ಕನ್ನಡ ಭಾಷೆ ಕಲಿಯುವ ಆಸಕ್ತಿಯಿದೆಯೇ?: ಈ ವಿದ್ಯಾರ್ಥಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ನೆರವಾಗಬಹುದು

ಹೊರ ರಾಜ್ಯಗಳು, ಹೊರ ದೇಶಗಳಿಂದ ಬಂದ ಅನೇಕರಿಗೆ ಕನ್ನಡ ಕಲಿಯಲು ಆಸಕ್ತಿಯಿರುತ್ತದೆ. ಆದರೆ ಹೇಗೆ ಕಲಿಯುವುದೆಂದು ತಿಳಿದಿರುವುದಿಲ್ಲ. ಅಂಥವರಿಗೆ ತಮ್ಮ ಮನೆಯಲ್ಲಿಯೇ ಉಚಿತವಾಗಿ ಕನ್ನಡ ಕಲಿಯಲು ಪ್ರಜ್ವಲ್ ರೆಡ್ಡಿ ಎಂಬ 17 ವರ್ಷದ ವಿದ್ಯಾರ್ಥಿ ಒಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹೊರ ರಾಜ್ಯಗಳು, ಹೊರ ದೇಶಗಳಿಂದ ಬಂದ ಅನೇಕರಿಗೆ ಕನ್ನಡ ಕಲಿಯಲು ಆಸಕ್ತಿಯಿರುತ್ತದೆ. ಆದರೆ ಹೇಗೆ ಕಲಿಯುವುದೆಂದು ತಿಳಿದಿರುವುದಿಲ್ಲ. ಅಂಥವರಿಗೆ ತಮ್ಮ ಮನೆಯಲ್ಲಿಯೇ ಉಚಿತವಾಗಿ ಕನ್ನಡ ಕಲಿಯಲು ಪ್ರಜ್ವಲ್ ರೆಡ್ಡಿ ಎಂಬ 17 ವರ್ಷದ ವಿದ್ಯಾರ್ಥಿ ಒಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ. ಅದರ ಹೆಸರು ಕನ್ನಡಡಿಸ್ಕೊ ಆಪ್ ಎಂಬುದಾಗಿದ್ದು ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ ಸ್ಟೋರ್ಸ್ ಎರಡರಲ್ಲಿಯೂ ಉಚಿತವಾಗಿ ದೊರಕುತ್ತದೆ.

ಕೋರ್ಸ್‌ನ ವಿಷಯವು ಅರ್ಥಮಾಡಿಕೊಳ್ಳಲು ಸುಲಭವಾಗಿದ್ದು, ಇಂಟರ್ನೆಟ್ ಸಂಪರ್ಕವಿಲ್ಲದೆ ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಅಪ್ಲಿಕೇಷನ್ ಲಭ್ಯತೆ ಇರುತ್ತದೆ. ಕನ್ನಡ ಕಲಿಯುವವರು ತಮ್ಮ ಪಾಠಗಳನ್ನು ತಪ್ಪಿಸಿಕೊಳ್ಳದಿರಲು ದಿನನಿತ್ಯ ಏನು ಜ್ಞಾಪನೆ ಇಟ್ಟುಕೊಳ್ಳಬೇಕು ಎಂಬುದನ್ನು ಸಹ ನಿಗದಿಪಡಿಸಬಹುದು. ಅಪ್ಲಿಕೇಷನ್ ನಲ್ಲಿ ಕನ್ನಡ ಓದುವಿಕೆ ಮತ್ತು ಉಚ್ಚಾರಣೆ, 'ದಿನದ ಪದ', ಶಬ್ದಕೋಶ, ವ್ಯಾಕರಣ ಮತ್ತು ಸಂಭಾಷಣೆ ನುಡಿಗಟ್ಟು ಪುಸ್ತಕದಂತಹ ವಿವಿಧ ವಿಭಾಗಗಳನ್ನು ಹೊಂದಿದೆ.

