ಭ್ರಷ್ಟಾಚಾರದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಸ್ಥಾನ: ಲೋಕಾಯುಕ್ತ ವಿಶೇಷ ನ್ಯಾಯಾಲಯ

ಭ್ರಷ್ಟಾಚಾರದಲ್ಲಿ ಸರ್ಕಾರಿ ಆಸ್ಪತ್ರೆಗಳು ಅಗ್ರಸ್ಥಾನದಲ್ಲಿವೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಭ್ರಷ್ಟ ನೌಕರರು ಅರಾಜಕತೆ ಸೃಷ್ಟಿಸಿದ್ದಾರೆ ಎಂದು ಹೇಳಿದೆ.
ಲೋಕಾಯುಕ್ತ (ಸಂಗ್ರಹ ಚಿತ್ರ)
ಲೋಕಾಯುಕ್ತ (ಸಂಗ್ರಹ ಚಿತ್ರ)

ಬೆಂಗಳೂರು: ಭ್ರಷ್ಟಾಚಾರದಲ್ಲಿ ಸರ್ಕಾರಿ ಆಸ್ಪತ್ರೆಗಳು ಅಗ್ರಸ್ಥಾನದಲ್ಲಿವೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಭ್ರಷ್ಟ ನೌಕರರು ಅರಾಜಕತೆ ಸೃಷ್ಟಿಸಿದ್ದಾರೆ ಎಂದು ಹೇಳಿದೆ.

ಬಡತನದಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಾರಣ  ಸಾರ್ವಜನಿಕ ಆಸ್ಪತ್ರೆಗಳನ್ನು ಅವಲಂಬಿಸಿರುತ್ತಾರೆ, ಆದರೆ ಈ ರೀತಿಯ ಘಟನೆಗಳಿಂದ ಸಾಮಾನ್ಯ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಿರುವ ಆರೋಪಿಗಳ ಅಪರಾಧ ನಿರ್ಧರಿಸಲು ಇದಿ ಸೂಕ್ತ ಹಂತವಲ್ಲ. ನಾವು ಸಾರ್ವಜನಿಕ ಕಚೇರಿಗಳು ಮತ್ತು ನಿರ್ದಿಷ್ಟವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋದಲ್ಲೆಲ್ಲಾ ಭ್ರಷ್ಟಾಚಾರ ವ್ಯಾಪಾರವಾಗಿದೆ ಎಂಬುದು ಬಹಿರಂಗ ರಹಸ್ಯವಾಗಿದೆಎಂದು ನ್ಯಾಯಾಲಯ ಹೇಳಿದೆ. ಇತ್ತೀಚೆಗೆ ಬೆಂಗಳೂರಿನ ಯಲಹಂಕದ ಜನರಲ್ ಆಸ್ಪತ್ರೆಯ ವಾರ್ಡ್ ಬಾಯ್ ಆರೋಪಿ ವಹೀದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು  ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ತಿರಸ್ಕರಿಸಿದರು.

ಆತ ಕೇವಲ ವಾರ್ಡ್ ಬಾಯ್ ಅಥವಾ ಪ್ಯೂನ್ ಅಥವಾ ಅಟೆಂಡರ್ ಅಥವಾ ಸಣ್ಣ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಎಂದು ಕರುಣೆ ತೋರಿಸಬಹುದು. ಆದರೆ ವಾಸ್ತವವಾಗಿ, ‘ಡಿ’ ಗ್ರೂಪ್‌ನ  ಸಿಬ್ಬಂದಿ ಅಧಿಕೃತ ಕರ್ತವ್ಯ ನಿರ್ವಹಿಸುವ ಬದಲು ಲಂಚ ಸಂಗ್ರಹಿಸುವ ಯಂತ್ರವಾಗಿ ಮಾರ್ಪಟ್ಟಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಮಂಜುಳಾ ಅವರು ಹೆರಿಗೆ ನೋವಿನಿಂದ ಜುಲೈ 14, 2023 ರಂದು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ತ್ರೀರೋಗ ತಜ್ಞ ರಾಮಚಂದ್ರ ಕೆ.ಸಿ ಅವರು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡದಿದ್ದರೆ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಅವರು ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಇದಕ್ಕಾಗಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಕೊನೆಗೆ 11 ಸಾವಿರ ರೂ. ಹಣ ಪಡೆದಿದ್ದಾರೆ.

ಮರುದಿನ ವಾರ್ಡ್ ಬಾಯ್ ವಹೀದ್ ಮೂಲಕ ಮುಂಗಡವಾಗಿ 10 ಸಾವಿರ ರೂಪಾಯಿ ಪಡೆದು ಸಿಸೇರಿಯನ್ ಆಪರೇಷನ್ ಮಾಡಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಗೆ ಯಾವುದೇ ಕರುಣೆ ತೋರದೆ, ಅಪರಾಧ ಎಸಗುವಲ್ಲಿ ಅರ್ಜಿದಾರರ  ಪ್ರಮುಖ ಕೈವಾಡವವಿದೆ ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ವಿಲಕ್ಷಣ ಸಂಗತಿಗಳು ನೆಲದ ವಾಸ್ತವತೆಯನ್ನು ಬಹಿರಂಗಪಡಿಸಲು ಅರ್ಜಿದಾರರ ಕಸ್ಟಡಿ ವಿಚಾರಣೆಯ ಅಗತ್ಯ ಸೂಚಿಸುತ್ತದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com