ನಾಳೆ ಕರ್ನಾಟಕ ಬಂದ್: ಜನಜೀವನ ಮೇಲೆ ಪರಿಣಾಮ ಸಾಧ್ಯತೆ; ಯಾವ ಸೇವೆ ಲಭ್ಯ, ಯಾವುದು ಅಲಭ್ಯ?

ರಾಜ್ಯದಲ್ಲಿ ಈ ವರ್ಷ ಬರಗಾಲ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ನಾಳೆ ಸೆಪ್ಟೆಂಬರ್ 29 ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್‌ ಕರೆಗೆ ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಬರಗಾಲ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ನಾಳೆ ಸೆಪ್ಟೆಂಬರ್ 29 ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 

ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್‌ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದೆ ಬಂದು ಬೆಂಬಲ ಸೂಚಿಸಿವೆ. ರಾಜ್ಯದ ನಾನಾ ಭಾಗಗಳಲ್ಲಿರುವ ಸ್ಥಳೀಯ ಸಂಘಟನೆಗಳು ಕೂಡಾ ಕೈಜೋಡಿಸಿವೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿವೆ. 

ಜನಜೀವನ ಅಸ್ತವ್ಯಸ್ತ ಸಾಧ್ಯತೆ: ಕರ್ನಾಟಕ ಬಂದ್ ನಿಂದ ವಿಶೇಷವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

ನಗರದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಎಲ್ಲ ವರ್ಗದ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ರಾಜ್ಯದ ಹೆದ್ದಾರಿಗಳು, ಟೋಲ್ ಗೇಟ್‌ಗಳು, ರೈಲು ಸೇವೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಮುಚ್ಚಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಹ ಬಂದ್‌ಗೆ ಬೆಂಬಲ ನೀಡಿದ್ದು, ಕರ್ನಾಟಕದ ಹೋಟೆಲ್‌ಗಳು, ಆಟೋರಿಕ್ಷಾಗಳು ಬಂದ್‌ಗೆ ಬೆಂಬಲ ನೀಡಿವೆ.

ಆಟೋರಿಕ್ಷಾ ಚಾಲಕರ ಒಕ್ಕೂಟ ಮತ್ತು ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘ (OUDOA) ಬಂದ್‌ಗೆ ಬೆಂಬಲ ನೀಡುತ್ತಿದೆ. ನಾವು ನಾಳೆ ನಾಯಂಡಹಳ್ಳಿಯಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ನಡೆಸುತ್ತೇವೆ ಎಂದು ಅದರ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ. 

ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿದೆ.ಶುಕ್ರವಾರ ಇಡೀ ದಿನ ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳನ್ನು ಮುಚ್ಚಬೇಕೆ ಎಂಬುದರ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅವರು ಸಭೆ ನಡೆಸುತ್ತಿದ್ದರು.

ರಾಜ್ಯ ಸಾರಿಗೆ ಇಲಾಖೆಯು ತಮ್ಮ ಸೇವೆಗಳನ್ನು ಎಂದಿನಂತೆ ಮುಂದುವರಿಸಲು ರಾಜ್ಯ ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡಿದೆ. ಕರ್ನಾಟಕದ ಉತ್ತರ ಭಾಗದ ಬಳ್ಳಾರಿ, ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ದಾವಣಗೆರೆಯ ರೈತರು ಮತ್ತು ವರ್ತಕರು ಬಂದ್‌ಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಆದರೆ ಬಂದ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆ ಯಾವುವು? ನಾಳೆ ಯಾವ ಸೇವೆಗಳು ಲಭ್ಯ, ಯಾವುದು ಅಲಭ್ಯ ಎಂಬುದಕ್ಕೆ ಇಲ್ಲಿದೆ ವಿವರ:

ಕರ್ನಾಟಕ ಬಂದ್​ಗೆ ನೈತಿಕ ಬೆಂಬಲ ನೀಡಲು ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಬ್ದಾರಿಯನ್ನು ಆಯಾ ಆಡಳಿತ ಮಂಡಳಿ ತಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಶಾಲೆಗಳ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಮನವಿ ನೀಡಲಾಗಿದೆ ಎಂದು ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.

ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ. 

