ನಮ್ಮ ಮೆಟ್ರೊ ಬಳಸಿ ಪ್ರಯಾಣ ಮಾಡುವಂತೆ ಉದ್ಯೋಗಿಗಳಿಗೆ ಬೆಂಗಳೂರಿನ ಹಲವು ಐಟಿ ಕಂಪೆನಿಗಳ ಉತ್ತೇಜನ!

ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಮಾರ್ಗಕ್ಕೆ ಶೀಘ್ರದಲ್ಲೇ ಚಾಲನೆ ನೀಡಿದ ನಂತರ ವೈಟ್‌ಫೀಲ್ಡ್‌ನಿಂದ ಕೆಂಗೇರಿವರೆಗಿನ ಸಂಪೂರ್ಣ ನೇರಳೆ ಮಾರ್ಗವನ್ನು ಸಂಪರ್ಕಿಸಲು ನಿರ್ಧರಿಸಲಾಗಿದ್ದು, ಐಟಿ ಕಂಪನಿಗಳು ತಮ್ಮ ಸಿಬ್ಬಂದಿ ಪ್ರಯಾಣಿಸಲು ಮೆಟ್ರೋವನ್ನು ಬಳಸಲು ಒಲವು ತೋರುತ್ತಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಮಾರ್ಗಕ್ಕೆ ಶೀಘ್ರದಲ್ಲೇ ಚಾಲನೆ ನೀಡಿದ ನಂತರ ವೈಟ್‌ಫೀಲ್ಡ್‌ನಿಂದ ಕೆಂಗೇರಿವರೆಗಿನ ಸಂಪೂರ್ಣ ನೇರಳೆ ಮಾರ್ಗವನ್ನು ಸಂಪರ್ಕಿಸಲು ನಿರ್ಧರಿಸಲಾಗಿದ್ದು, ಐಟಿ ಕಂಪನಿಗಳು ತಮ್ಮ ಸಿಬ್ಬಂದಿ ಪ್ರಯಾಣಕ್ಕೆ ಮೆಟ್ರೋವನ್ನು ಬಳಸಲು ಒಲವು ತೋರುತ್ತಿವೆ. 

ವೈಟ್‌ಫೀಲ್ಡ್ ಅಥವಾ ಕೆಆರ್ ಪುರ ಮೆಟ್ರೋ ನಿಲ್ದಾಣಗಳಿಂದ ತಮ್ಮ ಕಚೇರಿಗಳಿಗೆ ಬಸ್‌ಗಳನ್ನು ಬಳಸಲು ವಿವಿಧ ಆಯ್ಕೆಗಳ ಕುರಿತು ಬಿಎಂಟಿಸಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿವೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಬಿಎಲ್ ಯಶವಂತ ಚವಾಣ್, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್-TNIE ಪ್ರತಿನಿಧಿ ಜೊತೆ ಮಾತನಾಡಿ, “ಕಂಪೆನಿಗಳು ತಮ್ಮ ಉದ್ಯೋಗಿಗಳ ಪ್ರಯಾಣಕ್ಕೆ ಮೆಟ್ರೊ ರೈಲನ್ನು ಬಳಸಲು ಹೆಚ್ಚಿನ ಆಸಕ್ತಿಯನ್ನು ತೋರಿಸಿವೆ. ವೈಟ್‌ಫೀಲ್ಡ್‌ನಲ್ಲಿರುವ ಐಟಿಪಿಬಿ (International Technology Park Bangalore) ಯಲ್ಲಿರುವ ಅಪ್ಲೈಡ್ ಮೆಟೀರಿಯಲ್ಸ್ ಇಂಕ್ ಕಂಪನಿಯು ಈಗಾಗಲೇ ತಮ್ಮ ಉದ್ಯೋಗಿಗಳಿಗಾಗಿ 500 ಟ್ರಾವೆಲ್ ಕಾರ್ಡ್‌ಗಳನ್ನು ಖರೀದಿಸಿದೆ. ಇದು ಈಗಾಗಲೇ 100 ಕಾರ್ಡ್‌ಗಳನ್ನು ಸಿಬ್ಬಂದಿಗೆ ಹಸ್ತಾಂತರಿಸಿದೆ.

