ಲಂಚ ಪ್ರಕರಣ: ಸಹಾಯಕ ಆಯುಕ್ತ, ಕಚೇರಿ ಸಿಬ್ಬಂದಿಗೆ ನಾಲ್ಕು ವರ್ಷ ಜೈಲು ಶಿಕ್ಷೆ
ಲೋಕಾಯುಕ್ತ ವಿಶೇಷ ನ್ಯಾಯಾಲಯವು ಸಹಾಯಕ ಕಮಿಷನರ್ ತಬಸ್ಸುಮ್ ಜಹೇರಾ ಮತ್ತು ಉಪ ತಹಶೀಲ್ದಾರ್ ಶಬ್ಬೀರ್ ಅಹಮದ್ ಅವರನ್ನು ಲಂಚ ಕೇಳಿದ ಮತ್ತು ಸ್ವೀಕರಿಸಿದ ಆರೋಪದಲ್ಲಿ ದೋಷಿ ಎಂದು ತೀರ್ಪು ನೀಡಿದ್ದು, ಇಬ್ಬರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Published: 14th September 2023 10:38 AM | Last Updated: 14th September 2023 03:14 PM | A+A A-

ಲೋಕಾಯುಕ್ತ
ಬೆಂಗಳೂರು: ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಸಹಾಯಕ ಕಮಿಷನರ್ ತಬಸ್ಸುಮ್ ಜಹೇರಾ ಮತ್ತು ಉಪ ತಹಶೀಲ್ದಾರ್ ಶಬ್ಬೀರ್ ಅಹಮದ್ ಅವರನ್ನು ಲಂಚ ಕೇಳಿದ ಮತ್ತು ಸ್ವೀಕರಿಸಿದ ಆರೋಪದಲ್ಲಿ ದೋಷಿ ಎಂದು ತೀರ್ಪು ನೀಡಿದ್ದು, ಇಬ್ಬರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ತಬಸ್ಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಹ್ಮದ್ ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ.
ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಆವರಗೆರೆ ನಿವಾಸಿ ವಿಟಿ ಜಯರಾಂ ಎಂಬುವವರು, ತಮ್ಮ ತಂದೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ತನ್ನ ತಂದೆಯ ಹೆಸರಿಗೆ ಜಮೀನಿನ ದಾಖಲೆಗಳನ್ನು ವರ್ಗಾಯಿಸಿ ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದೆ. ಎಸಿ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ಕೇಳಿದ್ದರು. ಇದನ್ನು ಮಾಡಿಕೊಡಲು 35,000 ರೂ. ಲಂಚ ನೀಡುವಂತೆ ಕೇಳಿದರು ಎಂದು ದೂರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಆರ್‌ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ; ಭ್ರಷ್ಟಾಚಾರ ಆರೋಪ ಕುರಿತು ತನಿಖೆ
ಲಂಚ ಕೊಟ್ಟರೂ ಜಯರಾಂ ಅವರನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವಂತೆ ಮಾಡಲಾಗಿತ್ತು. ಈ ನಡುವೆ ಶಬ್ಬೀರ್ ಇನ್ನಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ, ಭೇಟಿಯೊಂದರ ವೇಳೆ ಅಧಿಕಾರಿಗಳ ನಡುವಿನ ಸಂಭಾಷಣೆಯನ್ನು ಜಯರಾಂ ರೆಕಾರ್ಡ್ ಮಾಡಿದರು. ಮೇ 23, 2017ರಂದು ಜಯರಾಂ ಅವರು ಆಡಿಯೋ ಟೇಪ್ ಸಹಿತ ಎಸಿಬಿಗೆ ದೂರು ನೀಡಿದ್ದರು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದರು ಮತ್ತು ಅವರಿಗೆ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.