ನೀನೊಬ್ಬ ಹಳ್ಳಿ ಗುಗ್ಗು- ಪತ್ನಿ ಕಿರುಕುಳ: ಮನೆಹಾಳಿಯಿಂದ ಸಾಯುತ್ತಿದ್ದೇನೆ; ಮೆಸೇಜ್ ಕಳುಹಿಸಿ 'ನಮ್ಮ ಮೆಟ್ರೋ' ಎಂಜಿನೀಯರ್ ಆತ್ಮಹತ್ಯೆ!

ಪತ್ನಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. 38 ವರ್ಷದ ಮಂಜುನಾಥ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಮೃತ ಮಂಜುನಾಥ್ ಮತ್ತು ಪತ್ನಿ ಪ್ರಿಯಾಂಕಾ
ಮೃತ ಮಂಜುನಾಥ್ ಮತ್ತು ಪತ್ನಿ ಪ್ರಿಯಾಂಕಾ
Updated on: 

ತುಮಕೂರು: ಪತ್ನಿಯ ಕಿರುಕುಳಕ್ಕೆ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. 38 ವರ್ಷದ ಮಂಜುನಾಥ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಮಂಜುನಾಥ್ ಬೆಂಗಳೂರಿನ ಬಿಎಂಆರ್​ಸಿಎಲ್ ನಲ್ಲಿ ಇಂಜಿನೀಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಕೈ ತುಂಬಾ ಸಂಬಳ ತರುವ ಗಂಡ, ಮುದ್ದಾದ ಮಕ್ಕಳಿದ್ದರೂ ಪತ್ನಿ ಪ್ರಿಯಾಂಕಾ ಪದೇ ಪದೇ ಜಗಳ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.

10 ವರ್ಷದ ಹಿಂದೆ ತುರುವೆಕರೆ ಮೂಲದ ಪ್ರಿಯಾಂಕಾಳನ್ನು ಮಂಜುನಾಥ್ ಮದುವೆಯಾಗಿದ್ದರು. ಮದುವೆ ಬಳಿಕ ಮಂಜುನಾಥ್ ಮತ್ತು ಪ್ರಿಯಾಂಕಾ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮದುವೆಯಾದ ಬಳಿಕ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಮಂಜುನಾಥ್‌ ಆರೋಪ. ನೀನು ಹಳ್ಳಿ ಗುಗ್ಗು, ನಿನ್ನನ್ನ ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇಪದೆ ಕಿಚಾಯಿಸುತ್ತಿದ್ದಳಂತೆ ಪ್ರಿಯಾಂಕ. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇಪದೆ ಗಲಾಟೆ ಆಗುತ್ತಿತ್ತು ಎನ್ನುವುದು ದೂರು.

ಪತ್ನಿಯ ಕಿರುಕುಳಕ್ಕೆ ಮನನೊಂದಿದ್ದ ಮಂಜುನಾಥ್, ಆತ್ಮಹತ್ಯೆಗೆ ಮುನ್ನ ತಮ್ಮ ಸಹೋದರನಿಗೆ ಆಡಿಯೊ ಮೆಸೇಜ್‌ ಕಳುಹಿಸಿದ್ದಾರೆ. ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಿಲ್ಲ. ಆ ಮನೆ ಹಾಳಿಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಆಡಿಯೋ ಮೇಸೆಜ್ ಮಾಡಿದ್ದಾರೆ. ಇದೆಲ್ಲದರ ಆಧಾರದ ಮೇಲೆ ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com