ಒಂದು ಕಾರ್ಡ್‌ನ ಬೆಲೆ 50 ರೂಪಾಯಿಗಳು. ಉದ್ಯೋಗಿಗಳ ಅವಶ್ಯಕತೆಗೆ ಅನುಗುಣವಾಗಿ ಕಂಪನಿಯು ಅದನ್ನು ಟಾಪ್ ಅಪ್ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಆಟೋ ಸಂಸ್ಥೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್, ಬಿಡದಿ ಘಟಕ ಕೂಡ ಮೆಟ್ರೋ ಬಳಸಲು ನೌಕರರನ್ನು ಉತ್ತೇಜಿಸಲು ಆಸಕ್ತಿ ತೋರಿಸಿದೆ ಎಂದು ಯಶವಂತ್ ಚವಾಣ್ ಹೇಳುತ್ತಾರೆ. ತಮ್ಮ ಸಿಬ್ಬಂದಿಗಾಗಿ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳನ್ನು ಖರೀದಿಸಲು ನೋಡುತ್ತಿದ್ದಾರೆ ಎಂದರು. 

ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಕಂಪನಿಯ ಬಸ್‌ನಲ್ಲಿ ತಮ್ಮ ಉದ್ಯೋಗಿಗಳನ್ನು ಕರೆದೊಯ್ಯುವ ಬದಲು, ನಿರ್ದಿಷ್ಟ ಮೆಟ್ರೋ ನಿಲ್ದಾಣದಿಂದ ಉದ್ಯೋಗಿಗಳನ್ನು ಕರೆದೊಯ್ಯುವ ಸಾಧ್ಯತೆಯನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.

ಹೊರ ವರ್ತುಲ ರಸ್ತೆಯಲ್ಲಿರುವ ಕಂಪನಿಗಳ ಸಂಘದ ಅಧ್ಯಕ್ಷ ಮಾನಸ್ ದಾಸ್, ನಮ್ಮ ಗುಂಪಿನ ಭಾಗವಾಗಿರುವ ಸುಮಾರು 500 ಐಟಿ ಮತ್ತು ಬಿಟಿ ಕಂಪನಿಗಳಿಗೆ ಅವರ ನಿರ್ದಿಷ್ಟ ಅವಶ್ಯಕತೆಗಳನ್ನು ನೀಡಲು ನಮಗೆ ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ. ಇದರಿಂದ ನಾವು ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿಗೆ ಸಂಯೋಜಿತ ಮನವಿ ಸಲ್ಲಿಸಬಹುದು. ನಾವು ಎರಡು ಆಯ್ಕೆಗಳನ್ನು ಪರಿಗಣಿಸುತ್ತಿದ್ದೇವೆ - ಕಂಪನಿಯಿಂದ ಪೂರ್ಣ ಚಾರ್ಟರ್ಡ್ ಬಸ್ ನ್ನು ಬಾಡಿಗೆಗೆ ಪಡೆಯುವುದು ಅಥವಾ ಬಹು ಕಂಪನಿಗಳು ಇರುವ ನಿರ್ದಿಷ್ಟ ಮಾರ್ಗದಲ್ಲಿ ಬಸ್ ನ್ನು ಓಡಿಸುವುದು.

ಫೀಡರ್ ಬಸ್‌ಗಳು ಚಲಿಸಬಹುದಾದ ನಿರ್ದಿಷ್ಟ ನಿಲ್ದಾಣಗಳನ್ನು ಗುರುತಿಸಲು, ಉದ್ಯೋಗಿಗಳಿಗೆ ಗರಿಷ್ಠ ಪ್ರಯೋಜನವನ್ನು ನೀಡಲು BMRCL ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಜೊತೆಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com