ಇದು ಮಾರುಕಟ್ಟೆ, ರೆಸ್ಟೋರೆಂಟ್‌ಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಳಸಬಹುದಾದ ನುಡಿಗಟ್ಟುಗಳನ್ನು ಒಳಗೊಂಡಿದೆ. ಪದಗುಚ್ಛಗಳು ಕನ್ನಡ ಭಾಷೆಯಲ್ಲಿ ಸರಳವಾದ ವಾಕ್ಯಗಳಾಗಿವೆ, ಅವುಗಳ ಇಂಗ್ಲಿಷ್ ಅನುವಾದವು ಬಳಕೆದಾರರೊಂದಿಗೆ ಸಂವಹನ ನಡೆಸಲು ಸಹಾಯ ಮಾಡುತ್ತದೆ ಮತ್ತು ಅದನ್ನು ಬಳಕೆ ಸ್ನೇಹಿಯನ್ನಾಗಿ ಮಾಡುತ್ತದೆ.

ಕನ್ನಡ ಕಲಿಯಲು ಹಲವರಿಗೆ ಆಸಕ್ತಿಯಿಲ್ಲದಿದ್ದರೆ ಇನ್ನು ಕೆಲವರಿಗೆ ಆಸಕ್ತಿಯಿದ್ದರೂ ಹೇಗೆ ಕಲಿಯಬೇಕು, ಎಲ್ಲಿಂದ ಆರಂಭಿಸಬೇಕೆಂದು ಗೊತ್ತಿರುವುದಿಲ್ಲ. ಅಂಥವರಿಗೆ ಪ್ರೋಗ್ರಾಮಿಂಗ್ ಮತ್ತು ಭಾಷೆಗಳಲ್ಲಿ ನನ್ನ ಆಸಕ್ತಿಗಳನ್ನು ಒಟ್ಟುಗೂಡಿಸಿ ಕನ್ನಡೇತರರಿಗೆ ಕನ್ನಡ ಕಲಿಸುವ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸುವ ಆಲೋಚನೆ ನನಗೆ ಬಂತು ಎನ್ನುತ್ತಾರೆ ಪ್ರಜ್ವಲ್ ರೆಡ್ಡಿ. ಸೆಪ್ಟೆಂಬರ್ 2022 ರಲ್ಲಿ ಅಪ್ಲಿಕೇಶನ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಕೆಲಸವನ್ನು ಪರಿಪೂರ್ಣಗೊಳಿಸಲು ಒಂದು ವರ್ಷ ತೆಗೆದುಕೊಂಡರು.

<strong>ಪ್ರಜ್ವಲ್ ರೆಡ್ಡಿ</strong>
ಪ್ರಜ್ವಲ್ ರೆಡ್ಡಿ

ಪ್ರಸ್ತುತ ಬೆಂಗಳೂರಿನ ಗ್ರೀನ್‌ವುಡ್ ಹೈಸ್ಕೂಲ್‌ನಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿರುವ ರೆಡ್ಡಿ ಅವರು ಅಪ್ಲಿಕೇಶನ್ ನ್ನು ಇತರ ಭಾಷೆಗಳಿಗೆ ವಿಸ್ತರಿಸಲು ಯೋಜಿಸಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳು ಮೂಲಕ ಕನ್ನಡವನ್ನು ಕಲಿಯಲು ಸಹಾಯ ಮಾಡುತ್ತದೆ. ರಸಪ್ರಶ್ನೆಗಳು ಮತ್ತು ಭಾಷಾ ಆಟಗಳಿಗೆ ಸಂವಾದಾತ್ಮಕ ಸ್ಥಳವನ್ನು ಒಳಗೊಂಡಂತೆ ಜನರು ಕಲಿಕೆಯನ್ನು ಮೋಜು ರೀತಿಯಲ್ಲಿ ಕಲಿಯುವಂತೆ ಮಾಡಿಕೊಟ್ಟಿದ್ದಾರೆ. 

ಇಲ್ಲಿಯವರೆಗೆ, ಅಪ್ಲಿಕೇಶನ್ 1,600 ಡೌನ್‌ಲೋಡ್‌ಗಳನ್ನು ಹೊಂದಿದೆ.ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಕಲಿಯಲು ಪಠ್ಯಕ್ರಮದಲ್ಲಿ ಅದನ್ನು ಸಂಯೋಜಿಸಲು ಶಾಲೆಗಳೊಂದಿಗೆ ಸಹಕರಿಸುವ ಗುರಿಯನ್ನು ಪ್ರಜ್ವಲ್ ರೆಡ್ಡಿ ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com