಿದ್ಯಾರ್ಥಿಗಳ ಜ್ಞಾನ ಧಾರಣ, ಅರ್ಥಪೂರ್ಣ ಕಲಿಕೆ ಹಾಗೂ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. 'ಸದ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗೆ ಯಾವುದೇ ವಿಷಯದಲ್ಲಿ ಪಡೆದ ಅಂಕಗಳು ತೃಪ್ತಿಯಾಗದಿದ್ದರೆ ವಾರ್ಷಿಕ ಪರೀಕ್ಷೆಯಲ್ಲಿ ಆ ವಿಷಯದಲ್ಲಿ ಪಡೆದ ಅಂಕಗಳನ್ನು ತಿರಸ್ಕರಿಸಿ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ.

SSLC ಸಂಭವನೀಯ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ 1 –ಮಾರ್ಚ್ 1ರಿಂದ 25ರವರೆಗೆ ನಡೆಯಲಿದ್ದು, ಏಪ್ರಿಲ್ 22ಕ್ಕೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. 
ಮತ್ತೆ ಪರೀಕ್ಷೆ 2 ಮೇ 15ರಿಂದ ಜೂನ್ 5ರವರೆಗೆ ನಡೆಯಲಿದ್ದು, ಫಲಿತಾಂಶ ಜೂನ್ 21ರಂದು ಹೊರಬೀಳಲಿದೆ. 
ಇನ್ನು ಪರೀಕ್ಷೆ 3 ಜುಲೈ 12ರಿಂದ ಜುಲೈ 30ರವೆರೆಗೆ ನಡೆಯಲಿದ್ದು, ಆಗಸ್ಟ್16ರಂದು ಫಲಿತಾಂಶ ಹೊರಬರಲಿದೆ. 

ದ್ವಿತೀಯ ಪಿಯುಸಿ ಸಂಭವನೀಯ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ 1 ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಯಲಿದ್ದು, ಮೇ 8ರಂದು ಫಲಿತಾಂಶ ಬರಲಿದೆ. 
ಪರೀಕ್ಷೆ 2 ಜೂನ್ 12ರಿಂದ ಜೂನ್ 19ರವರೆಗೆ ನಡೆಯಲಿದ್ದು, ಜೂನ್ 29ರಂದು ಫಲಿತಾಂಶ ಬಿಡಲಾಗುತ್ತದೆ. 
ಇನ್ನು ಪರೀಕ್ಷೆ 3 ಜುಲೈ 29ರಿಂದ ಆಗಸ್ಟ್ 5ರವೆರೆಗ ನಡೆಯಲಿದ್ದು, ಆಗಸ್ಟ್ 19ರಂದು ಫಲಿತಾಂಶ ಹೊರಬೀಳೋ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com