ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ, ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ: ಸಚಿವ ಮಧು ಬಂಗಾರಪ್ಪ

ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ. ಸುಮ್ಮನೆ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ. ಸುಮ್ಮನೆ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಣವಾನಂದ ಶ್ರೀಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ ಎಂದು ಮತ್ತೊಮ್ಮೆ ಗುಡುಗಿದರು.

ಅವರು ಕಣ್ಣೀರು ಯಾಕೆ ಹಾಕಿದ್ದಾರೆ ತಪ್ಪು ಮಾಡಿದ್ದಾರಾ? ಅವರನ್ನು ಬೇಕಾದಷ್ಟು ನೋಡಿದ್ದೇವೆ. ಇಂತಹ ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ. ಕಳ್ಳತನ ಮಾಡಿದ್ದರೆ, ತಪ್ಪು ಮಾಡಿದ್ದರೆ ಕಣ್ಣೀರು ಹಾಕೋದು ಎಂದು ಕಿಡಿಕಾರಿದರು.

ಪ್ರಣವಾನಂದ ಶ್ರೀಗಳೇನು ಈಡಿಗ ಸಮಾಜದವರಾ? ನಾನೇನು ಅವರ ಜಾತಕ ನೋಡಿಕೊಂಡು ಇರಲಾ. ಅವರ ಹಿನ್ನೆಲೆ ಕೆದುಕಿ ನಿಮಗೆ ಗೊತ್ತಾಗುತ್ತದೆ. ನನ್ನ ವಿರುದ್ದ ಕಮೀಷನರ್, ಸ್ಪೀಕರ್, ಖರ್ಗೆ ಯಾರಿಗೆ ಬೇಕಾದರೂ ದೂರು‌ ಕೊಡಲಿ. ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಸ್ವಾಮೀಜಿ ಅವರು ಸುಮ್ಮನೆ ಪಬ್ಲಿಸಿಟಿ ತಗೊಳ್ಳುತ್ತಾರೆ. ಇಂತಹವರಿಗೆಲ್ಲಾ ಏಕೆ ಪ್ರಚಾರ ಕೊಡುತ್ತೀರಾ? ಹರಿಪ್ರಸಾದ್ ಅವರು ಹಿರಿಯರಿದ್ದಾರೆ ಅವರಿಗೆ ಸ್ಥಾನ ಮಾನ ಕೊಡಬೇಡಿ ಅನ್ನೋಕೆ ನಾನು ಯಾರು? ಎಂದು ಪ್ರಶ್ನಿಸಿದರು.

ಕಾಗೋಡು ತಿಮ್ಮಪ್ಪ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಬೇಕು . ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರ ಅಧಿಕಾರ ಇದೆ. ಎಲ್ಲ ವಿರೋಧ ಮರೆತು ಬಡವರ ಪರ ಕೆಲಸ ಆಗಬೇಕಿದೆ. ಆಡಳಿತ ಮತ್ತು ವಿರೋಧ ಪಕ್ಷ ತಮ್ಮ ಲಾಭಕ್ಕೆ ಏನು ಕೇಳುತ್ತಿಲ್ಲ. ಬಡವರ ಸಮಸ್ಯೆಯಾಗಿ ಎರಡು ಪಕ್ಷಗಳು ಒಟ್ಟಾಗಬೇಕಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com