ಕಾವೇರಿ ವಿಚಾರವಾಗಿ ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಬಂದ್ ಬೆಂಬಲಿಸಿ ನಾಳೆ ಹೆದ್ದಾರಿ, ರೈಲು ತಡೆದು ಚಳವಳಿ ನಡೆಸಲಾಗುವುದು ಎಂದು ಮಂಡ್ಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹಾಗೂ ರೈಲು ತಡೆಗೆ ನಿರ್ಧಾರ ಮಾಡಲಾಗಿದೆ. 

ನಾಳೆ ಬೆಂಗಳೂರು ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ವಿಭಾಗದ ಆಯುಕ್ತರು ಕೆಂಗೇರಿಯಿಂದ ಚಲ್ಲಘಟ್ಟ ನಡುವೆ ಹೊಸ ಮಾರ್ಗ ಪರಿಶೀಲನೆ ನಡೆಸಲಿದ್ದು, ಈ ಹಿನ್ನಲೆ ನಾಳೆ ಕೆಂಗೇರಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸಂಚಾರವಿಲ್ಲ. ಆದರೆ, ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸೇವೆ ಲಭ್ಯವಿರಲಿದೆ.

ಮಂಡ್ಯ ಜಿಲ್ಲೆಯಲ್ಲಿ ಇಂದೂ ಕೂಡ ಕಾವೇರಿ ಹೋರಾಟ ಮುಂದುವರೆಯಲಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತ ರಕ್ಷಣಾ ಸಮಿತಿ ಇಂದಿನ ಕಾವೇರಿ ಹೋರಾಟಕ್ಕೆ ಹಲವು ಸಂಘಟನೆಗಳು ಸಾಥ್ ಕೂಡ ನೀಡಿದೆ. ಜೊತೆಗೆ ನಾಳೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ ಬಂದ್ ಪೂರ್ವಭಾವಿ ಸಂಬಂಧ ಚರ್ಚಿಸಲು ವಿವಿಧ ಸಂಘಟನೆಗಳು ಸಭೆ ನಡೆಸಲಿದೆ.

ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ನಾಳೆ ಬಂದ್​ಗೆ ಕರೆ ನೀಡಲಾಗಿದ್ದು, ಬಂದ್​ಗೆ ಬೆಂಗಳೂರಿನ ಬ್ರಿಗೇಡ್​ ರೋಡ್​ನ ವರ್ತಕರು ಬೆಂಬಲ ಸೂಚಿಸಿದ್ದೇವೆ ಎಂದು ಬ್ರಿಗೇಡ್ ರೋಡ್ ಅಸೋಸಿಯೇಷನ್ ಅಧ್ಯಕ್ಷ ಸುಹೀಲ್‌ ಮಾಹಿತಿ ನೀಡಿದ್ದಾರೆ.

ಬೆಂಬಲ ನೀಡಿದ ಸಂಘಟನೆಗಳು:

1.ಆದರ್ಶ ಆಟೋ ಚಾಲಕರ ಸಂಘ
2.ಓಲಾ ಉಬರ್ ಸಂಘ ,
3.ಡಾಕ್ಟರ್ ರಾಜ್ ಕುಮಾರ್ ಸೇನೆ ,
4.ಕನ್ನಡ ಜನ ಶಕ್ತಿ ಕೇಂದ್ರ ,
5.ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ
6.ಕರ್ನಾಟಕ ಜನ ಸೈನ್ಯ,
7.ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
8.ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ,
9.ಕುವೆಂಪು ಕಲಾನಿಕೇತನ,
10.ಕರ್ನಾಟಕ ಜನ ಪರ ವೇದಿಕೆ
11. ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ಸಂಘಟನೆ
12. ಕರುನಾಡ ರೈತ ಸಂಘ
13.ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟ
14.ಕರ್ನಾಟಕ ಕನ್ನಡ ಸೇವಾ ಸಂಘ
15. ಜನಹಿತ ಕರ್ನಾಟಕ ರಕ್ಷಣಾ ವೇದಿಕೆ
16. ಕರುನಾಡ ಸೇನೆ
17.ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ,
18.ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
19.ಕರ್ನಾಟಕ ರಕ್ಷಣಾ ವೇದಿಕೆ
20.ಅಖಿಲ ಕರ್ನಾಟಕ ರಾಜ್ ಕುಮಾರ್ ಅಭಿಮಾನಿಗಳ ಸಂಘ
21. ಕರವೇ ಶಿವರಾಮೇಗೌಡ ಬಣ,
22.ಕರವೇ ಪ್ರವೀಣ್ ಶೆಟ್ಟಿ ಬಣ
23.ಕನ್ನಡ ಸೇನೆ, ಕನ್ನಡ ಒಕ್ಕೂಟ
24.ಕನ್ನಡ ಜಾಗೃತಿ ವೇದಿಕೆ
25.ಲಾರಿ ಮಾಲೀಕರ ಸಂಘ
26.ಕರಾರ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ
27.ಕರ್ನಾಟಕ ವಿಚಾರ ವೇದಿಕೆ,
28.ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸಾಂಸ್ಕೃತಿಕ ಸಂಸ್ಥೆ
29.ಬೆಂಗಳೂರಿಗರು ನಾಗರಿಕರ ಕನ್ನಡ ವೇದಿಕೆ,
30.ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ
31.ಕನ್ನಡ ಪರ ಸಂಘಟನೆ
32.ಜನ ಶಕ್ತಿ ಕೇಂದ್ರ,
33.ಡಾಕ್ಟರ್ ರಾಜ್ ಕರ್ನಾಟಕ ಜನಪರ ವೇದಿಕೆ
34. ಕ. ಸಾ. ಪ ಬೆಂಗಳೂರು ನಗರ ಜಿಲ್ಲೆ
35. ದಂಡು ಪ್ರದೇಶ,
36.ಕೈಗಾರಿಕೆ ಒಕ್ಕೂಟ ಜಲಮಂಡಳಿ ಕನ್ನಡ ಸಂಘ
37.ಕಾಮತ್ ಹೋಟೇಲ್
38.ಕರ್ನಾಟಕ ನವನಿರ್ಮಾಣ ಸೇನ್,
39.ಜನಪರ ವೇದಿಕೆ ,
40.ಕರ್ನಾಟಕ ನವಶಕ್ತಿ
41.ಆಟೋ ಮಾಲೀಕರ ಸಂಘ,
42.ಮಾರುಕಟ್ಟೆ ಸಂಘ ,
43.ಕರ್ನಾಟಕ ರಕ್ಷಣಾ ಪಡೆ,
44.ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿ ಸಂಘ ,
45.ರಾಜ್ಯ ಒಕ್ಕಲಿಗರ ಒಕ್ಕೂಟ,
46.ಕನ್ನಡ ಚಳವಳಿ ವೇದಿಕೆ,
47.ಕನ್ನಡ ಕ್ರಿಯಾ ಸಮಿತಿ,
48.ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
49.ಕನ್ನಡ ನವಜ್ಯೋತಿ ಸಂಘ
50.ಕಸ್ತೂರಿ ಕನ್ನಡ ಬಳಗ
51.ಅನಕೃ ಕನ್ನಡ ಸಂಘ,
52.ಕನ್ನಡ ವೇದಿಕೆ ಮಹಿಳಾ ಘಟಕ ,
53.ಕರ್ನಾಟಕ ನೇಕಾರರ ಹಿತ ರಕ್ಷಣಾ ವೇದಿಕೆ ,
54.ಸರ್ವಜ್ಞ ಮಿತ್ರ ವ್ರಂದ ,
55.ಕರ್ನಾಟಕ ಕಹಳೆ ಸಮಿತಿ
56.ಕರುನಾಡ ಸೈನ್ಯ ಅಖಿಲ ಕರ್ನಾಟಕ ಪುನೀತ್ ರಾಜ್
57.ಕುಮಾರ್ ಅಭಿಮಾನಿಗಳ ಸಂಘ,
58.ಕನ್ನಡ ವೇದಿಕೆ ,
59.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ
60.ಕನ್ನಡ ಸಾಹಿತ್ಯ ಪರಿಷತ್
61.ವಿಶ್ವ ಮಾನವ ಕುವೆಂಪು ಕಲಾ ನಿಕೇತನ
62.ಕರ್ನಾಟಕ ರಕ್ಷಣಾ ವೇದಿಕೆ, ಕೊಪ್ಪಳ
63.ಕರುನಾಡ ರೈತ ಕಾರ್ಮಿಕರ ರಕ್ಷಣಾ ವೇದಿಕೆ,
64.ಅಖಂಡ ಕರ್ನಾಟಕ ಜನ ಜಾಗೃತಿ ವೇದಿಕೆ,
65.ಅಖಿಲ ಕರ್ನಾಟಕ ರಾಜ್ಯ ಕನ್ನಡಾಂಬೆ ಹಿತರಕ್ಷಣಾ ವೇದಿಕೆ,
66.ಕರ್ನಾಟಕ ಕಾರ್ಮಿಕರು ನಾಗರಿಕರ ವೇದಿಕೆ ,
67.ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
68.ಕನ್ನಡ ಸಂಘಟನೆಗಳ ಒಕ್ಕೂಟ,
69.ಕನ್ನಡ ಕೈಗಾರಿಕಾ ಒಕ್ಕೂಟ ಸಂಘ ಕನ್ನಡ ಸಂಘ,
70.ಕನ್ನಡ ಪ್ರಗತಿಪರ ಹೋರಾಟಗಾರ ಒಕ್ಕೂಟ,
71. ಕರ್ನಾಟಕ ಜನ ಸೈನ್ಯ,
72.ಕನ್ನಡ ಪಕ್ಷ ದೊಡ್ಡ ಬಳ್ಳಾಪುರ
73ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ
74.ವಾಟಾಳ್ ಕನ್ನಡ ಶಕ್ತಿ,
75.ಕರ್ನಾಟಕ ವಿಷ್ಣು ಸೇನೆ,
76.ಕನ್ನಡ ಸಂಘಟನೆಗಳ ಒಕ್ಕೂಟ,
77.ಕರ್ನಾಟಕ ಸ್ವಾಭಿಮಾನಿ ವೇದಿಕೆ,
78.ಕನ್ನಡ ಒಕ್ಕೂಟ,
79.ಜೈ ಕರುನಾಡ ವೇದಿಕೆ,
80.ಕರುನಾಡ ಸಂರಕ್ಷಣಾ ವೇದಿಕೆ
81.ಕಸ್ತೂರಿ ಕನ್ನಡ ಜನ ಪರ ವೇದಿಕೆ
82.ಕರುನಾಡ ಸೇವಕರು,
83.ನರಸಿಂಹ ಪಡೆ,
84.ವಿಶ್ವ ವಿಜಯ ಕನ್ನಡ ವೇದಿಕೆ,
85.ಸಂಗೊಳ್ಳಿ ರಾಯಣ್ಣ ಯುವ ಸೇನೆ,
86.ಕರ್ನಾಟಕ ಜಾಗೃತಿ ಸಮಿತಿ
87.ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಸಂಘ
88. ವಿಶ್ವ ಕನ್ನಡ ಸಾಮ್ರಾಜ್ಯ

