ಬಂಧಿತ ಉಗ್ರನೊಂದಿಗೆ ನಂಟು, ಯಾದಗಿರಿಯಲ್ಲಿನ ಯುವಕನ ಮನೆಯಲ್ಲಿ ಎನ್ಐಎ ತಪಾಸಣೆ

ಐಸಿಸಿ ಉಗ್ರನನ್ನು ಜಾರ್ಖಂಡ್ ನ ರಾಂಚಿಯಲ್ಲಿ ಬಂಧಿಸಿರುವ ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕರ್ನಾಟಕ ಯಾದಗಿರಿ ಜಿಲ್ಲೆಯ ಯುವನೊಂದಿಗೆ ಸಂಪರ್ಕ ಹೊಂದಿದ್ದ...
ಎನ್ ಐಎ ದಾಳಿ
ಎನ್ ಐಎ ದಾಳಿ

ಯಾದಗಿರಿ: ಐಸಿಸಿ ಉಗ್ರನನ್ನು ಜಾರ್ಖಂಡ್ ನ ರಾಂಚಿಯಲ್ಲಿ ಬಂಧಿಸಿರುವ ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕರ್ನಾಟಕ ಯಾದಗಿರಿ ಜಿಲ್ಲೆಯ ಯುವನೊಂದಿಗೆ ಸಂಪರ್ಕ ಹೊಂದಿದ್ದ ಮಾಹಿತಿ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಎನ್ಐಎ ತಂಡ ಎರಡನೇ ಬಾರಿಗೆ ಯುವಕನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಸಚ್ಚಿದಾನಂದ ಶರ್ಮಾ ನೇತೃತ್ವದ ಎನ್ಐಎ ತಂಡ ಬಂಧಿತ ಐಸಿಸಿ ಉಗ್ರನ ಜೊತೆ ಇನ್ ಸ್ಟಾಗ್ರಾಮ್ ನಲ್ಲಿ ಸಂಪರ್ಕ ಹೊಂದಿದ್ದ ಶಹಪುರದ ಖಾಲಿದ್ ಅಹ್ಮದ್ ಮನೆಗೆ ಭೀಟಿ ನೀಡಿ ಖಾಲಿದ್ ನನ್ನು ತೀವ್ರ ವಿಚಾರಣೆ ನಡೆಸಿದೆ. ಅಲ್ಲದೆ ಸೆಪ್ಟೆಂಬರ್ 20ರಂದು ರಾಂಚಿಯಲ್ಲಿನ ಎನ್ಐಎ ಕಚೇರಿಗೆ ಬರುವಂತೆ ಸೂಚಿಸಿದೆ. 

ಖಾಲಿದ್ ಅಹ್ಮದ್ ಮನೆಗೆ ಭೇಟಿ ನೀಡಿದ ಎನ್ಐಎ ತಂಡ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಕಳೆದ ಜುಲೈನಲ್ಲಿ ರಾಂಚಿಯಲ್ಲಿ ಐಸಿಸ್ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com