ಬೀದರ್ ಪೊಲೀಸರ ಕಾರ್ಯಾಚರಣೆ: 22ನೇ ವಯಸ್ಸಿನಲ್ಲಿ ಎಮ್ಮೆ ಕದ್ದಿದ್ದ ಆರೋಪಿ 80ನೇ ವಯಸ್ಸಿನಲ್ಲಿ ಬಂಧನ!

ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ 22 ವರ್ಷದವನಾಗಿದ್ದಾಗ ಎಮ್ಮೆಗಳನ್ನು ಕದ್ದಿದ್ದ ಆರೋಪಿ ಜಾಮೀನು ಷರತ್ತು ಉಲ್ಲಂಘಿಸಿದ್ದಕ್ಕಾಗಿ 58 ವರ್ಷಗಳ ನಂತರ 80 ವರ್ಷದ ವ್ಯಕ್ತಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
58 ವರ್ಷಗಳ ನಂತರ ಆರೋಪಿ ಬಂಧನ
58 ವರ್ಷಗಳ ನಂತರ ಆರೋಪಿ ಬಂಧನ

ಕಲಬುರಗಿ: 22 ವರ್ಷದವನಾಗಿದ್ದಾಗ ಎಮ್ಮೆಗಳನ್ನು ಕದ್ದಿದ್ದ ಆರೋಪಿ ಜಾಮೀನು ಷರತ್ತು ಉಲ್ಲಂಘಿಸಿದ್ದಕ್ಕಾಗಿ 58 ವರ್ಷಗಳ ನಂತರ 80 ವರ್ಷದ ವ್ಯಕ್ತಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.

58 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿ ಗಣಪತಿ ವಿಠ್ಠಲ ವಾಗ್ದಾರೆ(80)ಯನ್ನು ಮೆಹಕರ್‌ ಠಾಣೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳಾದ ಕಿಶನ್ ಚಂದರ್ ಮತ್ತು ಗಣಪತಿ ವಿಠಲ್ ವಾಘ್ಮೋರೆ ಅವರು 1965 ರಲ್ಲಿ ಭಾಲ್ಕಿ ತಾಲೂಕಿನ ಮೆಹಕರ್ ಗ್ರಾಮದ ಮನೆಯೊಂದರಿಂದ ಎರಡು ಎಮ್ಮೆ ಮತ್ತು ಕರುವನ್ನು ಕದ್ದಿದ್ದರು ಎಂದು ಭಾಲ್ಕಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ್ ತುಳಿಸಿದ್ದಾರೆ. ಮಾಲೀಕ ಮುರಳೀಧರ ರಾವ್ ಕುಲಕರ್ಣಿ ಆ ಸಮಯದಲ್ಲಿ ಮೆಹಕರ್ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದು, ಬಳಿಕ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ ಇಬ್ಬರೂ ಆರೋಪಿಗಳು ತಪ್ಪಿಸಿಕೊಂಡಿದ್ದು, ಯಾವುದೇ ಸಮನ್ಸ್ ಮತ್ತು ವಾರಂಟ್‌ಗಳಿಗೆ ಪ್ರತಿಕ್ರಿಯಿಸಿರಲಿಲ್ಲ.

58 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಹೆಸರು, ಲಾಂಗ್ ಪೆಂಡಿಂಗ್ ರಿಪೋರ್ಟ್‌ಗೆ (ಎಲ್‌ಪಿಆರ್ ) ಸೇರಿ ಹೋಗಿತ್ತು.  ಈ ಪೈಕಿ ಮೊದಲ ಆರೋಪಿ ಕಿಶನ್ ಚಂದರ್ 2006 ಏಪ್ರಿಲ್ 11ರಂದು ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದಾಯಿತು.

ಬೀದರ್ ಎಸ್ಪಿ ನಿರ್ದೇಶನದ ಮೇರೆಗೆ ವಿಶೇಷ ತಂಡ ರಚಿಸಿ ಆರೋಪಿಗಳ ಶೋಧ ನಡೆಸಲಾಗಿದ್ದು, ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ತಕಲಗಾಂವ್ ಗ್ರಾಮದಲ್ಲಿ ಗಣಪತಿ ವಿಠಲ್ ವಾಘ್ಮೋರೆ ವಾಸವಿರುವುದು ತಂಡಕ್ಕೆ ತಿಳಿದು ಬಂದಿದೆ. ತಂಡ ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com