ಬೆಂಬಲ ನೀಡದ ಸಂಘಟನೆಗಳು: 
ಕಬ್ಬು ಬೆಳೆಗಾರರ ಸಮಿತಿ
ಕರವೇ ನಾರಾಯಣ ಗೌಡರ ಬಣ

ನೈತಿಕ ಬೆಂಬಲ ನೀಡುತ್ತಿರುವ ಸಂಘಟನೆಗಳು
ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಸಂಘ
ಖಾಸಗಿ ಸಾರಿಗೆ ಸಂಘಟನೆ
ಬಿಬಿಎಂಪಿ ನೌಕರರ ಸಂಘ
ಶಾಲಾ ಸಂಘಟನೆಗಳಾದ ರುಪ್ಸ, ಕ್ಯಾಮ್ಸ್
ಬಾರ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ 

ರಾಜ್ಯ ವಿದ್ಯಾರ್ಥಿಗಳ ಪೋಷಕ ಸಂಘಟನೆ ಒಕ್ಕೂಟ, ಜಲ ಸಂರಕ್ಷಣಾ ಸಮಿತಿ, ಹೋಟೆಲ್ ಅಸೋಸಿಯೇಶನ್ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

ಯಾವ ಸೇವೆಗಳು ಲಭ್ಯ?: ಅಗತ್ಯ ಸೇವೆಗಳಾದ ಮೆಡಿಕಲ್, ಆಸ್ಪತ್ರೆ, ಆಂಬ್ಯುಲೆನ್ಸ್, ಹಾಲಿನ ಬೂತ್ ಗಳು ನಾಳೆ ಎಂದಿನಂತೆ ತೆರೆದಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com